Friday , April 3 2020
Breaking News
Home / ಅಂತಾರಾಷ್ಟ್ರೀಯ

ಅಂತಾರಾಷ್ಟ್ರೀಯ

ಲಂಡನ್: ಖಲೀಫಾರ ಕಾಲದ 1200 ವರ್ಷ ಹಳೆಯ ಬಂಗಾರದ ನಾಣ್ಯ ದಾಖಲೆ ಬೆಲೆಗೆ ಮಾರಾಟ

ಸಂದೇಶ ಮ್ಯಾಗಝಿನ್ (sandeshamagazine.in): ಉಮಯ್ಯಿದ್ ಖಿಲಾಫತ್ ನ ಕ್ರಿ.ಶ 723ರ ಕಾಲದ್ದೆನ್ನಲಾದ ಬಂಗಾರದ ದಿನಾರ್ ನಾಣ್ಯವೊಂದು ಲಂಡನ್ ನ ಹರಾಜು ಕೇಂದ್ರವಾದ ಮಾರ್ಟನ್ ಆಂಡ್ ಈಡನ್ ನಲ್ಲಿ ಮೊನ್ನೆ 3.7 ಮಿಲಿಯನ್ ಪೌಂಡ್ ಬೆಲೆಗೆ ಮಾರಾಟವಾಗಿದೆ. ಅಂದರೆ ನಮ್ಮ ಭಾರತದ ರೂಪಾಯಿ ಮೌಲ್ಯದಲ್ಲಿ ಹೇಳುವುದಾದರೆ ಸುಮಾರು 33.64 ಕೋಟಿ ರೂಪಾಯಿ ಮೌಲ್ಯಕ್ಕೆ ಈ ಚಿನ್ನದ ದಿನಾರ್ ನಾಣ್ಯ ಹರಾಜಾಗಿದೆ. ಜಗತ್ತಿನಲ್ಲಿ ಇಂತಹ 12 ಬಂಗಾರದ ದಿನಾರ್ ಮಾತ್ರ ಲಭ್ಯವಿದೆ ಎನ್ನಲಾಗಿದೆ. …

Read More »

ಆಗಸ್ಟ್ 1ರಿಂದ ಈ ಯುರೋಪಿಯನ್ ರಾಷ್ಟ್ರ ನಿಖಾಬ್‌ಗೆ ನಿಷೇಧ ಹೇರಳಿದೆ

ಸಂದೇಶ ಇ-ಮ್ಯಾಗಝಿನ್: ಯುರೋಪಿಯನ್ ರಾಷ್ಟ್ರವಾದ ನೆದರ್‌ಲ್ಯಾಂಡ್ ಈ ವರ್ಷದ ಆಗಸ್ಟ್‌ನಿಂದ ನಿಖಾಬ್‌ಗೆ ನಿಷೇಧ ಹೇರಲು ಸಜ್ಜಾಗಿದೆ. ಅಧಿಕೃತವಾಗಿ ‘ಭಾಗಶಃ ನಿಷೇಧದ ಮುಖದ ಉಡುಪು ಕಾಯ್ದೆ’ ಎಂದು ಕರೆಯಲ್ಪಡುವ ಈ ನಿಷೇಧವು ಆಗಸ್ಟ್ 1 ರಿಂದ ಜಾರಿಗೆ ಬರಲಿದೆ. ಶಾಲೆಗಳಲ್ಲಿ, ಸಾರ್ವಜನಿಕ ಸಾರಿಗೆಯಲ್ಲಿ, ಆಸ್ಪತ್ರೆಗಳಲ್ಲಿ ಮತ್ತು ಸಾರ್ವಜನಿಕ ಕಟ್ಟಡಗಳಲ್ಲಿ ಈ ಕಾನೂನು ಅನ್ವಯವಾಗಲಿದೆ. ಈ ಕಾನೂನು ಜಾರಿಯಾದ ನಂತರ ಸಾರ್ವಜನಿಕ ಕಟ್ಟಡಗಳಲ್ಲಿ ಅಧಿಕಾರಿಗಳು ಮತ್ತು ಸಾರ್ವಜನಿಕ ಸಾರಿಗೆ ನಿರ್ವಾಹಕರು ತಮ್ಮ ಮುಖಗಳನ್ನು …

Read More »

ಟ್ರಂಪ್ ವಿರುದ್ಧ ಮಿಶೆಲ್ ಒಬಾಮಾ ವಾಗ್ದಾಳಿ: ಅಮೇರಿಕಾ ನಿನ್ನೊಬ್ಬನದ್ದಲ್ಲ

ಸಂದೇಶ ಇ-ಮ್ಯಾಗಝಿನ್: ಅಮೇರಿಕಾದ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಹಿಳೆಯರ ಕುರಿತಾದ ವಿವಾದಾತ್ಮಕ ಹೇಳಿಕೆಗೆ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಅವರ ಪತ್ನಿ ಮಿಚೆಲ್ ಒಬಾಮ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಅಧ್ಯಕ್ಷ ಟ್ರಂಪ್ ಡೆಮಾಕ್ರಟಿಕ್ ಪಕ್ಷದ ನಾಲ್ಕು ಕಾಂಗ್ರೆಸ್ ಮಹಿಳೆಯರ ಬಗ್ಗೆ ಅಮೆರಿಕದಲ್ಲಿ ನೀವು ಸಂತೋಷವಾಗಿಲ್ಲದಿದ್ದರೆ ತಮ್ಮ ದೇಶಗಳಿಗೆ ಮರಳಬೇಕು. ಇಲ್ಲಿ ಇರುವುದು ಬೇಡ ಎಂದಿದ್ದರು. ಈ ಕುರಿತು ಮಿಚೆಲ್ ಒಬಾಮಾ, “ನಮ್ಮ ದೇಶವನ್ನು ನಿಜವಾಗಿಯೂ ಶ್ರೇಷ್ಠವನ್ನಾಗಿ ಮಾಡುವುದು ಅದರ …

Read More »

ಸೌದಿ ರಾಜಕುಮಾರಿಯ ವಿರುದ್ಧ ಫ್ರಾನ್ಸ್ ನಲ್ಲಿ ಮೊಕದ್ದಮೆ-ಕಾರಣವೇನು ನೋಡಿ

ಸಂದೇಶ ಇ-ಮ್ಯಾಗಝಿನ್: ಸೌದಿ ಅರೇಬಿಯಾದ ದೊರೆ ಸಲ್ಮಾನ್ ಅವರ ಏಕೈಕ ಪುತ್ರಿ ರಾಜಕುಮಾರಿ ಹಸ್ಸಾ ಬಿಂತ್ ಸಲ್ಮಾನ್ ಅವರ ವಿರುದ್ಧ ಮಂಗಳವಾರ ಪ್ಯಾರಿನ್ ನಲ್ಲಿ ಮೊಕದ್ದಮೆ ಹೂಡಲಾಗಿದೆ. ಈ ಮೊಕದ್ದಮೆಯ ವಿಚಾರಣೆಯನ್ನು ಹಸ್ಸಾರ ಅನುಪಸ್ಥಿತಿಯಲ್ಲಿ ಪ್ರಾರಂಭಿಸಲಾಗಿದೆ ಎಂದು ವರದಿಯಾಗಿದೆ. ಅವರ ವಿರುದ್ಧ ಪ್ಯಾರಿಸ್‌ನ ಸೌದಿ ರಾಜಮನೆತನದ ಅಪಾರ್ಟ್‌ಮೆಂಟ್‌ನಲ್ಲಿ ಫೋಟೋ ಮತ್ತು ವಿಡಿಯೋ ತೆಗೆದ ಕಾರಣಕ್ಕಾಗಿ ಪ್ಲಂಬರ್ ಒಬ್ಬರಿಗೆ ತನ್ನ ಅಂಗರಕ್ಷಕರಿಂದ ಥಳಿಸಿದ್ದಾರೆ ಎಂಡೂ ಆರೋಪಿಸಲಾಗಿದೆ. ಸೆಪ್ಟೆಂಬರ್ 2016 ರಲ್ಲಿ ಈ …

Read More »

ಭದ್ರತಾ ಕಾರಣಗಳಿಗಾಗಿ ಈ ಆಫ್ರಿಕನ್ ಮುಸ್ಲಿಮ್ ರಾಷ್ಟ್ರ ನಿಖಾಬ್ ನಿಷೇಧಿಸಿದೆ

ಸಂದೇಶ ಇ-ಮ್ಯಾಗಝಿನ್: ಉತ್ತರ ಆಫ್ರಿಕಾದ ದೇಶ ಟುನೀಶಿಯಾದಲ್ಲಿ ಬಾಂಬ್ ದಾಳಿಯ ನಂತರ ಇದೀಗ ಭದ್ರತಾ ಕಾಳಜಿಗಳನ್ನು ಉಲ್ಲೇಖಿಸಿ ಪ್ರಧಾನ ಮಂತ್ರಿ ಸರ್ಕಾರಿ ಕಚೇರಿಗಳಲ್ಲಿ ಮಹಿಳೆಯರಿಗೆ ನಿಕಾಬ್ ಮತ್ತು ಮುಖದ ಹೊದಿಕೆಯನ್ನು ನಿಷೇಧಿಸಿದ್ದಾರೆ. ಪ್ರಧಾನ ಮಂತ್ರಿ ಯೂಸೆಫ್ ಚಾಹೇದ್ ಅವರು ಸರ್ಕಾರದ ಸುತ್ತೋಲೆಗೆ ಸಹಿ ಹಾಕಿದ್ದು, ಸುತ್ತೋಲೆಯಲ್ಲಿ “ಸರಕಾರಿ ಕಚೇರಿ ಹಾಗೂ ಸಂಸ್ಥೆಗಳಲ್ಲಿ ಭದ್ರತಾ ಕಾರಣಗಳಿಗಾಗಿ ಮುಖ ಮುಚ್ಚಿದ ಯಾರಿಗಾದರೂ ಪ್ರವೇಶವನ್ನು ನಿಷೇಧಿಸಲಾಗಿದೆ” ಎಂದು ಉಲ್ಲೇಖಿಸಲಾಗಿದೆ. ಜೂನ್ 27 ರಂದು ಟುನಿಸ್‌ನಲ್ಲಿ …

Read More »

ಝಾಕಿರ್ ನಾಯ್ಕ್ ಹಸ್ತಾಂತರ ವಿಚಾರ: ಮಲೇಷ್ಯಾ ವಿದೇಶಾಂಗ ಮಂತ್ರಿಯ ಮಹತ್ವದ ಹೇಳಿಕೆ

ಸಂದೇಶ ಇ-ಮ್ಯಾಗಝಿನ್: ಮಲೆಷ್ಯಾದ ವಿದೇಶಾಂಗ ಸಚಿವ ದಾತುಕ್ ಸೈಫುದ್ದೀನ್ ಅಬ್ದುಲ್ಲಾ ಅವರು ಇಸ್ಲಾಮಿಕ್ ಪ್ರಭೋಧಕ ದಾ. ಝಾಕಿರ್ ನಾಯ್ಕ್ ಅವರನ್ನು ಹಸ್ತಾಂತರಿಸಲು ಭಾರತ ಮಾಡಿರುವ ಮನವಿಯ ಬಗ್ಗೆ ಹೇಳಿಕೆ ನೀಡಿದ್ದಾರೆ. ಭಾರತದ ಮನವಿಯ ಬಗ್ಗೆ ಉಲ್ಲೇಖಿಸಿದ ಮಲೆಷ್ಯಾ ವಿದೇಶಾಂಗ ಸಚಿವ ಡಾ. ಝಾಕಿರ್ ನಾಯ್ಕ್ ರನ್ನು ಗಡೀಪಾರು ವಿಚಾರದಲ್ಲಿ ಮಲೆಷ್ಯಾ ಸರಕಾರ ತನ್ನ ಹಿಂದಿನ ನಿರ್ಧಾರಕ್ಕೆ ಬದ್ಧವಾಗಿದ್ದು, ಸೌದಿ ಹಾಗೂ ಮಲೇಷ್ಯಾದ ಖಾಯಂ ನಿವಾಸಿತ್ವವನ್ನು ಹೊಂದಿರುವ ಭಾರತೀಯ ಮೂಲದ ಇಸ್ಲಾಮಿಕ್ …

Read More »

ತಾಳಲಾರದ ನೋವು, ತನ್ನ ಕೈಯನ್ನೇ ಕತ್ತರಿಸಲು ಮುಂದಾದ ಬಾಂಗ್ಲಾದ ‘ಟ್ರೀ ಮ್ಯಾನ್’

ಸಂದೇಶ ಇ-ಮ್ಯಾಗಝಿನ್: ಟ್ರೀ ಮ್ಯಾನ್ ಎಂದೇ ಹೆಸರುವಾಸಿಯಾಗಿರುವ ಬಾಂಗ್ಲಾದೇಶದ ಅಬುಲ್ ಬಜಂದರ್ ಮೇಲಿಂದ ಮೇಲೆ ಶಸ್ತ್ರಚಿಕಿತ್ಸೆಗೆ ಒಳಗಾಗಿಯೂ ಮತ್ತೂ ಕೂಡ ಎಗ್ಗಿಲ್ಲದೆ ತನ್ನ ಕೈಯಲ್ಲಿ ಬೆಳೆಯುತ್ತಿರುವ ಮರದ ರೀತಿಯ ಆಕಾರದಿಂದ ಬೇಸತ್ತಿರುವ ಬಜಂದರ್ ಇದೀಗ ತನ್ನ ಕೈಗಳನ್ನು ಕತ್ತರಿಸಲು ನಿರ್ಧರಿಸಿದ್ದಾರೆ. 2016 ರ ರಿಂದ ಬಜಂದರ್ ಅವರ ಕೈಗೆ ಸುಮಾರು 25 ಶಸ್ತ್ರಚಿಕಿತ್ಸೆಗಳು ನಡೆದಿದ್ದು ಯಾವುದೇ ಪ್ರಯೋಜನವಾಗಿಲ್ಲ, ‘ಎಪಿಡರ್ಮೋಡಿಸ್ಪ್ಲಾಸಿಯಾ ವರುಸಿಫಾರ್ಮಿಸ್’ ಎಂಬ ವಿಚಿತ್ರ ಕಾಯಿಲೆಯಿಂದ ಬಳಲುತ್ತಿರುವ 28 ವರ್ಷ ಪ್ರಾಯದ …

Read More »

ಈಜಿಪ್ಟ್ ಮಾಜಿ ಅಧ್ಯಕ್ಷ ಮೊಹಮ್ಮದ್ ಮೊರ್ಸಿ ನಿಧನ

ಸಂದೇಶ ಇ-ಮ್ಯಾಗಝಿನ್: ಈಜಿಪ್ಟಿನ ಮಾಜಿ ಅಧ್ಯಕ್ಷ ಮೊಹಮ್ಮದ್ ಮೊರ್ಸಿಯವರು ಸೋಮವಾರ ನಿಧನರಾಗಿದ್ದಾರೆ. ಸೋಮವಾರ ಕೋರ್ಟ್ ವಿಚಾರಣೆಗೆ ಹಾಜರಾಗಿದ್ದ ಮೊರ್ಸಿ ನ್ಯಾಯಾಧೀಶರ ಮುಂದೆ ಮಾತನಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಪ್ರಜ್ಞೆ ತಪ್ಪಿ ಕುಸಿದು ಬಿದ್ದರು. ಬಳಿಕ ಅವರನ್ನು ಕೈರೋದ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅಲ್ಲಿ ಅವರು ಮೃತಪಟ್ಟಿದ್ದಾಗಿ ಘೋಷಿಸಲಾಯಿತು. ತಮ್ಮ ವಿರುದ್ಧದ ಕೋರ್ಟ್ ಮಾರ್ಷಲ್‌ಗೆ ಹಾಜರಾಗಿದ್ದ ಮೊರ್ಸಿ ಕುಸಿದು ಬೀಳುವ ಮುನ್ನ 20 ನಿಮಿಷ ನ್ಯಾಯಾಧೀಶರೊಂದಿಗೆ ಸುಧೀರ್ಘವಾಗಿ ಮಾತನಾಡಿದ್ದರು. ಈಜಿಪ್ಟಿನ ಇತಿಹಾಸದಲ್ಲೇ ಮೊದಲ ಬಾರಿಗೆ ಲೋಕತಾಂತ್ರಿಕವಾಗಿ …

Read More »

ಫೇಸ್ಬುಕ್ ಲೈವ್‌ನಲ್ಲಿ ಎಡವಟ್ಟಾಗಿ ಕ್ಯಾಟ್ ಫಿಲ್ಟರ್ ಕ್ಲಿಕ್; ಪಾಕಿಸ್ತಾನಿ ಸಚಿವನ ಮುಖ ನೋಡಿ

ಸಂದೇಶ ಇ-ಮ್ಯಾಗಝಿನ್: ಜಗತ್ತು ಮುಂದುವರಿದಿದೆ ಆದರೆ ಮೂರ್ಖರು ಮುಂದುವರಿದಿಲ್ಲ ಎನ್ನುವುದಕ್ಕೆ ಸ್ಪಷ್ಟ ಉದಾಹರಣೆ ಇದು. ಪಾಕಿಸ್ತಾನದ ಮಂತ್ರಿಯೊಬ್ಬರು ಇತ್ತೀಚೆಗಿನ ತಮ್ಮ ಯೋಜನೆಗಳ ಬಗ್ಗೆ ಪತ್ರಿಕಾಗೋಷ್ಟಿ ಮಾಡಿದ್ದರು. ಈ ಪತ್ರಿಕಾ ಗೋಷ್ಟಿಯ ಲೈವ್ ಫೇಸ್ಬುಕ್‌ನಲ್ಲಿ ಪ್ರಸಾರ ಮಾಡಲಾಗುತ್ತಿತ್ತು. ಆದರೆ ಈ ಸಂದರ್ಭದಲ್ಲಿ ಕ್ಯಾಟ್ ಫಿಲ್ಟರ್ ಕ್ಲಿಕ್ ಆಗಿ ಮಂತ್ರಿ ಹಾಗೂ ಅವರ ಜೊತೆಗಿದ್ದವರು ಬೆಕ್ಕಿನ ಹಾಗೆ ಕಂಡು ಬಂದರು. ಇವರ ಈ ಪೋಟೋಗಳು ಪಾಕಿಸ್ತಾನವನ್ನೂ ದಾಟಿ ಭಾರತ ಸೇರಿದಂತೆ ವಿವಿಧ ದೇಶಗಳಲ್ಲಿ …

Read More »

ಡಾ.ಝಾಕಿರ್ ನಾಯ್ಕ್ ಪ್ರಕರಣದಲ್ಲಿ ಮಲೇಷ್ಯಾ ಪ್ರಧಾನಿಯ ಮಹತ್ವದ ಹೇಳಿಕೆ

ಸಂದೇಶ ಇ-ಮ್ಯಾಗಝಿನ್: ಭಯೋತ್ಪಾದನೆಗೆ ಬೆಂಬಲ ಹಾಗೂ ಹಣ ಚಿಲುಮೆ ಪ್ರಕರಣಗಳಲ್ಲಿ ಭಾರತ ಸರಕಾರಕ್ಕೆ ಬೇಕಾದ ವ್ಯಕ್ತಿಯಾಗಿ ದೇಶತೊರೆದಿರುವ ಇಸ್ಲಾಮಿಕ್ ಪ್ರಭೋದಕ ಡಾ. ಝಾಕಿರ್ ನಾಯ್ಕ್ ಪ್ರಕರಣದಲ್ಲಿ ಮೌನ ಮುರಿದಿರುವ ಮಲೇಷ್ಯಾ ಪ್ರಧಾನಿ ಮಹಾತೀರ್ ಮುಹಮ್ಮದ್ ಅವರು ಮಹತ್ವದ ಹೇಳಿಕೆ ನೀಡಿದ್ದಾರೆ. ಈಗಿನ ಪರಿಸ್ಥಿತಿಯಲ್ಲಿ ಮಲೇಷ್ಯಾ ಸರಕಾರ ಝಾಕಿರ್ ನಾಯ್ಕ್ ಅವರನ್ನು ಭಾರತಕ್ಕೆ ಹಸ್ತಾಂತರಿಸಿದಲ್ಲಿ ಪೂರ್ವಗ್ರಹ ಪೀಡಿತ ತನಿಖೆ ನಡೆಯಬಹುದಾದ ಸಾಧ್ಯತೆ ಇರುವುದರಿಂದ ಡಾ. ಝಾಕಿರ್ ನಾಯ್ಕ್ ಅವರನ್ನು ಭಾರತಕ್ಕೆ ಹಸ್ತಾಂತರಿಸುವ …

Read More »