Tuesday , December 10 2019
Breaking News
Home / ಇಸ್ಲಾಮಿಕ್ ವ್ಯಕ್ತಿತ್ವ / ಸ್ವಾಮಿ ಆನಂದಜೀ ಶೈಖ್ ಮೊಹಿಬುಲ್ಲಾಹ್ ಆದ ಕಥೆ

ಸ್ವಾಮಿ ಆನಂದಜೀ ಶೈಖ್ ಮೊಹಿಬುಲ್ಲಾಹ್ ಆದ ಕಥೆ

ಸಂದೇಶ ಇ-ಮ್ಯಾಗಝಿನ್: ನಾನೊಬ್ಬ ಮಾಜಿ ಕರೋಡ್ ಪತಿ ಸಾಧುವನ್ನು ಕರೆದು ಕೊಂಡು ಬರಲು ಹೋಗಿದ್ದೆ. ನಾನು ಹೋಗುವಾಗ ಅವರು ಹೈದರಾಬಾದಿನ ಎಸಿ ಗಾರ್ಡ್ ಚೌರಾಸ್ತ ಕ್ರಾಸ್ ರೋಡ್‌ಗೆ ಶೇರ್‍‌ಡ್ ಆಟೋ ಹಿಡಿದು ಬಂದಿದ್ದರು. ಅವರನ್ನು ಪ್ರವಚನ ನೀಡಲು ಮಸ್ಜಿದುರ್ರಹ್ಮಾನ್‌ಗೆ ಆಹ್ವಾನಿಸಲಾಗಿತ್ತು ಎಂದು ಫಾರೂಕ್ ಭಾಯ್ ವಿವರಿಸುತ್ತಾರೆ. ನಿಜಕ್ಕೂ ಇವರು ಅಂತಿತ ವ್ಯಕ್ತಿ ಅಲ್ಲ. ಒಂದು ಕಾಲದಲ್ಲಿ ಇವರಿಗೆ ಅಮೇರಿಕಾದಲ್ಲಿ ಆಶ್ರಮವಿತ್ತು. ದೊಡ್ಡ ದೊಡ್ದ ಫಿಲ್ಮ್ ಆಕ್ಟರ್‌ಗಳು , ರಾಜಕಾರಣಿಗಳು ಹಾಗೂ ಉದ್ಯೋಗ ಪತಿಗಳು ಇವರ ಭಕ್ತರಾಗಿದ್ದರು. ಮಹಿಳೆಯರು ಇವರ ಆಶ್ರಮಕ್ಕೆ ಬಂದು ಕಾಲು ಹಿಡಿದು ಆಶಿರ್ವಾದ ಪಡೆಯುತ್ತಿದ್ದರಂತೆ. ರಾಜಕಾರಣಿಗಳು ತಮ್ಮ ರಾಜಕೀಯ ಭವಿಷ್ಯದ ಬಗ್ಗೆ ಕೇಳಲು ಇವರ ಬಳಿ ಬರುತ್ತಿದ್ದರು. ಇವರೊಬ್ಬ ಭೌದ್ಧ ಸನ್ಯಾಸಿಯಾಗಿದ್ದರು. ಹೆಸರು ಸ್ವಾಮಿ ಆನಂದಜೀ (ಈಗ ಶೈಖ್ ಮೊಹಿಬುಲ್ಲಾಹ್) ಕೋಟಿ ಗಟ್ಟಲೆ ಬೆಲೆಬಾಳುವ ಆಶ್ರಮ ಇತ್ತು ಇವರಿಗೆ. ಆದರೆ ಇವತ್ತು ಸಾಮಾನ್ಯರಂತೆ ಬಟ್ಟೆ ಧರಿಸಿ ಬಂದಿದ್ದಾರೆ.

ಒಬ್ಬ ಉರ್ದು ಭಾಷಾಂತರ ಕಾರನ ಸಹಾಯದಿಂದ ಶೈಖ್ ಮೊಹಿಬುಲ್ಲಾಹ್ ತನ್ನ ಜೀವನದ ಬಗ್ಗೆ ಪ್ರವಚನ ನೀಡಲು ಪ್ರಾರಂಭಿಸಿದರು. ಮೊದಲು ನನ್ನ ಬಳಿ ಸಾವಿರಾರು ಭಕ್ತರಿದ್ದರು. ಆದರೆ ನನ್ನ ಖಾಸಗಿ ಜೀವನ ಬಹಿರಂಗ ಜೀವನದಂತೆ ಇರಲಿಲ್ಲ ಎಂದು ಶೈಖ್ ಮೊಹಿಬುಲ್ಲಾಹ್ ಆರಂಭದಲ್ಲೇ ಹೇಳಿದರು. ಜನರು ಯಾವ ರೀತಿ ನನ್ನ ಮೇಲೆ ಅಂಧ ಭಕ್ತಿ ತೋರಿಸುತ್ತಿದ್ದರು ಎನ್ನುವುದನ್ನು ಅವರು ವಿವರಿಸಿದರು. ಜನರು ಸ್ವಾಮಿ ಆನಂದಜೀ ಅವರನ್ನು ದೇವತಾ ಮನುಷ್ಯನೆಂದು ನಂಬಿದ್ದರು. ಆದರೆ ನಾನು ಅವರನ್ನು ಮೋಸ ಮಾಡುತ್ತಿದೆ. ನನಗೆ ನಿಜವಾಗಿಯೂ ಯಾವುದೇ ಜ್ಞಾನವಿರಲಿಲ್ಲ. ಆದರೆ ದೇವತೆಗಳ ಸಹಾಯದಿಂದ ನನ್ನಿಂದ ಕೆಲವು ಪವಾಡಗಳು ನಡೆದಿದ್ದವು. ಆನಂತರ ಈ ದೇವತೆ ಎಂಬ ಪದವನ್ನು ಮೊಹಿಬುಲ್ಲಾಹ್ ಅವರು ತಮ್ಮ ಮಾತಿನಲ್ಲಿ ಜಿನ್ನ್‌ಗಳು ಎಂದು ಹೇಳಿದರು. ನನ್ನ ಭಕ್ತರು ಬೇಕಾದಷ್ಟು ದುಡ್ಡು ಚೆಲ್ಲುತ್ತಿದ್ದರು. ಅವರೆಲ್ಲ ನನ್ನನ್ನು ಅವರ ಪಾಲಿನ ದೇವರು ಎಂದು ನಂಬಿದ್ದರು ಎಂದು ಮೊಹಿಬುಲ್ಲಾಹ್ ಹೇಳಿದರು.

ಒಮ್ದು ದಿನ ನಾನು ಅಮೇರಿಕಾದಿಂದ ಭೂತಾನ್‌ಗೆ ವಿಮಾನದಲ್ಲಿ ಹೊರಟಿದ್ದೆ, ನನ್ನ ಕಣ್ಣು ಒಬ್ಬ ಮುಸ್ಲಿಮ್ ವ್ಯಕ್ತಿ ತನ್ನ ಕೈಯಲ್ಲಿ ಜೋಪಾನವಾಗಿ ಹಿಡಿದಿದ್ದ ನೀರಿನ ಬಾಟಲಿಯ ಮೇಲೆ ಬಿತ್ತು. ನನಗೆ ಬಹಳ ಕುತೋಹಲವಾಯಿತು. ಈ ವ್ಯಕ್ತಿ ಆ ನೀರಿನ ಇಷ್ಟು ದೊಡ್ದ ಬಾಟಲಿಯನ್ನು ಯಾಕೆ ಇಷ್ಟು ಆದರದಿಂದ ಜೋಪಾನ ಮಾಡಿ ಕೊಂಡು ಹೋಗುತ್ತಿರಬಹುದು ಎಂದು ನನ್ನ ಮನಸ್ಸಿನಲ್ಲಿ ಪ್ರಶ್ನೆ ಎದ್ದಿತು. ನಾನು ಆತನಲ್ಲಿ ಕೇಳಿದೆ; ಯಾಕೆ ಇಷ್ಟು ದೊಡ್ಡ ನೀರಿನ ಕ್ಯಾನ್ ಅನ್ನು ನೀವು ಕೈಯಲ್ಲಿ ಹಿಡಿದಿದ್ದು? ಲಗೇಜ್‍‌ಗೆ ಹಾಕಬಹುದಿತ್ತಲ್ಲವೇ?

ಆಗ ಮುಸ್ಲಿಮ್ ವ್ಯಕ್ತಿ ಆ ನೀರಿನ ಬಗ್ಗೆ ನನಗೆ ಹೇಳಿದರು. ಅದು ಮಕ್ಕಾದ ಝಮ್ ಝಮ್ ನೀರೆಂದೂ, ಅದರ ಹಿಂದಿನ ಪ್ರವಾದಿ ಇಬ್ರಾಹಿಂ(ಅ) ಹಾಗೂ ಹಾಜಿರಾ(ರ) ಇಸ್ಮಾಯೀಲ್(ಅ) ಮತ್ತು ಜಿಬ್ರೀಲ್ (ಅ)ರ ಚರಿತ್ರೆಯನ್ನು ಹೇಳಿದಎರು. ಅಬ್ಬಾ…! ಒಂದು ನೀರಿನ ಹಿಂದೆ ಇಷ್ಟು ದೊಡ್ಡ ಕಥೆಯೇ? ನನಗೆ ಆಶ್ಚರ್ಯವಾಯಿತು. ನಿಮ್ಮ ಕುರ್‍‌ಆನ್ ಗ್ರಂಥವನ್ನು ನನಗೊಮ್ಮೆ ಓದ ಬೇಕಲ್ಲ. ಭೂತಾನೀಸ್ ಭಾಷೆಯಲ್ಲಿ ಸಿಗಬಹುದಾ ಎಂದು ನಾನು ಅವರಲ್ಲಿ ಕೇಳಿದೆ. ಆ ವ್ಯಕ್ತಿ ಆಯ್ತು ನಾನು ನಿಮಗೆ ಕೊರಿಯರ್ ಮಾಡುತ್ತೇನೆ ಎಂದು ನನ್ನ ವಿಳಾಸ ಪಡೆದು ಹೋದರು.

ಕುರ್‌ಆನ್ ಓದಿದ ನಂತರ ನನ್ನ ಮನಸ್ಸು ಆತ್ಯಾಧ್ಮಿಕತೆಯ ನಿಜವಾದ ಉತ್ತುಂಗಕ್ಕೆ ಹವಣಿಸಿತು ಎಂದು ಮೊಹಿಬುಲ್ಲಾಹ್ ವಿವರಿಸುತ್ತಾರೆ. ಕುರ್‌ಆನಿನಲ್ಲಿರುವ ಮರಣಾನಂತರದ ಜೀವನ, ಸ್ವರ್ಗದ ವಾಗ್ದಾನ, ನರಕ ಶಿಕ್ಷೆ ಇದೆಲ್ಲ ನನ್ನ ಮನಸ್ಸನ್ನು ಆವರಿಸಿತು. ಈ ಲೋಕದ ವಿಳಾಸಿ ಜೀವನ, ದೇವತಾ ಮನುಷ್ಯನ ಪಟ್ಟ, ಭಕ್ತರು ಇದೆಲ್ಲ ಯಾಕೆ ಬೇಕು ನಾನು ನನ್ನನ್ನೇ ವಂಚಿಸುತ್ತಿದ್ದೇನೆ ಎಂಬ ಭಾವನೆ ನನ್ನಲ್ಲಿ ಮೂಡಿತು. ಆನಂತರ ಒಂದು ಸುದೀರ್ಘ ಚಿಂತನೆಯ ನಂತರ ನಾನು ಅಲ್ಲಾಹು ಮತ್ತು ಅವನ ಸಂದೇಶ ವಾಹಕರನ್ನು ಆಯ್ಕೆ ಮಾಡಿದೆ ಎಂದು ಶೈಖ್ ಮೊಹಿಬುಲ್ಲಾಹ್ ಹೇಳುತ್ತಾರೆ.

ಆನಂತರ ಚೆನ್ನೈಯ ಮಸೀದಿಗೆ ತೆರಳಿ ಶಹಾದಾ ಪ್ರಮಾಣ ವಚನ ಪಡೆದ ನಾನು ಮುಸ್ಲಿಮ್ ಆದೆ. ಆದರೆ ಕೆಲವೇ ದಿನಗಳ ನಂತರ ಕೆಲವು ಮೂಲಭೂತವಾದಿಗಳ ತಂಡವು ನನ್ನ ಮೇಲೆ ಬಿಸಿ ನೀರು ಚೆಲ್ಲಿತು. ನಾನು ಧರ್ಮ ಪರಿವರ್ತನೆ ಮಾಡಿದ್ದು ಅವರ ಕೋಪಕ್ಕೆ ಕಾರಣವಾಗಿತ್ತು. ಆದರೂ ನಾನು ಪ್ರವಾದಿ ಮತ್ತು ಅವರ ಸಹಾಬಾಗಳ ತ್ಯಾಗ ಮಯ ಜೀವನ ನನ್ನನ್ನು ಹುರಿದುಂಬಿಸಿ ಆತ್ಮವಿಶ್ವಾಸ ಕಳೆದು ಕೊಳ್ಳದಂತೆ ಪ್ರೇರೇಪಿಸಿತು. ಆನಂತರ ಸೌದಿ ಅರೇಬಿಯಾದ ಧಾರ್ಮಿಕ ಸಂಘಟನೆಯೊಂದು ದೇವತಾ ಮನುಷ್ಯನೊಬ್ಬ ಸಾಮಾನ್ಯ ಮನುಷ್ಯನಾದ ಸುದ್ದಿ ತಿಳಿದು ನನ್ನನ್ನು ಹಜ್ಜ್‌ಗೆ ಆಹ್ವಾನಿಸಿತು. ಅಲ್ಲಿಯೇ ನನ್ನ ಸುಟ್ಟ ಚರ್ಮದ ಚಿಕಿತ್ಸೆ ಕೂಡ ನಡೆಯಿತು ಎಂದು ತಮ್ಮ ಪ್ರವಚನದಲ್ಲಿ ಶೈಖ್ ಮೊಹಿಬುಲ್ಲಾಹ್ ನೆನಪಿಸಿಕೊಂಡರು.

ಸ್ವಾಮಿ ಆನಂದಜೀಯವರು ಶೈಖ್ ಮೊಹಿಬುಲ್ಲಾಹ್ ಆದ ಬಗ್ಗೆ ಕೇರಳದ ರಿಯಾಝ್ ಮೂಸಾ ಮಲಬಾರಿಯವರು “ಏಕ್ ಖುದಾ ಇಂಸಾನ್ ಬನ್‌ಗಯಾ” ಎಂಬ ಕೃತಿಯನ್ನು ಉರ್ದು ಭಾಷೆಯಲ್ಲಿ ರಚಿಸಿದ್ದಾರೆ. ಇವತ್ತು ಎಲ್ಲಾ ಆಡಂಬರಗಳನ್ನು ತ್ಯಜಿಸಿ ಸರಳ ಜೀವನವನ್ನು ನಡೆಸುತ್ತಿರುವ ಶೈಖ್ ಮೊಹಿಬುಲ್ಲಾಹ್ ತಾನು ಮನಗಂಡ ಜೀವನ ಸತ್ಯದ ಬಗ್ಗೆ ಇಸ್ಲಾಮಿನ ಬಗ್ಗೆ ಜನರಿಗೆ ತಿಳಿಸುವ ಪ್ರಯತ್ನ ಮಾಡುತ್ತಿದ್ದಾರೆ.

Check Also

ಇತಿಹಾಸದಲ್ಲಿ ಮೊದಲ ಬಾರಿಗೆ ಹಿಂದೂಗಳು ಜುಮಾ ಪ್ರವಚನ ಕೇಳಲು ಮಸೀದಿಗೆ ಬಂದ ಘಟನೆ

ಸಂದೇಶ ಇ-ಮ್ಯಾಗಝಿನ್: ಭಾರತ ರತ್ನ ಮೌಲಾನಾ ಅಬುಲ್ ಕಲಾಂ ಆಝಾದ್ ಅವರು ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಮುಖವಾಗಿದ್ದರು. ಗಾಂಧೀಜಿ, …

Leave a Reply

Your email address will not be published. Required fields are marked *