Friday , April 3 2020
Breaking News
Home / ಇಸ್ಲಾಮಿಕ್ ಲೇಖನಗಳು

ಇಸ್ಲಾಮಿಕ್ ಲೇಖನಗಳು

ಸಫರ್‌ ತಿಂಗಳು ಮತ್ತು ಅಪಶಕುನದ ಬುಧವಾರ (ಒಡುಕ್ಕತ್ತೆ ಪದನಾಸೆ)!

ಅರಬಿ ಕ್ಯಾಲೆಂಡರಿನ ಸಫರ್‌ ತಿಂಗಳ ಕೊನೆಯ ಬುಧವಾರ ಅಪಶಕುನ (ಒಡುಕ್ಕತ್ತೆ ಪದನಾಸೆ) ಎಂದು ನಂಬುವ ಮತ್ತು ಅದು ಪ್ರವಾದಿವರ್ಯರಿಗೆ(ಸ) ಕಠಿಣ ಜ್ವರ ಬಂದ ದಿನವೆಂಬ ನೆಪದಲ್ಲಿ ಅಂದು ಕೆಲವು ಪ್ರತ್ಯೇಕ ಅನಾಚಾರಗಳನ್ನು ಆಚರಿಸುವ ಮುಸ್ಲಿಮರಿದ್ದಾರೆ. ಅಪಶಕುನವನ್ನು ಓಡಿಸುವ ಬಹಳ ವಿಚಿತ್ರ ಚಿಕಿತ್ಸೆಯನ್ನೂ ಪುರೋಹಿತರೇ ಕಲಿಸಿ ಕೊಟ್ಟಿದ್ದಾರೆ. ನಾವೆಲ್ಲ ಮದ್ರಸದಲ್ಲಿ ಕಲಿಯುತ್ತಿದ್ದಾಗ, ಪ್ರವಾದಿವರ್ಯ(ಸ)ರಿಗೆ ಜ್ವರ ಬಂದ ದಿನವೆಂಬ ನೆಪದಲ್ಲಿ “ಒಡುಕ್ಕತ್ತೆ ಪದನಾಸೆ” (ಸಫರ್‌ ತಿಂಗಳ ಕೊನೆಯ ಬುಧವಾರ) ಎಂಬೊಂದು ಅನಾಚಾರವಿತ್ತು. ಅಂದು …

Read More »

ಇಸ್ಲಾಮಿನಲ್ಲಿ ಮೊಹರ್ರಂ ತಿಂಗಳ ವಿಶೇಷತೆ

ಸಂದೇಶ ಇ-ಮ್ಯಾಗಝಿನ್: ಅಲ್ಲಾಹನು ಮೊಹರಂ ತಿಂಗಳನ್ನು ಒಂದು ದೊಡ್ಡ ಅನುಗ್ರಹದ ತಿಂಗಳಾಗಿ ಮಾಡಿದ್ದಾನೆ. ಇದು ಹಿಜ್ರಿ ವರ್ಷದ ಮೊದಲ ತಿಂಗಳು ಮತ್ತು ಅಲ್ಲಾಹನು ಹೇಳುವ ಪವಿತ್ರ ತಿಂಗಳುಗಳಲ್ಲಿ ಒಂದಾಗಿದೆ. “ನಿಸ್ಸಂಶಯವಾಗಿ, ಅಲ್ಲಾಹನು ಸೃಷ್ಟಿಸಿದ ತಿಂಗಳುಗಳ ಸಂಖ್ಯೆ ಹನ್ನೆರಡು (ಒಂದು ವರ್ಷದಲ್ಲಿ), ಅಲ್ಲಾಹನು ಆಕಾಶ ಮತ್ತು ಭೂಮಿಯನ್ನು ಸೃಷ್ಟಿಸಿದ ದಿನದಂದು ಅದನ್ನು ವಿಧಿಸಿದನು; ಅವುಗಳಲ್ಲಿ ನಾಲ್ಕು ಪವಿತ್ರ, (ಅಂದರೆ ಇಸ್ಲಾಮಿಕ್ ಕ್ಯಾಲೆಂಡರ್‌ನ 1, 7, 11 ಮತ್ತು 12 ನೇ ತಿಂಗಳುಗಳು). …

Read More »

ಈ 6 ವಿಭಾಗದ ಜನರ ಪ್ರಾರ್ಥನೆಗಳನ್ನು ಅಲ್ಲಾಹನು ನಿರಾಕರಿಸಲಾರ ಎಂದು ಹದೀಸ್‌ಗಳಲ್ಲಿ ಬಂದಿದೆ

ಸರ್ವಶಕ್ತನಾದ ಅಲ್ಲಾಹನೊಂದಿಗೆ ದುವಾ ಮಾಡಲು ಅಂಗಶುದ್ಧಿಯ ಅಗತ್ಯವಿಲ್ಲ ಎಂದು ಹೆಚ್ಚಿನ ಧಾರ್ಮಿಕ ವಿದ್ವಾಂಸರು ಹೇಳಿದ್ದಾರೆ. ಆದರೆ ಅತ್ಯಂತ ಮುಖ್ಯವಾದ ವಿಷಯವೆಂದರೆ ಹೃದಯದ ಶುದ್ಧತೆ ಮತ್ತು ಪದಗಳಲ್ಲಿನ ಪ್ರಾಮಾಣಿಕತೆ ಪ್ರಾರ್ಥನೆಗೆ ಅತೀ ಮುಖ್ಯವಾಗಿದೆ. ಪ್ರವಾದಿ ಮುಹಮ್ಮದ್ (ಸ) ಅವರು ಹೇಳುವ ಪ್ರಕಾರ ಒಬ್ಬ ಮುಸ್ಲಿಂ ಅವನು ಪಾಪ ಅಥವಾ ರಕ್ತಸಂಬಂಧದ ಸಂಬಂಧಗಳನ್ನು ಮುರಿಯುವಂತಹ ಯಾವುದನ್ನಾದರೂ ಪ್ರಾರ್ಥಿಸುವವರೆಗೆ ಆತ ತನ್ನ ಸೃಷ್ಟಿಕರ್ತನಾದ ಅಲ್ಲಾಹನೊಂದಿಗೆ ದುವಾ(ಪ್ರಾರ್ಥನೆ) ಮಾಡಿದಾಗಲೆಲ್ಲಾ, ಅವನು (ಅಲ್ಲಾಹನು) ತನ್ನ ದಾಸನ ಪ್ರಾರ್ಥನೆಯನ್ನು …

Read More »

ಉತ್ತಮ ಸಮುದಾಯದ ಈದ್ (ಸಹಾಬಿಗಳ ಮಾದರಿ)

ಇಸ್ಲಾಂ ಜೀವನದ ಪರಮ ಗುರಿಯನ್ನು ತಝ್ಕಿಯ ಎಂದಿದೆ. ಹೀಗೆ ಜೀವನದ ಸಕಲ ರಂಗ ಪಾವನವಾಗಿರಬೇಕು. ಇದುವೇ ಧರ್ಮದ ಉದ್ದೇಶ ಮತ್ತು ಸಾರವಾಗಿದೆ. ಇಸ್ಲಾಮ್ ತನ್ನ ಈ ತತ್ವವನ್ನು ಹಬ್ಬದಲ್ಲಿಯೂ ಕೇಂದ್ರೀಕರಿಸಿದೆ. ಪ್ರವಾದಿಯವರ(ಸ) ಪ್ರವಾದಿತ್ವಕ್ಕಿಂತ ಮುಂಚೆ ಅರೇಬಿಯಾದಲ್ಲಿ ಬಹಳಷ್ಟು ಹಬ್ಬಗಳನ್ನು ಆಚರಿಸಲಾಗುತ್ತಿತ್ತು. ಅಂತಹ ಹಬ್ಬಗಳನ್ನೂ `ಈದ್’ ಎಂದೇ ಕರೆಯಲಾಗುತ್ತಿತ್ತು. ಬಹಳಷ್ಟು ಹಬ್ಬಗಳನ್ನು ಯಹೂದಿ, ಕ್ರೈಸ್ತರೂ ಆಚರಿಸುತ್ತಿದ್ದರು. ಅವುಗಳನ್ನು `ಈದ್’ ಎಂದೇ ಕರೆಯಲಾಗುತ್ತಿತ್ತು. ತಕ್ಬೀರ್ ಹೇಳುವುದು: ಈದುಲ್ ಫಿತ್ರ್‍ನ ಈ ಹಬ್ಬದಲ್ಲಿ ಅಲ್ಲಾಹನ …

Read More »

ನಾನೆಂದಿಗೂ ಅನ್ಯಪುರುಷರನ್ನು ನೋಡಿಲ್ಲ-ಪ್ರವಾದಿ ಪುತ್ರಿಯ ಅಂತಿಮ ಇಚ್ಛೆ

ಪ್ರವಾದಿ ಮುಹಮ್ಮದ್(ಸ.ಅ)ರವರ ಪ್ರೀತಿಯ ಮಗಳು ಹಾಗೂ ಹಝ್ರತ್ ಅಲಿ(ರ.ಅ)ರವರ ಪ್ರೀತಿಯ ಮಡದಿಯಾಗಿದ್ದಾರೆ ಪ್ರಪಂಚದ ಸರ್ವ ಸ್ರೀಯರಿಗೂ ಮಾದರಿಯಾದ ಮಹಿಳಾಮಣಿ ಫಾತಿಮಾ ಬೀವಿ(ರ.ಅ). ದಿನನಿತ್ಯ ಬೆಳಿಗ್ಗೆ ಸೂರ್ಯೋದಯಕ್ಕಿಂತ ಮುಂಚಿತವಾಗಿ ಎದ್ದು ನಮಾಝ್ ನಿರ್ವಹಿಸಿ ಕುರಾನ್ ಪಾರಾಯಣ ಮಾಡಿದ ತರುವಾಯ ಪತಿ ಅಲಿ(ರ.ಅ) ಹಾಗು ಎಳೆಯ ಮಕ್ಕಳಾದ ಹಸನ್ ಹುಸೈನ್ ರವರಿಗೆ ತಿಂಡಿ ಮಾಡಿ ಬಳಸಿದ ನಂತರ ಬಿಸಿ ನೀರು ಕಾಯಿಸಿ ಮಕ್ಕಳನ್ನು ಸ್ನಾನ ಮಾಡಿಸುವುದು ವಾಡಿಕೆಯಾಗಿತ್ತು. ಪ್ರತಿ ದಿನದಂತೆ ಆ ದಿನ …

Read More »

‘ಯಾತ್ರಿಕನಂತೆ ಜೀವಿಸು’ ಪ್ರವಾದಿ ವಚನದ ವ್ಯಾಖ್ಯಾನ

ಲೌಕಿಕ ಜೀವನದ ವಾಸ್ತವಿಕತೆ ಮತ್ತು ಅದರ ಅವಸ್ಥೆಯನ್ನು ಬಹಳ ಸ್ಪಷ್ಟವಾಗಿ ಚಿತ್ರೀಕರಿಸುತ್ತಾ ಆ ವಾಸ್ತವಿಕತೆಯನ್ನು ಒಳಗೊಂಡು ಜೀವಿಸಲು ಇದೊಂದು ವಚನದ ಮೂಲಕ ಪ್ರವಾದಿ (ಸ.ಅ)ರು ನಮಗೆ ಕಲಿಸಿದ್ದಾರೆ. “ಇಬ್ನು ಉಮರ್ (ರ)ವರದಿ ಮಾಡುತ್ತಾರೆ; ”ಪ್ರವಾದಿ (ಸ.ಅ) ನನ್ನ ಹೆಗಲ ಮೇಲೆ ಕೈ ಇರಿಸಿ ಈ ರೀತಿ ಉಪದೇಶಿಸಿದರು;  “ನೀನು ಇಹಲೋಕದಲ್ಲಿ ಓರ್ವ ವಿದೇಶಿಯಂತೆ ಅಥವಾ ಓರ್ವ ಪ್ರಯಾಣಿಕನಂತೆ ಬದುಕಬೇಕು .” (ಬುಖಾರಿ). ಈ ಉಪದೇಶವನ್ನು ನನ್ನ ಹೆಗಲನ್ನು ಹಿಡಿದು ವಿಶೇಷವಾಗಿ …

Read More »

ಎಲ್ಲವೂ ವಿಧಿಯಲ್ಲಿ ಬರೆದಿರುವಾಗ ನಾವ್ಯಾಕೆ ದುವಾಃ ಮಾಡಬೇಕು?

ಕೆಲವೊಮ್ಮೆ ನಮ್ಮ ಸಹೋದರರಿಗೆ ಒಂದು ವಿಷಯದಲ್ಲಿ ಸಂಶಯವಾಗುವುದುಂಟು. ಎಲ್ಲಾ ವಿಷಯವನ್ನು ಅಲ್ಲಾಹನು ತಕ್‍ದೀರ್(ವಿಧಿ) ನಲ್ಲಿ ಬರೆದಿರುವಾಗ ನಾವ್ಯಾಕೆ ದುವಾಃ ಮಾಡಬೇಕು? ಈ ಪ್ರಶ್ನೆಯು ಮನಸ್ಸಿನಲ್ಲಿ ಬರುವುದು ಸಹಜವೂ ಕೂಡ. 1) ತಕ್‍ದೀರ್‍ನಲ್ಲಿ ಎಲ್ಲವೂ ಬರೆಯಲ್ಪಟ್ಟಿದೆ ಅಂದರೆ, ಅಲ್ಲಾಹನಿಗೆ ಆ ವಿಷಯಗಳ ಅರಿವು ಇದೆ, ವಿಧಿ ಲಿಖಿತವು ಅಲ್ಲಾಹನ ಅರಿವಿನಲ್ಲಿದೆ  ಎಂದು ಇದರರ್ಥ. ಉದಾಹರಣೆಗೆ ಒಬ್ಬ ವ್ಯಕ್ತಿಯು ತನ್ನ ಅಂಗಡಿಗೆ ಬರುವ ಸಮಯದ ಬಗ್ಗೆ ನನಗೆ ಅರಿವಿದೆ. ಅವನು ಕ್ಲಪ್ತ ಸಮಯದಲ್ಲಿ …

Read More »

ಮಗು ಜನಿಸಿದಾಗ ಅನುಸರಿಸಬೇಕಾದ 7 ಪ್ರವಾದಿ ಚರ್ಯೆಗಳು

ಸಂದೇಶ ಇ-ಮ್ಯಾಗಝಿನ್: ಮಕ್ಕಳ ಜನನವೆಂಬುದು ಇಡೀ ಕುಟುಂಬಕ್ಕೇ ಸಂತೋಷದ ವಿಚಾರವಾಗಿದೆ. ಮಗು ಜನಿಸುವುದರೊಂದಿಗೆ ತಂದೆ ತಾಯಿಗೆ ಸಂತೋಷದ ಮಹಾ ಸಾಗರವನ್ನೇ ಹೊತ್ತು ತರುತ್ತದೆ. ಮುಸ್ಲಿಮ್ ಕುಟುಂಬದಲ್ಲಿ ಒಂದು ಮಗು ಜನಿಸಿದರೆ ಅನುಸರಿಸಬೇಕಾದ ಕೆಲವು ಪ್ರವಾದಿ ಚರ್ಯೆಗಳಿವೆ. ಆದರೆ ಹೊಸ ತಲೆ ಮಾರಿನಲ್ಲಿ ಕೆಲವು ಕಡೆ ಈ ಪ್ರವಾದಿ ಚರ್ಯೆಗಳನ್ನು ಅವಗಣಿಸಲಾಗುತ್ತದೆ ಎಂಬುದು ಖೇದಕರ. ಈ ಒಂದು ಸಣ್ಣ ಲೇಖನದಲ್ಲಿ ಆ ಎಲ್ಲಾ ಪ್ರವಾದಿ ಚರ್ಯೆಗಳನ್ನು ನಿಮ್ಮ ಮುಂದೆ ಪ್ರಸ್ತುತಪಡಿಸುತ್ತಿದ್ದೇನೆ. 1. …

Read More »

ಮಗುವಾಗಿರುವಾಗ ತೊಟ್ಟಿಲಲ್ಲಿ ಮಾತನಾಡಿದ ಆ ಮೂವರು

ಅಬೂ ಹುರೈರಾ (ರ)ರವರಿಂದ ವರದಿ. ಪ್ರವಾದಿ (ಸ.ಅ) ರು ಹೇಳಿದರು; ತೊಟ್ಟಿಲಲ್ಲಿ ಈ ಮೂವರಲ್ಲದೆ ಬೇರೆ ಯಾರು ಮಾತಾಡಿಲ್ಲ. (ಮೊದಲನೆಯವರು) ಈಸ ನಬಿ(ಅ). (ಎರಡನೆಯವರು ) ಬನೀ ಇಸ್ರಾಯಿಲರಲ್ಲಿ ಜುರೈಜ್ ಎಂಬುವರಿದ್ದರು. ಅವರು ನಮಾಝ್ ನಿರ್ವಹಿಸುತ್ತಿರುವಾಗ ಅವರ ತಾಯಿ ಅವರನ್ನು ಕರೆದರು. (ಅವರು ತನ್ನೊಂದಿಗೆ ಹೇಳಿಕೊಂಡರು) ನಾನು ನಮಾಝನ್ನು ಮಂದುವರಿಸಲೇ ಅಥವಾ ಅವರಿಗೆ ಉತ್ತರಿಸಲೇ? (ಅವರು ನಮಾಝ್ ನಿರ್ವಹಿಸತೊಡಗಿದರು.) ತಾಯಿಗೆ ಉತ್ತರಿಸಲಿಲ್ಲ. ಅವರ ತಾಯಿ ಹೇಳಿದರು: ಓ ಅಲ್ಲಾಹ್ ಇವನು …

Read More »

ಜುಮಾ ದಿವಸ ಸಾಮಾನ್ಯವಾಗಿ ನಾವೆಲ್ಲರೂ ಮಾಡಲು ಸಾಧ್ಯವಿರುವ 5 ತಪ್ಪುಗಳು

ಮುಸ್ಲಿಮರಿಗೆ ಜುಮುಅ ದಿವಸ ಅಂದರೆ ಶುಕ್ರವಾರ ಇತರ ಸಾಮಾನ್ಯ ದಿವಸಗಳಂತಲ್ಲ, ಜುಮುಅ ದಿನದಂದು ಬೆಳಗ್ಗೆ ಯಿಂದಲೇ ತಯಾರಿ ಮಾಡಿ ಮಸೀದಿಗೆ ಹೊರಡುವವರಿದ್ದಾರೆ. ಹೊರಡಬೇಕು ಕೂಡ. ಇನ್ನು ಕೆಲವರು ಆವತ್ತಿನ ದಿನ ಕೆಲಸಕ್ಕೆ ರಜೆ ಹಾಕಿ ಮಸೀದಿಗೆ ಹೋಗಲು ಸಿದ್ಧವಾಗುತ್ತಾರೆ. ಜುಮುಅ ನಮಾಝ್ ಎಂಬುದು ಪ್ರಾಯಕ್ಕೆ ಬಂದಿರುವ ಪ್ರತಿಯೊಬ್ಬ ಪುರುಷರ ಮೇಲೆ ನಿರ್ಬಂಧವಾಗಿದೆ. ಮಹಿಳೆಯರಿಗೆ ಈ ನಮಾಝ್ ನಿರ್ಬಂಧವಿಲ್ಲ. ಅವರು ಝುಹರ್ ನಮಾಝ್ ನಿರ್ವಹಿಸಿದರೆ ಸಾಕು. ಆದರೆ ಜುಮುಅ ನಮಾಝ್ ಮಹಿಳೆಯರು …

Read More »