Friday , April 3 2020
Breaking News
Home / ವೀಡಿಯೋ / ಟೋಪಿ ಧರಿಸಿ ಈದ್ ಶುಭಾಶಯ ಕೋರಿದ ಪೊಲೀಸ್; ಕ್ರಮಕ್ಕೆ ಆಗ್ರಹಿಸಿದ ರಾಜಾಸಿಂಗ್

ಟೋಪಿ ಧರಿಸಿ ಈದ್ ಶುಭಾಶಯ ಕೋರಿದ ಪೊಲೀಸ್; ಕ್ರಮಕ್ಕೆ ಆಗ್ರಹಿಸಿದ ರಾಜಾಸಿಂಗ್

ಸಂದೇಶ ಇ-ಮ್ಯಾಗಝಿನ್: ತನ್ನ ಮುಸ್ಲಿಮ್ ವಿರೋಧಿ ನಿಲುವು ಹಾಗೂ ವಿವಾದಿತ ಹೇಳಿಕೆಗಳಿಂದಲೇ ಹೆಚ್ಚು ಪ್ರಚಾರದಲ್ಲಿರುವ ಹೈದರಾಬಾದ್ ಘೋಷಾಮಹಲ್ ಶಾಸಕ ರಾಜಾಸಿಂಗ್ ಈದ್ ಶುಭಾಶಯ ಕೋರಿದ ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಾ ಟ್ವೀಟ್ ಮಾಡಿದ್ದಾರೆ. ಅಷ್ಟಕ್ಕೂ ರಾಜಾಸಿಂಗ್ ಆಕ್ರೋಶಕ್ಕೆ ಕಾರಣವೇನೆಂದರೆ ಪೊಲೀಸ್ ಅಧಿಕಾರಿಯೊಬ್ಬರು ಮುಸ್ಲಿಮರಿಗೆ ಈದ್ ಶುಭಾಶಯ ಕೋರಿ ವಿಡಿಯೋ ಮಾಡಿದ್ದರು. ಈ ವೀಡಿಯೋದಲ್ಲಿ ಆ ಅಧಿಕಾರಿ ತನ್ನ ಪೊಲೀಸ್ ಸಮವಸ್ತ್ರದಲ್ಲಿದ್ದು, ಮುಸ್ಲಿಮರ ಸಾಂಪ್ರದಾಯಿಕ ಟೋಪಿ ಧರಿಸಿದ್ದರು. ಟ್ವಿಟ್ಟರ್‌ನಲ್ಲಿ ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ರಾಜಾಸಿಂಗ್ “ಈ ತೆಲಂಗಾಣದ ಪೊಲೀಸ್ ಅಧಿಕಾರಿ ಮುಸ್ಲಿಮರ ಟೋಪಿ ಧರಿಸಿ ಈದ್ ಶುಭಾಶಯ ಹೇಳುತ್ತಿದ್ದಾರೆ. ಇವರು ಪೊಲೀಸ್ ಟೋಪಿ ಕಳಚಿಟ್ಟಿದ್ದಾರೆ. ಪೊಲೀಸ್ ಠಾಣೆಯಲ್ಲಿ ಮುಸ್ಲಿಮರ ಟೋಪಿ ಧರಿಸಲು ಅನುಮತಿ ನೀಡಿದವರು ಯಾರು. ಈ ಪೊಲೀಸರು ದಿಪಾವಳಿ, ದಸರಾ ಸಮಯದಲ್ಲಿ ಹಿಂದೂಗಳನ್ನು ಬಂಧಿಸುತ್ತಾರೆ. ಇವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ರಾಜಾಸಿಂಗ್ ಟ್ವೀಟ್‌ಗೆ ತೆಲಂಗಾಣ ಪೊಲೀಸರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

Check Also

ತನ್ನ ಉಳಿತಾಯದ ಹಣದಲ್ಲಿ ಹಜ್‌ಗೆ ಹೊರಟ ತಂದೆಗೆ ಮಕ್ಕಳು ಮಾಡಿದರು ಈ ಸ್ಥಿತಿ

ಸಂದೇಶ ಇ-ಮ್ಯಾಗಝಿನ್: ಪಾಕಿಸ್ತಾನದ ಸಿಂಧ್‌ನಲ್ಲಿ ತಂದೆಯು ಹಣವನ್ನು ಪುತ್ರರಿಗೆ ಕೊಡುವ ಬದಲು ಹಜ್‌ಗಾಗಿ ಬಳಸಿದ್ದಕ್ಕಾಗಿ ವೃದ್ಧ ತಂದೆಯನ್ನು ಪುತ್ರರು ಥಳಿಸಿದ …

Leave a Reply

Your email address will not be published. Required fields are marked *