Monday , July 22 2019
Breaking News
Home / ವೀಡಿಯೋ / ಗೋಡ್ಸೆ ಭಯೋತ್ಪಾದಕ ಎಂದಿದ್ದ ಕಮಲ್ ಹಾಸನ್‌ಗೆ ವೀಡಿಯೋ ಮಾಡಿ ಬೆದರಿಕೆ ಹಾಕಿದ ರಾಜಾಸಿಂಗ್

ಗೋಡ್ಸೆ ಭಯೋತ್ಪಾದಕ ಎಂದಿದ್ದ ಕಮಲ್ ಹಾಸನ್‌ಗೆ ವೀಡಿಯೋ ಮಾಡಿ ಬೆದರಿಕೆ ಹಾಕಿದ ರಾಜಾಸಿಂಗ್

ಸಂದೇಶ ಇ-ಮ್ಯಾಗಝಿನ್: ಸ್ವಾತಂತ್ರ್ಯ ಭಾರತದ ಪ್ರಥಮ ಭಯೋತ್ಪಾದಕ ಹಿಂದೂ ಆಗಿದ್ದ, ಮತ್ತು ಆತನ ಹೆಸರು ನಾಥೂರಾಮ್ ಗೋಡ್ಸೆ ಎಂದಾಗಿತ್ತು ಎಂದು ನಿನ್ನೆ ಹೇಳಿಕೆ ನೀಡಿ ವಿವಾದಕ್ಕೆ ಗುರಿಯಾಗಿದ್ದ ನಟ ಕಮಲ್ ಹಾಸನ್‍‌ಗೆ ಹೈದರಾಬಾದ್ ಘೋಷಾಮಹಲ್ ಶಾಸಕ ರಾಜಾಸಿಂಗ್ ವೀಡಿಯೋ ಮಾಡಿ ಬೆದರಿಕೆ ಒಡ್ದಿದ್ದಾರೆ. “ನಾಥೂರಾಮ್ ಗೋಡ್ಸೆ ಜೀ ಯವರನ್ನು ಭಯೋತ್ಪಾದಕನೆಂದ ಹಾಗೂ ಹಿಂದೂ ಭಯೋತ್ಪಾದಕನೆಂದ ಕಮಲ್ ಹಾಸನ್ ಹಿಂದೂ ಸಮಾಜದ ಕ್ಷಮೆ ಕೇಳಬೇಕು. ಇಲ್ಲದೇ ಇದ್ದಲ್ಲಿ ಪರಿಣಾಮ ಎದುರಿಸಬೇಕಾಗುತ್ತದೆ. ಕಮಲ್ ಹಾಸನ್‌ಗೆ ಪಾಠ ಕಲಿಸಲು ನಾನು ಬೇಕಾಗಿಲ್ಲ. ನನ್ನ ಕೆಳಗಿರುವ ಸಣ್ಣ ಪುಟ್ಟ ಕಾರ್ಯ ಕರ್ತರು ಸಾಕು” ಎಂದು ಹೇಳಿದ್ದಾರೆ. ತಮಿಳುನಾಡಿನ ಅರವಕುರಿಚ್ಚಿ ವಿಧಾನ ಸಭಾ ಕ್ಷೇತ್ರದಲ್ಲಿ ಮೇ 19 ನಡೆಯಲಿರುವ ಉಪಚುಣಾವಣೆಯಲ್ಲಿ ಸ್ಪರ್ಧಿಸುತ್ತಿರುವ ತಮ್ಮ ನೂತನ ‘ಮಕ್ಕಳ್ ನೀದಿ ಮೈಯಮ್’ ಪಕ್ಷದ ಅಭ್ಯರ್ಥಿ ಪರ ಭಾನುವಾರ ಪ್ರಚಾರ ಮಾಡುತ್ತಿದ್ದ ಕಮಲ್ ಹಾಸನ್ ಗಾಂಧೀಜಿಯವರನ್ನು ಕೊಂದಿದ್ದ ಗೋಡ್ಸೆಯನ್ನು ಭಯೋತ್ಪಾದಕನೆಂದಿದ್ದರು.

Check Also

ಕೋರ್ಟ್ ವಿಚರಣೆಯನ್ನು ತಪ್ಪಿಸಿ ಈದ್ ಆಚರಿಸಿದ ಸಾಧ್ವಿ ಪ್ರಜ್ಞಾ

3111ಸಂದೇಶ ಇ-ಮ್ಯಾಗಝಿನ್: ಭೋಪಾಲ್ ಸಂಸದೆ ಹಾಗೂ ಮಾಲೇಗಾಂವ್ ಸ್ಪೋಟ ಪ್ರಕರಣದ ಆರೋಪಿ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಮತ್ತೊಮ್ಮೆ ವಿವಾದದ …

Leave a Reply

Your email address will not be published. Required fields are marked *