Friday , April 3 2020
Breaking News
Home / ರಾಷ್ಟ್ರೀಯ / ಬಿಹಾರ: ಅಪ್ರಾಪ್ತ ಯುವತಿಯ ಸಾಮೂಹಿಕ ಅತ್ಯಾಚಾರ, ಮುಸ್ಲಿಮರ ವಿರುದ್ಧ ಅಪಪ್ರಚಾರ

ಬಿಹಾರ: ಅಪ್ರಾಪ್ತ ಯುವತಿಯ ಸಾಮೂಹಿಕ ಅತ್ಯಾಚಾರ, ಮುಸ್ಲಿಮರ ವಿರುದ್ಧ ಅಪಪ್ರಚಾರ

ಸಂದೇಶ ಇ-ಮ್ಯಾಗಝಿನ್: ಕಳೆದ ವಾರ ಸೋಶಿಯಲ್ ಮೀಡಿಯಾದಲ್ಲಿ ಯುವತಿಯೊಬ್ಬಳ ಸಾಮೂಹಿಕ ಅತ್ಯಾಚಾರದ ವೀಡಿಯೋ ವೈರಲ್ ಆಗಿತ್ತು. ಪ್ರೇಮಿಯೊಂದಿಗೆ ಸುತ್ತಾಡಲು ತೆರಳಿದ್ದ ಅಪ್ರಾಪ್ತಯುವತಿಯನ್ನು ನಾಲ್ಕೈದು ದುಷ್ಟರು ಸೇರಿ ಅತ್ಯಾಚಾರ ಮಾಡುತ್ತಿರುವುದು ವೀಡಿಯೋದಲ್ಲಿ ದಾಖಲಾಗಿತ್ತು. ಯುವತಿ ಅತ್ಯಾಚಾರಿಗಳೊಂದಿಗೆ ತನ್ನನ್ನು ಬಿಟ್ಟು ಬಿಡುವಂತೆ ಪರಿ ಪರಿಯಾಗಿ ಬೇಡಿಕೊಂಡರೂ ಯುವತಿಗೆ ಮತ್ತು ಆಕೆಯ ಪ್ರೇಮಿಗೆ ಹಲ್ಲೆ ನಡೆಸಿ ಅತ್ಯಾಚಾರಿಗಳು ತಮ್ಮ ಕಾರ್ಯ ಸಾಧಿಸಿದ್ದರು.

ವೀಡಿಯೋದಲ್ಲಿ ಅತ್ಯಾಚಾರಿಗಳು ಕೇಸರಿ ಶಾಲು ಧರಿಸಿದ್ದು, ಹಿಂದೂ ಸಂಘಟನೆಗಳ ಕಾರ್ಯಕರ್ತರಿರಬಹುದು ಎಂಬ ಗುಮಾನಿ ಎದ್ದಿತ್ತು. ಆದರೆ ಕೆಲವರು ಈ ವಿಷಯದಲ್ಲಿ ಮುಸ್ಲಿಮರ ಮೇಲೆ ಗೂಬೆ ಕೂರಿಸಲು ಪ್ರಯತ್ನಿಸಿದ್ದು, ಹಿಂದೂ ಸಂಘಟನೆಗಳಿಗೆ ಕೆಟ್ಟ ಹೆಸರು ತರುವ ಸಲುವಾಗಿ ಮುಸ್ಲಿಮರು ಕೇಸರಿ ಶಾಲು ಹೊದ್ದು ಅತ್ಯಾಚಾರ ನಡೆಸಿದ್ದಾರೆ ಎಂದು ಅಪಪ್ರಚಾರ ಮಾಡಲಾಗುತ್ತಿದೆ. ಅತ್ಯಾಚಾರಿಗಳ ಹೆಸರು ಸದ್ದಾಂ, ಮೊಹಿನುದ್ದೀನ್ ಎಂದಾಗಿದೆ ಎಂದೂ ವದಂತಿ ಹಬ್ಬಿಸಲಾಗಿದೆ.

ಘಟನೆಯ ಸತ್ಯಾಸತ್ಯತೆ ಏನು ಗೊತ್ತೆ?
ಈ ಘಟನೆ ಬಿಹಾರದ ನಳಂದ ಜಿಲ್ಲೆಯ ರಾಜಗಿರಿ ಠಾಣಾ ವ್ಯಾಪ್ತಿಯ ಲೆಲಿನ್ ನಗರ ಎಂಬಲ್ಲಿ ನಡೆದಿದೆ. ಯುವತಿ ತನ್ನ ಪ್ರೇಮಿಯೊಂದಿಗೆ ಸುತ್ತಾಡಲು ಬೆಟ್ಟ ಪ್ರದೇಶಕ್ಕೆ ಹೋಗಿದ್ದಾಗ ಅಲ್ಲಿಗೆ ಆಗಮಿಸಿದ್ದ ಅತ್ಯಾಚಾರಿ ಯುವಕರು ಜೋಡಿಯನ್ನು ಹೆದರಿಸಿ ಯುವತಿಯನ್ನು ಅತ್ಯಾಚಾರ ಮಾಡಿದ್ದಾರೆ ಎನ್ನಲಾಗಿದೆ.

ಘಟನೆಯ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿ ಕಳೆದ ಬುಧವಾರ ರಾಜ್‌ಗಿರಿ ಬಂದ್ ನಡೆಸಿದ್ದಾರೆ. ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿದ್ದಾರೆ.

ಈ ಸಂಬಂದ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ಲೆಲಿನ್ ನಗರ ನಿವಾಸಿ ರಸ್ತೆ ಬದಿಯ ವ್ಯಾಪಾರಿ ಕೃಷ್ಣಾ ರಾಜವಂಶಿಯ ಪುತ್ರ ಗಂಗಾ ರಾಜವಂಶಿ, ಲೆಲಿನ್ ನಗರ ನಿವಾಸಿ ತಳ್ಳು ಗಾಡಿಯ ವ್ಯಾಪಾರಿ ಅನಿಲ್ ರಾಜವಂಶಿಯ ಮಗ ಕರಣ್ ರಾಜವಂಶಿ ಅಲಿಯಸ್ ನಂಕಾ, ರಾಮಹರಿ ಪಿಂಡ ನಿವಾಸಿ ಗುಗಲ್ ರಾಜವಂಶಿ, ಗುಲ್ಜಾರ್ ಭಾಗ್ ನಿವಾಸಿ ನಥುನ್ ಚೌಧರಿಯ ಪುತ್ರ ವಿಜಯ್ ಕುಮಾರ್, ಗುಲ್ಜಾರ್ ಭಾಗ್ ನಿವಾಸಿ ಸಮೀರ್ ಚೌಧರಿಯ ಮಗ ಸೋನು ಕುಮಾರ್ ಹಾಗೂ ಇನ್ನಿತರರನ್ನು ಬಂಧಿಸಲಾಗಿದೆ ಎಂದು ರಾಜ್ ಗಿರಿ ಪೊಲೀಸರು ತಿಳಿಸಿದ್ದಾರೆ.

ಬಂಧಿತರಲ್ಲಿ ಯಾರೂ ಮುಸ್ಲಿಮರಿಲ್ಲ!
ಅತ್ಯಾಚಾರಿಗಳು ಮುಸ್ಲಿಮರಾಗಿದ್ದು, ಹಿಂದೂ ಗಳು ಧರಿಸುವ ಶಾಲು ಧರಿಸಿ ಮೋಸ ಮಾಡಿದ್ದಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಹರಡುತ್ತಿರುವ ವದಂತಿಯಲ್ಲಿ ಉಲ್ಲೇಖಿಸಲಾಗಿದ್ದು, ವಾಸ್ತವದಲ್ಲಿ ಬಂಧಿತರಲ್ಲಿ ಹಾಗೂ ಆರೋಪಿಗಳಲ್ಲಿ ಯಾರೂ ಕೂಡ ಮುಸ್ಲಿಮರಿಲ್ಲ ಎಂದು ತಿಳಿದು ಬಂದಿದೆ. ಸಮಾಜದ ಸ್ವಾಸ್ಥ್ಯ ಕೆಡಿಸುವ ಉದ್ದೇಶದಿಂದ ಕೆಲವು ಸಮಾಜ ಘಾತುಕರು ಇಂತಹ ವದಂತಿಗಳನ್ನು ಹರಿಬಿಟ್ಟಿದ್ದಾರೆ ಎನ್ನಲಾಗಿದ್ದು, ಅವರ ವಿರುದ್ಧ ಕ್ರಮಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

Check Also

ಕೆಲಸ ದಿಂದ ವಜಾ ಮಾಡಿದ್ದಕ್ಕೆ ಮಾಜೀ ಉದ್ಯೋಗಿ ಮಾಲೀಕನಿಗೆ ಮಾಡಿದ್ದೇನು ನೋಡಿ

ಸಂದೇಶ ಇ-ಮ್ಯಾಗಝಿನ್: ಮುಂಬೈಯ ಘಟ್‌ಕೋಪರ್ ಪ್ರದೇಶದಲ್ಲಿ ರವಿವಾರ ಒಂದು ವಿಚಿತ್ರ ರೀತಿಯ ಹತ್ಯೆ ನಡೆದಿದೆ. ಪೊಲೀಸರ ಪ್ರಕಾರ ಮಾಜಿ ಉದ್ಯೋಗಿಯೊಬ್ಬ …

Leave a Reply

Your email address will not be published. Required fields are marked *