Friday , November 15 2019
Breaking News
Home / ಅಂತಾರಾಷ್ಟ್ರೀಯ / ಫೇಸ್ಬುಕ್ ಲೈವ್‌ನಲ್ಲಿ ಎಡವಟ್ಟಾಗಿ ಕ್ಯಾಟ್ ಫಿಲ್ಟರ್ ಕ್ಲಿಕ್; ಪಾಕಿಸ್ತಾನಿ ಸಚಿವನ ಮುಖ ನೋಡಿ

ಫೇಸ್ಬುಕ್ ಲೈವ್‌ನಲ್ಲಿ ಎಡವಟ್ಟಾಗಿ ಕ್ಯಾಟ್ ಫಿಲ್ಟರ್ ಕ್ಲಿಕ್; ಪಾಕಿಸ್ತಾನಿ ಸಚಿವನ ಮುಖ ನೋಡಿ

ಸಂದೇಶ ಇ-ಮ್ಯಾಗಝಿನ್: ಜಗತ್ತು ಮುಂದುವರಿದಿದೆ ಆದರೆ ಮೂರ್ಖರು ಮುಂದುವರಿದಿಲ್ಲ ಎನ್ನುವುದಕ್ಕೆ ಸ್ಪಷ್ಟ ಉದಾಹರಣೆ ಇದು. ಪಾಕಿಸ್ತಾನದ ಮಂತ್ರಿಯೊಬ್ಬರು ಇತ್ತೀಚೆಗಿನ ತಮ್ಮ ಯೋಜನೆಗಳ ಬಗ್ಗೆ ಪತ್ರಿಕಾಗೋಷ್ಟಿ ಮಾಡಿದ್ದರು. ಈ ಪತ್ರಿಕಾ ಗೋಷ್ಟಿಯ ಲೈವ್ ಫೇಸ್ಬುಕ್‌ನಲ್ಲಿ ಪ್ರಸಾರ ಮಾಡಲಾಗುತ್ತಿತ್ತು. ಆದರೆ ಈ ಸಂದರ್ಭದಲ್ಲಿ ಕ್ಯಾಟ್ ಫಿಲ್ಟರ್ ಕ್ಲಿಕ್ ಆಗಿ ಮಂತ್ರಿ ಹಾಗೂ ಅವರ ಜೊತೆಗಿದ್ದವರು ಬೆಕ್ಕಿನ ಹಾಗೆ ಕಂಡು ಬಂದರು.

ಇವರ ಈ ಪೋಟೋಗಳು ಪಾಕಿಸ್ತಾನವನ್ನೂ ದಾಟಿ ಭಾರತ ಸೇರಿದಂತೆ ವಿವಿಧ ದೇಶಗಳಲ್ಲಿ ಟ್ರೋಲ್ ಆಗುತ್ತಿದೆ. ಡಾನ್ ನ್ಯೂಸ್ ವರದಿಯ ಪ್ರಕಾರ ಪತ್ರಿಕಾಗೊಷ್ಟಿ ನಡೆಸುತ್ತಿದ್ದ ವ್ಯಕ್ತಿ ಹೆಸರು ಶೌಕತ್ ಯೂಸುಫ್ ಝೈ ಎಂದಾಗಿದ್ದು, ಇವರು ಖೈಬರ್ ಪಖ್ತುವಾನ್ ಪ್ರಾಂತದ ಸೂಚನಾ ಮಂತ್ರಿಯಾಗಿದ್ದಾರೆ.

ಪತ್ರಿಕಾಗೋಷ್ಟಿಯ ಫೇಸ್ಬುಕ್ ಲೈವ್ ನಲ್ಲಿ ತಪ್ಪಿನಿಂದಾಗಿ ಕ್ಯಾಟ್ ಫಿಲ್ಟರ್ ಕ್ಲಿಕ್ ಆಗಿದೆ. ಆದರೆ ವಿಪರ್ಯಾಸವೇನೆಂದರೆ ಪತ್ರಿಕಾಗೋಷ್ಟಿಯುದ್ದಕ್ಕೂ ಅದನ್ನು ಸರಿಪಡಿಸದೆ ಹಾಗೆ ಮುಂದುವರಿಸಿದ್ದು, ಬಳಿಕ ಜನರು ಈ ಬಗ್ಗೆ ಕಮೆಂಟ್ ಮಾಡಿದ್ದು, ಮಂತ್ರಿ ಮತ್ತು ಅವರ ಜೊತೆಗಿರುವವರು ಬೆಕ್ಕಿನ ಮುಖದಲ್ಲಿ ಮುದ್ದಾಗಿ ಕಾಣುತ್ತಿದ್ದಾರೆ ಎಂದಿದ್ದಾರೆ.

Check Also

ಸೌದಿ ರಾಜಕುಮಾರಿಯ ವಿರುದ್ಧ ಫ್ರಾನ್ಸ್ ನಲ್ಲಿ ಮೊಕದ್ದಮೆ-ಕಾರಣವೇನು ನೋಡಿ

ಸಂದೇಶ ಇ-ಮ್ಯಾಗಝಿನ್: ಸೌದಿ ಅರೇಬಿಯಾದ ದೊರೆ ಸಲ್ಮಾನ್ ಅವರ ಏಕೈಕ ಪುತ್ರಿ ರಾಜಕುಮಾರಿ ಹಸ್ಸಾ ಬಿಂತ್ ಸಲ್ಮಾನ್ ಅವರ ವಿರುದ್ಧ …

Leave a Reply

Your email address will not be published. Required fields are marked *