Monday , July 22 2019
Breaking News
Home / ಆರೋಗ್ಯ / ರೋಗಗಳಿಂದ ದೂರವಿರಲು ಕಪ್ಪು ದ್ರಾಕ್ಷಿ ಸೇವಿಸಿ

ರೋಗಗಳಿಂದ ದೂರವಿರಲು ಕಪ್ಪು ದ್ರಾಕ್ಷಿ ಸೇವಿಸಿ

ಕಪ್ಪು ದ್ರಾಕ್ಷಿ ಇಷ್ಟಪಡುವವರಿಗೆ ಇಲ್ಲಿದೆ ಸಿಹಿ ಸುದ್ದಿ. ಒಳ್ಳೆಯ ರುಚಿಯೊಂದಿಗೆ ದೇಹದ ಕೊಬ್ಬನ್ನು ಕರಗಿಸುವ ಸುಲಭ ಮಾರ್ಗ ಇರಬೇಕಾದರೆ ಇನ್ನೂ ಏತಕೆ ಚಿಂತೆ? ಕಪ್ಪು ದ್ರಾಕ್ಷಿಯಲ್ಲಿರುವ ಅನೇಕ ಉಪಯೋಗಗಳನ್ನು ತಿಳಿದುಕೊಂಡು ನೀವೂ ಪ್ರಯತ್ನಿಸಿ ನೋಡಿ.

Image result for black grapes

ಕಪ್ಪು ದ್ರಾಕ್ಷಿ ಕೊಂಚ ಹುಳಿ ಆದರೂ ಇದರ ಗಾಢ ಬಣ್ಣ ಹಾಗೂ ಇದರಲ್ಲಿರುವ ಪೋಷಕಾಂಶಗಳು ಇದನ್ನು ಆರೋಗ್ಯಕರ ಆಹಾರವನ್ನಾಗಿಸಿದೆ. ಕಪ್ಪು ದ್ರಾಕ್ಷಿಯ ಸೇವನೆಯಿಂದ ದೇಹದ ಬೊಜ್ಜು ಕರಗಿಸಿ ಉತ್ತಮ ಆರೋಗ್ಯ ಪಡೆಯಬಹುದೆಂದು ಅಮೆರಿಕದ ಮಿಚಿಗನ್ ವಿಶ್ವವಿದ್ಯಾಲಯದಲ್ಲಿ ನಡೆಸಿದ ಅಧ್ಯಯನದಿಂದ ತಿಳಿದು ಬಂದಿದೆ.

ಪೂರ್ವ ಯೂರೋಪ್​ನಲ್ಲಿ ಅತ್ಯಂತ ಪ್ರಾಚೀನ ಕಾಲದಲ್ಲಿಯೇ ಕಪ್ಪು ದ್ರಾಕ್ಷಿಯನ್ನು ಬೆಳೆಯಲಾಗುತ್ತಿತ್ತು. ಇದರ ಮೂಲ ಅಫ್ಘಾನಿಸ್ತಾನದಲ್ಲಿರುವ ಕಪ್ಪು ಸಮುದ್ರ ತೀರದ ಆಗ್ನೇಯ ಭಾಗದ ಪ್ರದೇಶವಿರಬಹುದು ಎಂದು ಭಾವಿಸಲಾಗಿದೆ. ಅಲ್ಲದೆ ದಕ್ಷಿಣ ಹಾಗೂ ಈಶಾನ್ಯ ಅಮೆರಿಕದಿಂದಲೂ ಕೆಲವು ಹೊಸ ತಳಿಗಳು ಹುಟ್ಟಿಕೊಂಡಿವೆ.

ಹಸಿರು ದ್ರಾಕ್ಷಿ ಮತ್ತು ಕಪ್ಪು ದ್ರಾಕ್ಷಿಗಳು ಬಣ್ಣದಲ್ಲಿ ಭಿನ್ನವೇ ಹೊರತು ಇದರ ಪೋಷಕಾಂಶಗಳು ಹೆಚ್ಚೂ ಕಡಿಮೆ ಒಂದೇ ಆಗಿವೆ. ಆದರೆ ಕಪ್ಪು ದ್ರಾಕ್ಷಿಯ ಬಣ್ಣವೇ ಇದನ್ನು ಹೆಚ್ಚು ಆಕರ್ಷಕವಾಗಿಸಿದೆ. ಬನ್ನಿ, ಕಪ್ಪು ದ್ರಾಕ್ಷಿಯ ಸೇವನೆಯಿಂದ ಪಡೆಯಬಹುದಾದ ಪ್ರಯೋಜನಗಳನ್ನು ನೋಡೋಣ.

ಕಪ್ಪು ದ್ರಾಕ್ಷಿಯ ಸೇವನೆಯಿಂದಾಗುವ ಪ್ರಯೋಜನಗಳು:

ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ನಿಯಂತ್ರಿಸುತ್ತದೆ: ಕಪ್ಪು ದ್ರಾಕ್ಷಿಯ ಸೇವನೆಯಿಂದ ಮಧುಮೇಹವನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ. ಇದರಲ್ಲಿರುವ ಪೋಷಕಾಂಶ ದೇಹದಲ್ಲಿ ಇನ್ಸುಲಿನ್ ಉತ್ಪನ್ನಕ್ಕೆ ಹೆಚ್ಚಿನ ಪ್ರಚೋದನೆ ನೀಡುತ್ತದೆ. ಇದು ವಿಶೇಷವಾಗಿ ಟೈಪ್ ಒನ್​ ಮಧುಮೇಹಿಗಳಿಗೆ ವರದಾನವಾಗಿದ್ದು ಮಧುಮೇಹವನ್ನು ಸಾಕಷ್ಟು ಮಟ್ಟಿಗೆ ಕಡಿಮೆಗೊಳಿಸುತ್ತದೆ.

Related image

ಮೆದುಳಿನ ಕ್ಷಮತೆಯನ್ನು ಹೆಚ್ಚಿಸುತ್ತದೆ: ನಿಯಮಿತವಾಗಿ ಕಪ್ಪು ದ್ರಾಕ್ಷಿಯನ್ನು ಸೇವಿಸುವ ಮೂಲಕ ಏಕಾಗ್ರತೆ, ಸ್ಮರಣಶಕ್ತಿ ಹೆಚ್ಚುವುದು ಹಾಗೂ ಮೈಗ್ರೇನ್ ಕಡಿಮೆಯಾಗಲೂ ನೆರವಾಗುತ್ತದೆ. ಅಲ್ಲದೇ ಸ್ಮರಣಶಕ್ತಿ ಕುಂದುವುದು, ಮರೆಗುಳಿತನ ಕಾಯಿಲೆ ಆವರಿಸುವುದು ಮೊದಲಾದ ತೊಂದರೆಗಳಿಂದ ರಕ್ಷಿಸುತ್ತದೆ. ಒಟ್ಟಾರೆಯಾಗಿ ಕಪ್ಪು ದ್ರಾಕ್ಷಿ ಮೆದುಳಿನ ರಕ್ಷಕನಾಗಿ ಕಾರ್ಯನಿರ್ವಹಿಸುತ್ತದೆ.

Image result for brain efficiency

ಹೃದಯದವನ್ನೂ ರಕ್ಷಿಸುತ್ತದೆ: ಇದರಲ್ಲಿರುವ ಪೋಷಕಾಂಶಗಳು ಹೃದಯದ ಮೇಲೆ ಉಂಟಾಗುವ ಹಾನಿಯನ್ನು ತಡೆದು ಹೃದಯದ ಸ್ನಾಯುಗಳನ್ನು ಬಲಪಡಿಸಲು ನೆರವಾಗುತ್ತದೆ. ದೇಹದಲ್ಲಿರುವ ಕೊಬ್ಬಿನ ಮಟ್ಟಗಳನ್ನು ಕಡಿಮೆ ಮಾಡಿ ನಿಯಂತ್ರಣದಲ್ಲಿಡಲು ನೆರವಾಗಿ ತನ್ಮೂಲಕ ಹೃದಯಸಂಬಂಧಿ ರೋಗಗಳಿಂದ ರಕ್ಷಣೆ ಒದಗಿಸುತ್ತದೆ.

Image result for heart safe

ಕಣ್ಣಿನ ದೃಷ್ಟಿಯನ್ನು ಉತ್ತಮಗೊಳಿಸುತ್ತದೆ: ಕಪ್ಪು ದ್ರಾಕ್ಷಿಯಲ್ಲಿರುವ ಕ್ಯಾರೊಟಿನಾಯ್ಡ್ ಪೋಷಕಾಂಶಗಳು ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳಲು ಅಗತ್ಯವಾಗಿವೆ. ಕಪ್ಪು ದ್ರಾಕ್ಷಿಯ ನಿಯಮಿತ ಸೇವನೆಯಿಂದ ಕಣ್ಣಿಗೆ ರಕ್ಷಣೆ ಒದಗಿಸಿ ಕುರುಡುತನ ಎದುರಾಗದಂತೆ ತಡೆಯುತ್ತವೆ.

Image result for eye power

ಕ್ಯಾನ್ಸರ್ ನಿಂದ ರಕ್ಷಣೆ ಒದಗಿಸುತ್ತದೆ: ಕಪ್ಪು ದ್ರಾಕ್ಷಿಗಳಲ್ಲಿ ಆ್ಯಂಟಿ ಆಕ್ಸಿಡೆಂಟ್ ಗುಣಲಕ್ಷಣಗಳಿವೆ. ಇದು ಸ್ತನ ಕ್ಯಾನ್ಸರ್ ಸೇರಿದಂತೆ ಎಲ್ಲ ರೀತಿಯ ಕ್ಯಾನ್ಸರ್​ ಅನ್ನು ಎದುರಿಸಲು ಬಹಳ ಪರಿಣಾಮಕಾರಿಯಾಗಿದೆ. ಕಪ್ಪು ದ್ರಾಕ್ಷಿಗಳಲ್ಲಿ ಕಂಡುಬರುವ ಸಂಯುಕ್ತ ಪೋಷಕಾಂಶವಾಗಿದ್ದು ಕ್ಯಾನ್ಸರ್ ಕೋಶಗಳನ್ನು ನಾಶಪಡಿಸುವ ಸಾಮರ್ಥ್ಯವನ್ನು ಹೊಂದಿದೆ.

Image result for cancer

ಆರೋಗ್ಯಕರ ಕೂದಲು ಪಡೆಯಲು ನೆರವಾಗುತ್ತದೆ: ಕಪ್ಪು ದ್ರಾಕ್ಷಿಗಳಲ್ಲಿ ವಿಟಮಿನ್ ಇ ಹೆಚ್ಚಿನ ಪ್ರಮಾಣದಲ್ಲಿದೆ. ಇದು ವಿಶೇಷವಾಗಿ ನೆತ್ತಿಯ ಚರ್ಮದಲ್ಲಿ ರಕ್ತ ಪರಿಚಲನೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಕೂದಲು ಉದುರುವಿಕೆ, ವಿಭಜಿತ ತುದಿಗಳು ಮತ್ತು ಅಕಾಲಿಕ ಕೂದಲು ನೆರಯುವುದರಿಂದ ರಕ್ಷಣೆ ಒದಗಿಸುತ್ತದೆ. ಅಲ್ಲದೇ ತುರಿಕೆ ಹಾಗೂ ತಲೆಹೊಟ್ಟು ಉಂಟಾಗದಿರಲು ನೆರವಾಗುತ್ತದೆ.

Image result for best hair

ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ: ಕಪ್ಪು ದ್ರಾಕ್ಷಿಗಳಲ್ಲಿರುವ ವಿಟಮಿನ್ ಕೆ ಮತ್ತು ಎ, ಖನಿಜಗಳು, ಸಕ್ಕರೆ ಮತ್ತು ಸಾವಯವ ಆಮ್ಲಗಳು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ನೆರವಾಗುತ್ತವೆ. ಅಲ್ಲದೇ ದ್ರಾಕ್ಷಿಯಲ್ಲಿರುವ ಕರಗುವ ನಾರು ಪ್ರಮುಖವಾಗಿ ಮಲಬದ್ದತೆ, ಅಜೀರ್ಣ ಹಾಗೂ ಮೂತ್ರಪಿಂಡದಲ್ಲಿನ ಕಲ್ಲುಗಳ ತೊಂದರೆಯೂ ಶಮನವಾಗುತ್ತದೆ.

Image result for Immune system

ತೂಕ ಇಳಿಸಲು ನೆರವಾಗುತ್ತದೆ: ಕಪ್ಪು ದ್ರಾಕ್ಷಿಯಲ್ಲಿರುವ ಆ್ಯಂಟಿ ಆಕ್ಸಿಡೆಂಟುಗಳು ದೇಹದಲ್ಲಿರುವ ಅನಗತ್ಯ ವಿಶಕಾರಿ ವಸ್ತುಗಳನ್ನು ಹೊರಹಾಕಲು ನೆರವಾಗುತ್ತದೆ ಹಾಗೂ ತನ್ಮೂಲಕ ತೂಕ ಇಳಿಯಲು ಸಾಧ್ಯವಾಗುತ್ತದೆ. ಇವುಗಳಲ್ಲಿ ಕ್ಯಾಲೋರಿಗಳು ಕಡಿಮೆ ಇದ್ದು ನಿತ್ಯವೂ ಕೊಂಚ ಪ್ರಮಾಣದಲ್ಲಿ ಸೇವಿಸುವ ಮೂಲಕ ತೂಕ ಇಳಿಸುವ ಪ್ರಯತ್ನಗಳಿಗೆ ಹೆಚ್ಚಿನ ಬಲ ಹಾಗೂ ಶೀಘ್ರವಾಗಿ ಇಳಿಯಲು ಸಾಧ್ಯವಾಗುತ್ತದೆ.

Image result for weight loss

ತ್ವಚೆಯ ಆರೋಗ್ಯ ಹೆಚ್ಚಿಸುತ್ತದೆ: ಕಪ್ಪು ದ್ರಾಕ್ಷಿಗಳಲ್ಲಿ ವಿಟಮಿನ್ ಸಿ ಮತ್ತು ವಿಟಮಿನ್ ಇ ಗಳನ್ನು ಹೊಂದಿದ್ದು ಚರ್ಮದಿಂದ ನಷ್ಟವಾಗಿದ ಜೀವಕೋಶಗಳನ್ನು ಹೊಸದಾಗಿ ನಿರ್ಮಿಸಲು ನೆರವಾಗುತ್ತದೆ. ಕಪ್ಪು ದ್ರಾಕ್ಷಿಗಳು ತೇವಾಂಶವನ್ನು ಚರ್ಮದಲ್ಲಿ ಉಳಿಸಿಕೊಳ್ಳಲು ನೆರವಾಗುವ ಮೂಲಕ ತ್ವಚೆಯ ಆರೋಗ್ಯವನ್ನು ಹೆಚ್ಚಿಸುತ್ತದೆ.

Image result for skin

ಕಪ್ಪು ದ್ರಾಕ್ಷಿಯಲ್ಲಿಯೂ ಹಲವಾರು ವಿಧಗಳಿದ್ದು ಚಿಕ್ಕ ಶೇಂಗಾಬೀಜದ ಗಾತ್ರದಿಂದ ತೊಡಗಿ ಅರ್ಧ ಬೆರಳಿನಷ್ಟು ಗಾತ್ರದವೂ ಇವೆ. ಹುಳಿಮಿಶ್ರಿತ ಸಿಹಿತಿರುಳನ್ನು ಹೊಂದಿರುವ ಕಪ್ಪು ದ್ರಾಕ್ಷಿಯನ್ನು ಹಸಿಯಾಗಿಯೂ, ಒಣಗಿಸಿ ಒಣದ್ರಾಕ್ಷಿಯ ರೂಪದಲ್ಲಿಯೂ, ಮಿಕ್ಸಿಯಲ್ಲಿ ಗೊಟಾಯಿಸಿ ಜ್ಯೂಸ್ ರೂಪದಲ್ಲಿಯೂ ಸಹ ಸೇವಿಸಬಹುದು.

ಕೃಪೆ: News18 ಕನ್ನಡ

Check Also

ಜೇನು ಶುದ್ಧವೋ ಅಶುದ್ಧವೋ ಅಂತ ಈ 4 ವಿಧಾನಗಳಿಂದ ಪರೀಕ್ಷೆ ಮಾಡಿ ನೋಡಿ

207ಸಂದೇಶ ಇ-ಮ್ಯಾಗಝಿನ್: ಜೇನು ಎಂಬುದು ಪ್ರಾಕೃತಿಕವಾಗಿ ದೊರೆಯುವಂತಹ ಒಂದು ಶುದ್ಧ ಆಹಾರ ಪದಾರ್ಥವಾಗಿದೆ. ಇದು ಸ್ವಾದದಲ್ಲಿ ಎಷ್ಟು ಸಿಹಿಯೋ ಅಷ್ಟೇ …

Leave a Reply

Your email address will not be published. Required fields are marked *