Monday , August 26 2019
Breaking News
Home / ರಿಯಲ್ ಹೀರೋಸ್ / ತಮ್ಮ ಪ್ರಾಣದ ಹಂಗು ತೊರೆದು ಬಾವಿಗೆ ಬಿದ್ದ ಮುಸ್ಲಿಮ್ ಬಾಲಕಿಯನ್ನು ರಕ್ಷಿಸಿದ ಹಿಂದೂ ಯುವಕರು

ತಮ್ಮ ಪ್ರಾಣದ ಹಂಗು ತೊರೆದು ಬಾವಿಗೆ ಬಿದ್ದ ಮುಸ್ಲಿಮ್ ಬಾಲಕಿಯನ್ನು ರಕ್ಷಿಸಿದ ಹಿಂದೂ ಯುವಕರು

ಸಂದೇಶ ಇ-ಮ್ಯಾಗಝಿನ್: ಬಾವಿಗೆ ಬಿದ್ದ ಎರಡು ವರ್ಷದ ಮುಸ್ಲಿಮ್ ಬಾಲಕಿಯನ್ನು ಇಬ್ಬರು ಯುವಕರು ತಮ್ಮ ಪ್ರಾಣದ ಹಂಗು ತೊರೆದು ರಕ್ಷಿಸಿದ್ದಾರೆ. ಮಲಪ್ಪುರಂ ಜಿಲ್ಲೆಯ ಪೂಕ್ಕೂಟ್ಟುಂಪಡಂ ಸಮೀಪದ ಅಮರಂಬಲಂ ಮೂಲದ ನಿವಾಸಿ ಅಬ್ದುಲ್ ಗಫೂರ್ ಮತ್ತು ಫಾಜಿಲಾ ದಂಪತಿಗಳ ಪುತ್ರಿ ಆಯಿಶು ಎಂಬ ಬಾಲಕಿಯು ಸ್ಥಳೀಯ ವಾಗಿ ಬಳಸುವ ಸಾವರ್ಜನಿಕ ಬಾವಿಯ ಮೊನ್ನೆ ಪಕ್ಕ ಆಡುತ್ತಿದ್ದಳು. ಬಾವಿಯ ಪಂಪ್ ಸೆಟ್ ಮೋಟಾರು ದುರಸ್ತಿ ಕಾರ್ಯ ಇದ್ದುದ್ದರಿಂದ ಬದಿಗೆ ಅಳವಡಿಸಿದ್ದ ಕಬ್ಬಿಣದ ಸುರಕ್ಷತಾ ಗ್ರಿಲ್ ಗಳನ್ನು ತೆಗೆದಿದ್ದರು. ಮಗು ಆಡುತ್ತಾ ಹೋಗಿ ಬಾವಿಗೆ ಬಿದ್ದಿದೆ. ತಾಯಿಯ ಬೊಬ್ಬೆ ಕೇಳಿ ಪಕ್ಕದ ಮನಗೆ ಪೈಂಟ್ ಹೊಡೆಯುತ್ತಿದ್ದ ಸುಧೀಶ್ ಕೂಡಲೇ ಧಾವಿಸಿದ್ದಾರೆ. ಮೋಟರ್‌ಗೆ ಕಟ್ಟಿದ್ದ ಹಗ್ಗದ ಮೇಲೆ ನೇತಾಡುತ್ತಾ ಸುಧೀಶ್ ಆಳ ಬಾವಿಗೆ ಇಳಿದು ಮಗುವನ್ನು ಎತ್ತಿಕೊಳ್ಳುವಲ್ಲಿ ಯಶಸ್ವಿಯಾದರು. ಅಷ್ಟರಲ್ಲಿ ನೆರೆಯ ಸಾನಿ ಅಜಯ್ ಎಂಬ ಯುವಕ ಕೂಡ ಧಾವಿಸಿ ಬಾವಿಗೆ ಧುಮುಕಿದ್ದಾರೆ. ಈ ಇಬ್ಬರೂ ಸೇರಿ ಮಗುವನ್ನು ಯಾವುದೇ ಅಪಾಯವಿಲ್ಲದೆ ಅನ್ಸಾರ್ ಎಂಬವರ ಸಹಾಯದಿಂದ ಮೇಲಕ್ಕೆ ತಂದು ರಕ್ಷಿಸಿದ್ದಾರೆ.

ಯುವಕರ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿರುವ ಸ್ಥಳೀಯರು ಈ ಬಾವಿ ತುಂಬಾ ಆಳವಾಗಿದ್ದು, ಸ್ವಚ್ಛತಾ ಕಾರ್ಮಿಕರೂ ಕೂಡ ಇಳಿಯಲು ನಿರಾಕರಿಸುತ್ತಾರೆ. ಆದರೆ ಸುಧೀಶ್, ಸ್ಯಾನಿ ಮತ್ತು ಅನ್ಸಾರ್ ಮಗುವನ್ನು ಉಳಿಸಲು ತಮ್ಮ ಪ್ರಾಣದ ಹಂಗು ತೊರೆದು ಸಾಹಸ ಮಾಡಿದ್ದಾರೆ ಎಂದಿದ್ದಾರೆ. ಸುಧೀಶ್ ಕರುಲೈ ಮೂಲದ ಶಂಕರನ್ ಮತ್ತು ಜಾನಕಿ ದಂಪತಿಯ ಮಗನಾಗಿದ್ದು, ಸ್ಯಾನಿ ಅಜಯ್ ಪೂಕೊಟ್ಟುಂಪಡಂ ಮೂಲದ ಅಜಯಕುಮಾರ್ ಮತ್ತು ಮಿನಿ ದಂಪತಿಗಳ ಪುತ್ರ.

Check Also

ನನ್ನಿಂದ ಇಷ್ಟೇ ಸಾಧ್ಯ ಇದರಿಂದ ಆ ಅನಾಥ ಮಕ್ಕಳಿಗೆ ಏನಾದರೂ ಖರೀದಿಸಿಕೊಡು

000ಸಂದೇಶ ಇ-ಮ್ಯಾಗಝಿನ್: ನನ್ನನ್ನು ಅಪಾರವಾಗಿ ಕಾಡಿದ ಈ ವ್ಯಕ್ತಿಯ ಬಗ್ಗೆ ಬರೆಯಬೇಕು ಅಂತ ಬಯಸಿದೆ. ಇವರ ಹೆಸರು ಬಾಷಾ, 82 …

Leave a Reply

Your email address will not be published. Required fields are marked *