Thursday , June 20 2019
Breaking News
Home / ಇಸ್ಲಾಮಿಕ್ ಲೇಖನಗಳು / ಸೂರ್ಯ ಉದಯಿಸುವ ದಿನಗಳಲ್ಲಿ ಜುಮುಅ ಶ್ರೇಷ್ಟ ದಿನ

ಸೂರ್ಯ ಉದಯಿಸುವ ದಿನಗಳಲ್ಲಿ ಜುಮುಅ ಶ್ರೇಷ್ಟ ದಿನ

ಸಂದೇಶ ಇ-ಮ್ಯಾಗಝಿನ್: ಸೂರ್ಯನು ಉದಯಿಸುವ ದಿನಗಳಲ್ಲಿ ಜುಮುಅ ದಿನ(ಶುಕ್ರವಾರ) ಅತ್ಯಂತ ಶ್ರೇಷ್ಟವಾದುದು ಎಂದು ಮನುಕುಲದ ಪ್ರವಾದಿ ಮಹಮ್ಮದ್(ಸ)ರವರು ಹೇಳಿದ್ದಾರೆ; ಯಾಕೆಂದರೆ, ಈ ದಿನದಂದು ಮನುಷ್ಯ ಸೃಷ್ಟಿಯ ಇತಿಹಾಸದಲ್ಲಿ ಕೆಲವು ಮಹತ್ವಪೂರ್ಣ ಘಟನೆಗಳು ಸಂಭವಿಸಿದೆ ಮತ್ತು ಇನ್ನು ಸಂಭವಿಸಲು ಬಾಕಿ ಇದೆ.

1. ಪ್ರವಾದಿ ಆದಂ(ಅ)ರನ್ನು ಸೃಷ್ಟಿಸಲಾಯಿತು:
ಮನುಷ್ಯ ಸೃಷ್ಟಿಯ ಆರಂಭದ ಸೃಷ್ಟಿಯಾದ ಪ್ರವಾದಿ ಆದಂ(ಅ)ರನ್ನು ಅಲ್ಲಾಹು ಸುಭಹಾನುವತ‌ಅಲ ಒಂದು ಜುಮುಅ ದಿನದಂದು ತಟ್ಟಿದರೆ ಶಬ್ದ ಬರುವಂತಹ ಕಳಿತ ಮಣ್ಣಿನಿಂದ ಸೃಷ್ಟಿಸಿದನು. ಆದಂ(ಅ) ರಿಗೆ ಜೋಡಿಯಾಗಿ ಹಝ್ರತ್ ಹವ್ವಾ(ರ)ರನ್ನೂ ಸೃಷ್ಟಿಸಿದನು.

2. ಪ್ರವಾದಿ ಆದಂ(ಅ)ರ ಸ್ವರ್ಗ ಪ್ರವೇಶ:
ಮನುಷ್ಯ ಸಂತಂತಿಯ ಮೊತ್ತ ಮೊದಲ ನೆಲೆ ವೀಡಾಗಿದ್ದ ಸ್ವರ್ಗ ಲೋಕಕ್ಕೆ ಆದ್ಯ ಸೃಷ್ಟಿ ಪ್ರವಾದಿ ಆದಂ(ಅ)ರಿಗೆ ಪ್ರವೇಶಾನುಮತಿ ದೊರೆತಿದ್ದೂ ಒಂದು ಜುಮುಅ ದಿನದಂದಾಗಿತ್ತು.

3. ಪ್ರವಾದಿ ಆದಂ(ಅ)ರನ್ನು ಸ್ವರ್ಗ ಲೋಕದಿಂದ ಉಚ್ಛಾಟಿಸಿದ್ದು:
ಮನುಷ್ಯನ ಪರಮ ಶತ್ರುವಾದ ಇಬ್ಲೀಸ್ ಎಂಬ ಜಿನ್ನ್ ವರ್ಗದಲ್ಲಿ ಸೇರಿದ ಶೈತಾನನ ಪ್ರಲೋಭನೆಯಿಂದ ಅಲ್ಲಾಹನು ತಿನ್ನಲು ಅನುಮತಿ ನಿರಾಕರಿಸಿದ್ದ ಮರದ ಹಣ್ಣನ್ನು ಪ್ರವಾದಿ ಆದಂ(ಅ) ದಂಪತಿಗಳು ಸೇವಿಸಿದಾಗ ಮನುಷ್ಯ ಸಹಜ ವಿಸರ್ಜನೆ ಬಾಧೆ ಅವರನ್ನು ಕಾಡಿತು. ಇದರಿಂದಾಗಿ ಪ್ರವಾದಿ ಆದಂ(ಅ) ದಂಪತಿಯನ್ನು ಸ್ವರ್ಗದಿಂದ ಉಚ್ಛಾಟಿಸಲಾಯಿತು. ಈ ಘಟನೆ ಕೂಡ ನಡೆದದ್ದು ಒಂದು ಶುಕ್ರವಾರವಾಗಿತ್ತು.

4. ಲೋಕಾವಸಾನದ ದಿನ:
ಮನುಷ್ಯ ಮತ್ತು ಜಿನ್ನ್ ವರ್ಗದ ಇಹ ಲೋಕ ಜೀವನಕ್ಕೆ ತಿಲಾಂಜಲಿ ಹಾಡಲಿರುವ “ಯವುಮುಲ್ ಕಿಯಾಮ”(ಅಂತ್ಯದಿನ) ಒಂದು ಜುಮುಅ ದಿನದಂದು ಸಂಭವಿಸಲಿದೆ ಎಂದು ಪ್ರವಾದಿ ಮುಹಮ್ಮದ್(ಸ)ರವರು ಹೇಳಿದ್ದಾರೆ.

Check Also

ಎಲ್ಲವೂ ವಿಧಿಯಲ್ಲಿ ಬರೆದಿರುವಾಗ ನಾವ್ಯಾಕೆ ದುವಾಃ ಮಾಡಬೇಕು?

304ಕೆಲವೊಮ್ಮೆ ನಮ್ಮ ಸಹೋದರರಿಗೆ ಒಂದು ವಿಷಯದಲ್ಲಿ ಸಂಶಯವಾಗುವುದುಂಟು. ಎಲ್ಲಾ ವಿಷಯವನ್ನು ಅಲ್ಲಾಹನು ತಕ್‍ದೀರ್(ವಿಧಿ) ನಲ್ಲಿ ಬರೆದಿರುವಾಗ ನಾವ್ಯಾಕೆ ದುವಾಃ ಮಾಡಬೇಕು? …

Leave a Reply

Your email address will not be published. Required fields are marked *