Tuesday , October 15 2019
Breaking News
image credit: Hariyana express
Home / ರಾಜಕೀಯ / ಹರಿಯಾಣ: ಜೋರಾಗಿ ಭಾರತ್ ಮಾತಾಜಿ ಜೈ ಅನ್ನದೇ ಇದ್ದದ್ದಕ್ಕೇ ಪಾಕಿಸ್ತಾನಿಗಳು ಎಂದ ಬಿಜೆಪಿ ಅಭ್ಯರ್ಥಿ

ಹರಿಯಾಣ: ಜೋರಾಗಿ ಭಾರತ್ ಮಾತಾಜಿ ಜೈ ಅನ್ನದೇ ಇದ್ದದ್ದಕ್ಕೇ ಪಾಕಿಸ್ತಾನಿಗಳು ಎಂದ ಬಿಜೆಪಿ ಅಭ್ಯರ್ಥಿ

ಸಂದೇಶ ಇ-ಮ್ಯಾಗಝಿನ್: ಹರಿಯಾಣದಲ್ಲಿ ವಿಧಾನಸಭಾ ಚುನಾವಣೆ ಕಾವೇರಿದ್ದು, ಈ ಬಾರಿ ಬಿಜೆಪಿಯಿಂದ ಸೆಲೆಬ್ರಿಟಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಕಣಕ್ಕಿಳಿಸಿದೆ. ಟಿಕ್ ಟಾಕ್ ಸ್ಟಾರ್ ಸೊನಾಲಿ ಪೋಘಟ್ ಕೂಡ ಈ ಬಾರಿ ಬಿಜೆಪಿಯಿಂದ ಟಿಕೆಟ್ ಗಳಿಸಿದ್ದಾರೆ. ಮಂಗಳವಾರ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ವೇದಿಕೆಯಿಂದ ‘ಭಾರತ್ ಮಾತಾ ಕಿ ಜೈ’ ಘೋಷಣೆ ಕೂಗಿರುವ ಸೊನಾಲಿ ಪೋಘಟ್ ಸಭೆಯಲ್ಲಿ ನೆರೆದಿದ್ದ ಜನರಲ್ಲಿ ಪುನಾರಾವರ್ತಿಸುವಂತೆ ಹೇಳಿದರು. ಆದರೆ ಜನರು ಅಷ್ಟೊಂದು ಜೋರಾಗಿ ಘೋಷಣೆ ಕೂಗದ ಕಾರಣ ಕೋಪೋದ್ರಿಕ್ತರಾದ ಸೊನಾಲಿ ‘ನಿಮಗೆ ನಾಚಿಕೆ ಯಾಗಬೇಕು. ಪಾಕಿಸ್ತಾನದಿಂದ ಬಂದಿದ್ದೀರಾ ನೀವು. ಭಾರತದಲ್ಲಿದ್ದು ನಿಮ್ಮಂತ ಜನರು ಭಾರತ್ ಮಾತಾಕೀ ಜೈ ಹೇಳಲ್ಲ. ಪಾಕಿಸ್ತಾನಿಗಳು ನೀವು’ ಎಂದು ಏಕಾಏಕಿ ತನ್ನ ಸಭೆಗೆ ನೆರೆದಿದ್ದ ಕಾರ್ಯಕರ್ತರನ್ನು ಜರೆದಿದ್ದಾರೆ.

ಟಿಕ್ ಟಾಕ್ ನಲ್ಲಿ ವೀಡಿಯೋ ಮಾಡಿ ಸಾಕಷ್ಟು ಅಭಿಮಾನಿಗಳನ್ನು ಹೊಂದಿ ಸೋನಾಲಿ ಪೋಘಟ್ ಈ ಬಾರಿ ಬಿಜೆಪಿಯಿಂದ ಟಿಕೆಟ್ ಗಿಟ್ಟಿಸುವಲ್ಲಿ ಸಫಲರಾಗಿದ್ದು, ಹರಿಯಾಣದ ಮಾಜಿ ಮುಖ್ಯಮಂತ್ರಿ ಭಜನ್ ಲಾಲ್ ಅವರ ಪುತ್ರ ಕಾಂಗ್ರೇಸ್ ಅಭ್ಯರ್ಥಿ ಕುಲ್ ದೀಪ್ ಬಿಸ್ನೋಯ್ ಅವರ ವಿರುದ್ಧ ಸ್ಪರ್ಧಿಸುತ್ತಿದ್ದಾರೆ.

Check Also

ಗುಜರಾತಿನ ಮಾಜಿ ಕಾಂಗ್ರೇಸ್ ಶಾಸಕ ಅಲ್ಪೇಶ್ ಠಾಕೂರ್ ಬಿಜೆಪಿಗೆ ಸೇರ್ಪಡೆ

000ಸಂದೇಶ ಇ-ಮ್ಯಾಗಝಿನ್: ಗುಜರಾತ್‌ನ ಕಾಂಗ್ರೆಸ್ ಮಾಜಿ ಶಾಸಕರಾದ ಅಲ್ಪೇಶ್ ಠಾಕೋರ್ ಮತ್ತು ಧವಲ್ಸಿಂಗ್ ಜಲಾ ಅವರು ಗುರುವಾರ ಬಿಜೆಪಿಗೆ ಸೇರಿದರು. …

Leave a Reply

Your email address will not be published. Required fields are marked *