Saturday , April 4 2020
Breaking News
Home / ಆರೋಗ್ಯ / ನೀರು ಕುಡಿಯಲು ಉತ್ತಮವಾದ ಸಮಯಗಳು ಯಾವುದು ನಿಮಗಿದು ಗೊತ್ತೆ…?
water

ನೀರು ಕುಡಿಯಲು ಉತ್ತಮವಾದ ಸಮಯಗಳು ಯಾವುದು ನಿಮಗಿದು ಗೊತ್ತೆ…?

ಸಾಮಾನ್ಯವಾಗಿ ವೈದ್ಯರು ಹೇಳುವ ಪ್ರಕಾರ ಪ್ರತಿದಿನ ಕನಿಷ್ಠ ಎರಡರಿಂದ ಮೂರು ಲೀಟರ್ ನೀರನ್ನಾದರೂ ಕುಡಿಯಬೇಕು ಅಂತ ಹೇಳ್ತಾರೆ. ಹಾಗಾದರೆ ಯಾವ ಟೈಮಲ್ಲಿ ನೀರು ಕುಡಿದರೆ ನಮ್ಮ ಶರೀರಕ್ಕೆ ಒಳ್ಳೆಯದು ಎಂಬ ಪ್ರಶ್ನೆ ಉದ್ಭವಿಸುತ್ತದೆ. ಹಾಗಾದ್ರೆ ಆ ಸಮಯ ಯಾವುದು ಎಂದು ನೋಡೋಣ,

drinking-water

1. ಬೆಳಿಗ್ಗೆ ಎದ್ದ ತಕ್ಷಣ ಉಪಹಾರಕ್ಕಿಂತ ಮೊದಲು:
ನೀರು ಕುಡಿಯಲು ಈ ಸಮಯ ಬಹಳ ಉತ್ತಮ ಸಮಯ. ದಿನಾಲೂ ಹಾಸಿಗೆಯಿಂದ ಎದ್ದ ತಕ್ಷಣ ಖಾಲಿ ಹೊಟ್ಟೆಗೆ ಕನಿಷ್ಟ ಒಂದು ಗ್ಲಾಸ್ ಆದರೂ ನೀರು ಕುಡಿಯಿರಿ. ಬಿಸಿ ನೀರು ಕುಡಿದರೆ ಉತ್ತಮ. ಈ ಸಮಯದಲ್ಲಿ ಖಾಲಿ ಹೊಟ್ಟೆಗೆ ಬಿಸಿ ನೀರು ಕುಡಿದರೆ ಶರೀರದಲ್ಲಿ ಶೇಖರಣೆ ಗೊಳ್ಳುವ ಬೊಜ್ಜನ್ನು ಕೂಡ ಕರಗಿಸಲು ಇದು ನೆರವಾಗುತ್ತದೆ. ಆದುದರಿಂದ ಯಾವತ್ತೂ ಇದನ್ನು ಮಿಸ್ ಮಾಡ್ಕೋಬೇಡಿ.

2. ಊಟಕ್ಕಿಂತ ಅರ್ಧ ಗಂಟೆ ಮೊದಲು:
ಇದರಿಂದಾಗಿ ಜೀರ್ಣ ಕ್ರಿಯೆಯು ಸುಗಮವಾಗಿ ನಡೆಯಲು ಸಹಾಯಕವಾಗುತ್ತದೆ. ಊಟದ ಜೊತೆ ಅಗತ್ಯ ಬಿದ್ದರೆ ನೀರು ಕುಡಿಯಿರಿ. ಆದರೆ ಊಟದ ನಂತರ 40 ನಿಮಿಷದ ವರೆಗೆ ನೀರು ಸೇವಿಸಲೇ ಬೇಡಿ. ಊಟದ ನಂತರ ತಕ್ಷಣ ನೀರು ಕುಡಿದರೆ ನೀರು ಜೀರ್ಣರಸಗಳನ್ನು ದುರ್ಬಲಗೊಳಿಸುತ್ತದೆ ಮತ್ತು ಶರೀರವು ಪೌಷ್ಟಿಕಾಂಶಗಳನ್ನು ಹೀರಿಕೊಳ್ಳಲು ಅವಕಾಶ ನೀಡುವುದಿಲ್ಲ.

3. ಸ್ನಾನಕ್ಕಿಂತ ಮೊದಲು:
ಇದು ರಕ್ತದ ಒತ್ತಡ (ಬ್ಲಡ್ ಫ್ರೆಶರ್) ವನ್ನು ತಗ್ಗಿಸಲು ನೆರವಾಗುತ್ತದೆ.

Check Also

ಜೇನು ಶುದ್ಧವೋ ಅಶುದ್ಧವೋ ಅಂತ ಈ 4 ವಿಧಾನಗಳಿಂದ ಪರೀಕ್ಷೆ ಮಾಡಿ ನೋಡಿ

ಸಂದೇಶ ಇ-ಮ್ಯಾಗಝಿನ್: ಜೇನು ಎಂಬುದು ಪ್ರಾಕೃತಿಕವಾಗಿ ದೊರೆಯುವಂತಹ ಒಂದು ಶುದ್ಧ ಆಹಾರ ಪದಾರ್ಥವಾಗಿದೆ. ಇದು ಸ್ವಾದದಲ್ಲಿ ಎಷ್ಟು ಸಿಹಿಯೋ ಅಷ್ಟೇ …

Leave a Reply

Your email address will not be published. Required fields are marked *