Saturday , April 4 2020
Breaking News
Home / ವೀಡಿಯೋ / ಕುಟುಂಬಸ್ಥರ ಓಟು 9 ಆದರೂ ನನಗೆ ಬಿದ್ದ ಓಟು 5; ಅಳುತ್ತಾ ಸ್ಪರ್ಧಿ ಹೇಳಿದ್ದೇನು ನೋಡಿ

ಕುಟುಂಬಸ್ಥರ ಓಟು 9 ಆದರೂ ನನಗೆ ಬಿದ್ದ ಓಟು 5; ಅಳುತ್ತಾ ಸ್ಪರ್ಧಿ ಹೇಳಿದ್ದೇನು ನೋಡಿ

ಸಂದೇಶ ಇ-ಮ್ಯಾಗಝಿನ್: ನಿನ್ನೆ ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗಿದೆ. ಗೆಲ್ಲುವವರು ಗೆದ್ದಾಯಿತು. ಸೋಲುವವರು ಸೋತೂ ಆಯಿತು. ಆದರೆ ಇದೀಗ ನಿನ್ನೆಯ ಕೆಲವು ಹಾಸ್ಯಾಸ್ಪದ ಘಟನೆಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಪಂಜಾಬಿನ ಲೋಕಸಭಾ ಕ್ಷೇತ್ರವೊಂದರಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಿದ್ದ ವ್ಯಕ್ತಿಯೊಬ್ಬರು ತನ್ನ ಕುಟುಂಬದಲ್ಲಿ 9 ಓಟುಗಳಿದ್ದರೂ ನನಗೆ ಬಿದ್ದ ಓಟು ಕೇವಲ 5 ಮಾತ್ರ ಎಂದು ಬೇಸರದಿಂದ ಮಾಧ್ಯಮದ ಮುಂದೆ ಕಣ್ಣೀರು ಹಾಕಿದ ಪ್ರಹಸನ ವರದಿಯಾಗಿದೆ. ನೀಟೂ ಶಟ್ಟರನ್ ವಾಲಾ ಎಂಬ ವ್ಯಕ್ತಿಯ ಕುಟುಂಬದಲ್ಲಿ 9 ಓಟಿತ್ತಂತೆ. ಆದರೆ ಚುನಾವಣೆಯ ಹಲವು ಸುತ್ತಿನ ಮತ ಎಣಿಕೆಯ ನಂತರ ಕೂಡ ನೀಟು ಅವರಿಗೆ ಕೇವಲ 5 ಮತ ಮಾತ್ರ ಬಿದ್ದಿರುವುದಾಗಿ ತೋರಿಸುತ್ತಿದ್ದುದರಿಂದ ಬೇಸರಗೊಂಡ ನೀಟೂ ಅವರನ್ನು ಪತ್ರಕರ್ತರೊಬ್ಬರು ಮಾತನಾಡಿಸಲು ಪ್ರಯತ್ನಿಸಿದಾಗ ಸರ್ ನನ್ನ ಕುಟುಂಬದಲ್ಲಿ 9 ಓಟಿದೆ ಆದರೆ ನನಗೆ ಬಿದ್ದಿರುವುದು 5 ಮಾತ್ರ ಕುಟುಂಬಸ್ಥರೇ ದ್ರೋಹ ಮಾಡ್ಬಿಟ್ರು ಎಂದು ಅತ್ತಿದ್ದಾರೆ. ವಿಶೇಷವೇನೆಂದರೆ ಮೊದಲು 5 ಮಾತ್ರ ಪಡೆದಿದ್ದಾಗಿ ದಾಖಲೆಯಲ್ಲಿ ತೋರಿಸುತ್ತಿದ್ದರೂ ಮತ ಎಣಿಕೆ ಮುಗಿದ ಬಳಿಕ ನೀಟೂ ಅವರಿಗೆ 856 ದೊರೆತಿರುವುದಾಗಿ ಘೋಷಿಸಲಾಗಿದೆ.

Check Also

ತನ್ನ ಉಳಿತಾಯದ ಹಣದಲ್ಲಿ ಹಜ್‌ಗೆ ಹೊರಟ ತಂದೆಗೆ ಮಕ್ಕಳು ಮಾಡಿದರು ಈ ಸ್ಥಿತಿ

ಸಂದೇಶ ಇ-ಮ್ಯಾಗಝಿನ್: ಪಾಕಿಸ್ತಾನದ ಸಿಂಧ್‌ನಲ್ಲಿ ತಂದೆಯು ಹಣವನ್ನು ಪುತ್ರರಿಗೆ ಕೊಡುವ ಬದಲು ಹಜ್‌ಗಾಗಿ ಬಳಸಿದ್ದಕ್ಕಾಗಿ ವೃದ್ಧ ತಂದೆಯನ್ನು ಪುತ್ರರು ಥಳಿಸಿದ …

Leave a Reply

Your email address will not be published. Required fields are marked *