Tuesday , April 7 2020
Breaking News
Home / ಮಹಿಳೆ / ಅಲ್ಲಾಹನಿಗಾಗಿ ಬಾಲಿವುಡ್ ತೊರೆಯುವುದಾಗಿ ಘೋಷಿಸಿದ ನಟಿ

ಅಲ್ಲಾಹನಿಗಾಗಿ ಬಾಲಿವುಡ್ ತೊರೆಯುವುದಾಗಿ ಘೋಷಿಸಿದ ನಟಿ

ಸಂದೇಶ ಇ-ಮ್ಯಾಗಝಿನ್: ರಾಷ್ಟ್ರೀಯ ಪ್ರಶಸ್ತಿ ವಿಜೇತ ನಟಿ ಝೈರಾ ವಾಸಿಮ್ ಭಾನುವಾರ ತಮ್ಮ ಫೇಸ್ಬುಕ್ ಖಾತೆಯ ಮೂಲಕ ಬಾಲಿವುಡ್ ನಟನಾ ಕ್ಷೇತ್ರದಿಂದ ತನ್ನ ನಿರ್ಗಮನವನ್ನು ಘೋಷಿಸಿದ್ದರೆ. ಇದು ನನ್ನ ಧಾರ್ಮಿಕ ನಂಬಿಕೆ ಮತ್ತು ಧರ್ಮಕ್ಕೆ ಅಡ್ಡಿಯುಂಟುಮಾಡಿರುವ ಕಾರಣ ಈ ಕೆಲಸದಲ್ಲಿ ನಾನು ಸಂತೋಷವಾಗಿಲ್ಲ ಎಂದು ‘ದಂಗಲ್’ ಹಾಗೂ ‘ಸೀಕ್ರೇಟ್ ಸೂಪರ್ ಸ್ಟಾರ್’ ಖ್ಯಾತಿಯ ನಟಿ ಝೈರಾ ವಾಸಿಮ್ ಹೇಳಿದ್ದಾರೆ. ತಮ್ಮ ಫೆಸ್ಬುಕ್ ಪುಟದಲ್ಲಿ ವಿವರವಾದ ಪೋಸ್ಟ್ ಒಂದರ ಮೂಲಕ ಬಾಲಿವುಡ್ ಬಗ್ಗೆ ಉಲ್ಲೇಖಿಸಿರುವ ನಟಿ ‘ನಾನು ಇಲ್ಲಿಗೆ ಹೊಂದಿಕೊಂಡಿದ್ದೇನಾದರೂ ನಾನು ಇಲ್ಲಿಗೆ ಸೇರಿದವಳಲ್ಲ. ಇದು ನನಗೆ ಸೇರಿದ ಜಾಗ ಅಲ್ಲ’ ಎಂದು ನಟಿ ತಿಳಿಸಿದ್ದಾರೆ.

“ಐದು ವರ್ಷಗಳ ಹಿಂದೆ ನಾನು ತೆಗೆದುಕೊಂಡ ಒಂದು ನಿರ್ಧಾರವು ನನ್ನ ಜೀವನವನ್ನೇ ಬದಲಾಯಿಸಿತು. ಆ ಮೂಲಕ ನಾನು ಬಾಲಿವುಡ್ ನಲ್ಲಿ ಪಾದಾರ್ಪಣೆ ಮಾಡಿದೆ. ಬಾಲಿವುಡ್ ನನಗೆ ಭಾರಿ ಜನಪ್ರಿಯತೆಯ ಬಾಗಿಲು ತೆರೆಯಿತು. ಸಫಲತೆಯ ವಿಚಾರದಲ್ಲಿ ನನ್ನನ್ನು ಯುವಕ/ ಯುವತಿಯರಿಗೆ ರೋಲ್ ಮಾಡಲ್ ತರ ಬಿಂಬಿಸಲಾಯಿತು. ಆದರೆ ವಾಸ್ತವದಲ್ಲಿ ನನ್ನ ಜೀವನ ಹಾಗೆ ಇರಲಿಲ್ಲ. ನನ್ನ ಜೀವನದ ಸಫಲತೆ ಮತ್ತು ಅಸಫಲತೆಯ ಬಗ್ಗೆ ನನಗೆ ಈಗಷ್ಟೇ ಅರಿವಾಗಿದೆ” ಎಂದು ಝೈರಾ ತಮ್ಮ ಪೋಸ್ಟ್ ನಲ್ಲಿ ವಿವರಿಸಿದ್ದಾರೆ.

ವಾಸ್ತವದಲ್ಲಿ ನಾನು ಈ ಐಡೆಂಟಿಟಿಯಿಂದ ಗುರುತಿಸಲು ಬಯಸುತ್ತಿಲ್ಲ. ನಾನು ಇದರಿಂದ ತೃಪ್ತಳಾಗಿಲ್ಲ ಎಂದು18 ವರ್ಷದ ಅಮೀರ್ ಖಾನ್ ರ ಬಾಲಿವುಡ್ ಬ್ಲಾಕ್ ಬಸ್ಟರ್ ದಂಗಲ್ ಸಿನಿಮಾದ ಖ್ಯಾತಿಯ ನಟಿ ಝೈರಾ ವಾಸಿಮ್ ಹೇಳಿದ್ದಾರೆ.

ಈಗ ಬಹಳ ಸಮಯದ ನಾನು ಬೇರೊಬ್ಬ ವ್ಯಕ್ತಿಯಾಗಲು ಹೆಣಗಾಡುತ್ತಿದ್ದೇನೆ ಎಂದು ಭಾವಿಸಿದೆ. ನಾನು ನನ್ನ ಸಮಯ, ಪ್ರಯತ್ನಗಳು ಮತ್ತು ಭಾವನೆಗಳನ್ನು ಮೀಸಲಿಟ್ಟ ವಿಷಯಗಳನ್ನು ಅನ್ವೇಷಿಸಲು ಮತ್ತು ಅರ್ಥಮಾಡಿಕೊಳ್ಳಲು ಪ್ರಾರಂಭಿಸಿದ್ದೇನೆ. ನಾನು ಇಲ್ಲಿಗೆ ಸಂಪೂರ್ಣವಾಗಿ ಹೊಂದಿಕೊಳ್ಳಬಹುದಾದರೂ, ನಾನು ಇಲ್ಲಿಗೆ ಸೇರಿಲ್ಲ ಎಂದು ನನಗೆ ಈಗ ಅರ್ಥವಾಗಿದೆ.

ಈ ಕ್ಷೇತ್ರವು ನಿಜಕ್ಕೂ ಬಹಳಷ್ಟು ಪ್ರೀತಿ, ಬೆಂಬಲ ಮತ್ತು ಚಪ್ಪಾಳೆಯನ್ನು ತಂದಿತು. ಆದರೆ ಇದು ನನ್ನನ್ನು ಅಜ್ಞಾನದ ಹಾದಿಗೆ ಕರೆದೊಯಿದಿದೆ. ಏಕೆಂದರೆ ನಾನು ನನಗೆ ಅರಿವಿಲ್ಲದೆ ‘ಇಮಾನ್’ (ನಂಬಿಕೆ) ಯಿಂದ ಹೊರಬಂದಿದ್ದೇನೆ. ನನ್ನ ‘ಇಮಾನ್’ಗೆ ನಿರಂತರವಾಗಿ ಹಸ್ತಕ್ಷೇಪ ಮಾಡುವ ಪರಿಸರದಲ್ಲಿ ನಾನು ಕೆಲಸ ಮಾಡುವುದನ್ನು ಮುಂದುವರಿಸಿದಾಗ, ನನ್ನ ಧರ್ಮದೊಂದಿಗಿನ ನನ್ನ ಸಂಬಂಧಕ್ಕೆ ಬೆದರಿಕೆ ಇದೆ, “ಎಂದು ಅವರು ಹೇಳಿದ್ದಾರೆ.

ಎಲ್ಲಿಯ ವರೆಗೆ ನಾನು ನನ್ನನ್ನು ಅರಿಯದೆ ಅಜ್ಞಾನದ ಹಾದಿಯಲ್ಲಿ ನಡೆಯುತ್ತಿದ್ದೆನೋ… ಅಲ್ಲಿಯವರೆಗೆ ನಾನು ಮಾಡುತ್ತಿರುವುದೆಲ್ಲ ನನಗೆ ಸರಿಯಾಗಿಯೇ ಕಂಡಿತು. ಆದರೆ ವಾಸ್ತವದಲ್ಲಿ ಹಾಗೆ ಇರಲಿಲ್ಲ. ನಾನು ನನ್ನ ಜೀವನದ ಎಲ್ಲಾ ‘ಬರಕಾ’(ಅನುಗ್ರಹ) ವನ್ನು ಕಳೆದುಕೊಂಡೆ. ನನ್ನ ‘ಇಮಾನ್’ ನ ಸ್ಥಿರ ಚಿತ್ರವನ್ನು ಸರಿಪಡಿಸಲು ನನ್ನ ಆಲೋಚನೆಗಳು ಮತ್ತು ಪ್ರವೃತ್ತಿಯನ್ನು ಸಮನ್ವಯಗೊಳಿಸಲು ನಾನು ನಿರಂತರವಾಗಿ ನನ್ನ ಆತ್ಮದೊಂದಿಗೆ ಹೋರಾಡುತ್ತಿದ್ದೆ. ಆದರೆ ಇದರಲ್ಲಿ ನಾನು ನಾನು ಶೋಚನೀಯವಾಗಿ ವಿಫಲವಾಗಿದ್ದೇನೆ. ಒಮ್ಮೆ ಮಾತ್ರವಲ್ಲ ನೂರು ಬಾರಿ ವಿಫಲವಾಗಿದ್ದೇನೆ.

ನಾನು ಮಾಡುತ್ತಿರುವುದು ಸರಿ ಅಲ್ಲ ಎಂದು ನನಗೆ ಗೊತ್ತಿತ್ತು. ಆದರೆ ನಾನು ನನ್ನ್ ಮನಶ್ಶಾಕ್ಷಿಯನ್ನು ಮೋಸ ಗೊಳಿಸುತ್ತಾ ಮುನ್ನಡೆಯುತ್ತಿದ್ದೆ. ಸಮಯ ಬಂದಾಗ ಕೊನೆ ಗೊಳಿಸ ಬಹುದು ಎಂದು ಬಾವಿಸುತ್ತಿದ್ದೆ. ನಾನು ನನ್ನನ್ನೇ ಅತ್ಯಂತ ದುರ್ಬಲ ಸ್ಥಿತಿಗೆ ದೂಡಿ ಬಿಟ್ಟಿದ್ದೆ. ನಾನಿರುವ ಪರಿಸರ ನನ್ನ ‘ಇಮಾನ್’ ಹಾಗೂ ನನ್ನ ಅಲ್ಲಾಹನೊಂದಿಗಿನ ನನ್ನ ಸಂಬಂಧವನ್ನು ಅತ್ಯಂತ ಹಾನಿ ಮಾಡಿತ್ತು.

ನಾನು ಅಲ್ಲಾಹನಲ್ಲಿ ಭರವಸೆ ಇಡುವ ಬದಲು ನನ್ನ ಸ್ವಂತದ ಮೇಲೆ ಹೆಚ್ಚು ಭರವಸೆ ಹೊಂದಲು ಪ್ರಾರಂಭಿಸಿದೆ. ಕುರಾನ್‌ನ ಶ್ರೇಷ್ಠತೆ ಮತ್ತು ದೈವಿಕತೆಯಲ್ಲಿ ನಾನು ಇದೀಗ ಶಾಂತಿಯನ್ನು ಕಂಡುಕೊಂಡಿದ್ದೇನೆ. ಅದರ ಸೃಷ್ಟಿಕರ್ತ, ಅವನ ಗುಣಲಕ್ಷಣಗಳು, ಅವನ ಕರುಣೆ ಮತ್ತು ಅವನ ಆಜ್ಞೆಗಳ ಜ್ಞಾನವನ್ನು ಪಡೆದಾಗ ಹೃದಯಗಳು ಶಾಂತಿಯನ್ನು ಕಂಡುಕೊಳ್ಳುತ್ತವೆ ಎಂದು ಝೈರಾ ಹೇಳಿಕೊಂಡಿದ್ದಾರೆ.

Check Also

ತಂದೆ ಇಲ್ಲದೆ ಬೆಳೆದ ಇಲ್ಮಾ ಅಫ್ರೋಝ ಅವರ ಯಶಸ್ವಿ IPS ಪಯಣ

ಸಂದೇಶ ಇ-ಮ್ಯಾಗಝಿನ್: ನಾನು ಬಡ ಕುಟುಂಬದಲ್ಲಿ ಹುಟ್ಟಿದ್ದು, ನನ್ನ ಬಡತನವೇ ನನ್ನ ಸಾಧನೆಗೆ ಅಡ್ಡಿ ಇಲ್ಲದಿದ್ದಲ್ಲಿ ಸಾಧನೆ ಮಾಡುತ್ತಿದ್ದೆ ಎಂದು …

Leave a Reply

Your email address will not be published. Required fields are marked *