Friday , May 24 2019
Breaking News
Home / ಅಂತಾರಾಷ್ಟ್ರೀಯ / ಬ್ರೂನೈ: ಸಲಿಂಗಕಾಮ ಅಪರಾಧಕ್ಕೆ ಮರಣದಂಡನೆ ಶಿಕ್ಷೆ ರದ್ದು

ಬ್ರೂನೈ: ಸಲಿಂಗಕಾಮ ಅಪರಾಧಕ್ಕೆ ಮರಣದಂಡನೆ ಶಿಕ್ಷೆ ರದ್ದು

ಸಂದೇಶ ಇ-ಮ್ಯಾಗಝಿನ್: ಇತ್ತೀಚೆಗೆ ತನ್ನ ದೇಶದಲ್ಲಿ ಶರಿಯಾ ಕಾನೂನು ಜಾರಿಗೊಳಿಸಿದ್ದ ಏಷ್ಯಾದ ಅತಿ ಸಣ್ಣ ಶ್ರೀಮಂತ ತೈಲ ಸಂಪನ್ನ ರಾಷ್ಟ್ರ ಬ್ರೂನೈ ಸಲಿಂಗಕಾಮಕ್ಕೆ ವಿಧಿಸಿದ್ದ ಮರಣದಂಡನಾ ಶಿಕ್ಷೆಯನ್ನು ಕೊನೆಗೂ ಅಂತಾರಾಷ್ಟ್ರೀಯ ಒತ್ತಡಕ್ಕೆ ಮಣಿದು ರದ್ದುಗೊಳಿಸಿದೆ. ಈ ಹೊಸ ಕಾನೂನಿನ ಪ್ರಕಾರ ಸಲಿಂಗಕಾಮ , ಅತ್ಯಾಚಾರ ಮುಂತಾದ ಅಪರಾಧಗಳಿಗೆ ಮರಣದಂಡನೆ ಶಿಕ್ಷೆ ನೀಡಲಾಗುವುದು ಎಂದು ಘೋಷಿಸಲಾಗಿತ್ತು. ಈ ಶಿಕ್ಷೆಯನ್ನು ಸಾಮಾನ್ಯ ಮರಣದಂಡನೆ ರೀತಿಯಲ್ಲಿ ನೀಡದೆ ಇಸ್ಲಾಮಿ ಶರಿಯಾ ಕಾನೂನಿನ ಪ್ರಕಾರವಾದ ಮರಣದ ವರೆಗೆ ಕಲ್ಲು ಬಿಸಾಡಿ ಕೊಲ್ಲುವ ಮೂಲಕ ನೀಡಲಾಗುವುದು ಎಂದೂ ಬ್ರೂನೈ ಘೋಷಿಸಿತ್ತು. ಈ ಕಾರಣದಿಂದಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬ್ರೂನೈ ವಿರುದ್ಧ ಟೀಕೆ ಕೇಳಿ ಬಂದಿತ್ತಲ್ಲದೆ, ರಾಷ್ಟ್ರವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಧಿಗ್ಬಂದನ ಭೀತಿಯನ್ನೂ ಎದುರಿಸಿತ್ತು. ಈ ಎಲ್ಲ ಕಾರಣದಿಂದಾಗಿ ಇದೀಗ ಬ್ರೂನೈ ತನ್ನ ಹೊಸ ಕಾನೂನನ್ನು ಪರಿಷ್ಕರಣೆ ಮಾಡುವುದಾಗಿ ತಿಳಿಸಿದೆ.

ಜಗತ್ತಿನ ಅತಿ ಶ್ರೀಮಂತ ಆಡಳಿತಗಾರರ ಸಾಲಿನಲ್ಲಿರುವ ಬ್ರೂನೈ ದೊರೆ ಸುಲ್ತಾನ್ ಹಸನಲ್ ಬೊಲ್ಕಿಯಾ ಅವರು ರವಿವಾರ ಟಿವಿ ನೇರಪ್ರಸಾರದಲ್ಲಿ ಕಾಣಿಸಿಕೊಂಡು ಶರಿಯಾ ಕಾನೂನನ್ನು ತಮ್ಮ ರಾಷ್ಟ್ರದಲ್ಲಿ ಜಾರಿಗೊಳಿಸುವುದಿಲ್ಲ ಎಂದು ಹೇಳಿದರು. ಬ್ರೂನೈಯಲ್ಲಿ ಶರಿಯಾ ಕಾನೂನು ಜಾರಿ ಮಾಡಿದರೆ ದೇಶದೊಂದಿಗೆ ಸಂಬಂಧ ಮುರಿಯುವುದಾಗಿ ಬೆದರಿಕೆ ಒಡ್ದಿದ್ದ ಪಾಶ್ಚಾತ್ಯ ಒತ್ತಡಕ್ಕೆ ದೊರೆ ಹಸನಲ್ ಬೊಲ್ಕಿಯಾ ಮಣಿದಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದೆ.

Check Also

ಕ್ರೈಸ್ಟ್ ಚರ್ಚ್ ಮಸೀದಿಗೆ ಭೇಟಿ ನೀಡಿದ ವಿಶ್ವಸಂಸ್ಥೆಯ ಮಹಾಸಚಿವರು; ಇಸ್ಲಾಮೋಫೋಬಿಯಾ ಬಗ್ಗೆ ಮಹತ್ವದ ಹೇಳಿಕೆ

101ಸಂದೇಶ ಇ-ಮ್ಯಾಗಝಿನ್: ವಿಶ್ವಸಂಸ್ಥೆಯ ಮಹಾಸಚಿವರಾದ ಆಂಟನಿಯೋ ಗುಟೇರಸ್ ಭಯೋತ್ಪಾದಕ ದಾಳಿಗೆ ಒಳಗಾಗಿದ್ದ ನ್ಯೂಝಿಲ್ಯಾಂಡ್ ಕ್ರೈಸ್ಟ್ ಚರ್ಚ್‌ನ ಅನ್ನೂರ್ ಮಸೀದಿಗೆ ನಿನ್ನೆ …

Leave a Reply

Your email address will not be published. Required fields are marked *