Tuesday , July 23 2019
Breaking News
Home / ರಾಜ್ಯ / ಕಾಂಗ್ರೇಸ್ ನಾಯಕಿ ರಮ್ಯ ವಿರುದ್ಧ ಫೇಕ್ ನ್ಯೂಸ್; ಸುವರ್ಣ ನ್ಯೂಸ್‌ಗೆ 50 ಲಕ್ಷ ದಂಡವಿಧಿಸಿದ ಕೋರ್ಟ್

ಕಾಂಗ್ರೇಸ್ ನಾಯಕಿ ರಮ್ಯ ವಿರುದ್ಧ ಫೇಕ್ ನ್ಯೂಸ್; ಸುವರ್ಣ ನ್ಯೂಸ್‌ಗೆ 50 ಲಕ್ಷ ದಂಡವಿಧಿಸಿದ ಕೋರ್ಟ್

ಸಂದೇಶ ಇ-ಮ್ಯಾಗಝಿನ್: ಕನ್ನಡ ಚಿತ್ರರಂಗದ ಖ್ಯಾತ ನಟಿ ಹಾಗೂ ಕಾಂಗ್ರೇಸ್ ನಾಯಕಿ ರಮ್ಯ(ದಿವ್ಯ ಸ್ಪಂದನ) ಅವರ ವಿರುದ್ಧ ಸುಳ್ಳು ಸುದ್ದಿ ಹರಡಿದ ಪ್ರಕರಣದಲ್ಲಿ ಬೆಂಗಳೂರಿನ ನ್ಯಾಯಾಲಯವೊಂದು ಏಷ್ಯಾ ನೆಟ್ ಒಡೆತನದ ಸುವರ್ಣ ನ್ಯೂಸ್ ಚಾನಲ್‌ಗೆ 50 ಲಕ್ಷ ದಂಡವಿಧಿಸಿ ತೀರ್ಪು ನೀಡಿದೆ. ಈ ಪ್ರಕರಣ 2013ರದ್ದಾಗಿದ್ದು, ಆ ಸಮಯದಲ್ಲಿ ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದ ಸುದ್ದಿ ಪ್ರಸಾರವೊಂದರಲ್ಲಿ ಪದೇ ಪದೇ ಕನ್ನಡದ ನಟಿ ರಮ್ಯಾ ಅವರ ಫೋಟೋ ತೋರಿಸಲಾಗಿದ್ದು, ‘ಕನ್ನಡದ ಬೆಟ್ಟಿಂಗ್ ಬೊಂಬೆಗಳು’, ‘ನಟಿಮಣಿಯರು ಬೆಟ್ಟಿಂಗ್ ಏಜೆಂಟ್‌ಗಳು’ ಮುಂತಾದ ವಿಶೇಷ ತಲೆಬರಹಗಳೊಂದಿಗೆ ಸುದ್ದಿ ಪ್ರಸಾರ ಮಾಡಲಾಗಿತ್ತು. ಇದರ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದ ರಮ್ಯ ನನಗೂ ಐಪಿಎಲ್‌ಗೂ ಯಾವುದೇ ಸಂಬಂಧವಿಲ್ಲ. ಇದು ನನ್ನ ವೈಯುಕ್ತಿಕ ತೇಜೋವಧೆ ಮಾಡುವ ಉದ್ದೇಶದಿಂದ ಮಾಡಲಾದ ಕೃತ್ಯ ಎಂದು ವಾದಿಸಿ, ನನಗೆ 10 ಕೋಟಿ ಮಾನ ನಷ್ಟ ಪರಿಹಾರ ಒದಗಿಸಬೇಕು ಎಂದಿದ್ದರು.

ರಮ್ಯ ವರ ವಾದವನ್ನು ಆಲಿಸಿದ ಕೋರ್ಟ್ ವಾದವನ್ನು ಎತ್ತಿ ಹಿಡಿದಿದೆ. ದುರುದ್ದೇಶ ಪೂರ್ವಕ ಸುದ್ದಿಯನ್ನು ಪ್ರಕಟಿಸಿದ ಚಾನಲ್‌ಗೆ ಛೀ ಮಾರಿ ಹಾಕಿರುವ ನ್ಯಾಯಾಲಯವು, ನಟಿ ರಮ್ಯ ಅವರಿಗೆ 2 ತಿಂಗಳ ಒಳಗೆ 50 ಲಕ್ಷ ನಷ್ಟ ಪರಿಹಾರ ನೀಡಬೇಕು. ಹಾಗೂ ಇನ್ನು ಮುಂದೆ ಈ ಪ್ರಕರಣಕ್ಕೆ ಸಂಬಂಧಿಸಿ ರಮ್ಯ ಅವರ ಅವರ ವಿರುದ್ಧ ಯಾವುದೇ ಸುದ್ದಿ ಪ್ರಕಟಿಸದಂತೆ ತಾಕೀತು ಮಾಡಿದೆ.

Check Also

ಗಡ್ಡ ಬಿಟ್ಟವರೆಲ್ಲಾ ಭಯೋತ್ಪಾದಕರಲ್ಲ, ವದಂತಿಗೆ ಕಿವಿಗೊಡಬೇಡಿ: ಬೆಂಗಳೂರು ಪೊಲೀಸರ ಮನವಿ

206ಸಂದೇಶ ಇ-ಮ್ಯಾಗಝಿನ್: ಶ್ರೀಲಂಕಾದಲ್ಲಿ ಈಸ್ಟರ್ ದಿನದಂದು ಸರಣಿ ಬಾಂಬ್ ಸ್ಫೋಟ ಮಾಡಿದ್ದ ಉಗ್ರರು ಬೆಂಗಳೂರಿನ ಮೆಟ್ರೊ ರೈಲ್ವೇ ನಿಲ್ದಾಣನಕ್ಕೆ ಬಂದಿದ್ದಾರೆ …

Leave a Reply

Your email address will not be published. Required fields are marked *