Saturday , April 4 2020
Breaking News
Home / ಆರೋಗ್ಯ / ಗಂಡಸರ ಸುನ್ನತಿಯಿಂದಾಗುವ ಈ ಪ್ರಯೋಜನಗಳು ನಿಮಗೆ ಗೊತ್ತೇ
circumsion

ಗಂಡಸರ ಸುನ್ನತಿಯಿಂದಾಗುವ ಈ ಪ್ರಯೋಜನಗಳು ನಿಮಗೆ ಗೊತ್ತೇ

ಭಾರತದಲ್ಲಿ ಸಾಮಾನ್ಯವಾಗಿ ಮುಸ್ಲಿಮೇತರರು ತಿಳಿದುಕೊಂಡಂತೆ ಗಂಡು ಮಕ್ಕಳ ಸುನ್ನತಿ (ಮುಂಜಿ) ಎಂಬುದು ಮುಸ್ಲಿಮರು ಮಾತ್ರ ಮಾಡುತ್ತಾರೆ. ಅದು ಅವರ ಧಾರ್ಮಿಕ ಕಾರ್ಯ ಎಂದಾಗಿದೆ ಅವರ ತಿಳುವಳಿಕೆ. ಸರಿ, ಇದು ಮುಸ್ಲಿಮರ ಧಾರ್ಮಿಕ ಕಾರ್ಯವೇ ಆಗಿದೆ. ಕೇವಲ ಮುಸ್ಲಿಮರಲ್ಲಿ ಮಾತ್ರವಲ್ಲ ಯಹೂದಿಗಳಲ್ಲೂ ಇದು ಕಡ್ಡಾಯ ಧಾರ್ಮಿಕ ಕರ್ಮವಾಗಿದೆ. ಆದರೆ ಇದರಲ್ಲಿ ಅನೇಕ ಆರೋಗ್ಯ ಉಪಯುಕ್ತತೆಗಳು ಅಡಗಿದೆ ಎಂಬುದು ಮಾತ್ರ ಹೆಚ್ಚಿನವರಿಗೆ ಗೊತ್ತಿಲ್ಲ. ಆ ಕಾರಣಕ್ಕೆ ಕೆಲವರು ಸುನ್ನತಿಯನ್ನು ಗುರಿಯಾಗಿಸಿ ಮುಸ್ಲಿಮರನ್ನು ಅಂಗವಿಕಲರು, ನಾಮರ್ಧರು ಅಂತೆಲ್ಲ ಹೀಯಾಳಿಸುವುದೂ ನಡೆಯುತ್ತಲೇ ಇದೆ. ಮೊನ್ನೆ ನಮ್ಮ ಕರ್ನಾಟಕದ ಹರಕು ಬಾಯಿ ಎಂದೇ ಕುಖ್ಯಾತಿ ಹೊಂದಿರುವ ರಾಜ್ಯ ಬಿಜೆಪಿ ನಾಯಕ ಈಶ್ವರಪ್ಪನವರು ನಾವು ಅಧಿಕಾರಕ್ಕೆ ಬಂದರೆ ಸುನ್ನತಿ(ಮುಂಜಿ)ಯನ್ನು ನಿಷೇಧ ಮಾಡುತ್ತೇವೆ ಎಂದು ಘೋಷಿಸುವ ಮೂಲಕ ಈ ಸುನ್ನತಿ ಚರ್ಚೆ ಮತ್ತೊಮ್ಮೆ ಮೇಲೆದ್ದಿದೆ.

ಮುಸಲ್ಮಾನರಿಗೆ ಮತ್ತು ಯಹೂದಿಗಳಿಗೆ ಸುನ್ನತಿಯ ಆಜ್ಞೆ ಇರುವುದು ಧಾರ್ಮಿಕವಾದುದಾಗಿದೆ. ಅನಾದಿಕಾಲದಿಂದಲೂ ಸುನ್ನತಿಯನ್ನು ಮುಸ್ಲಿಮರ ಧಾರ್ಮಿಕ ಕಾರ್ಯವೆಂದೇ ಪರಿಗಣಿಸುತ್ತಾ ಬಂದಿದ್ದ ಸಮಾಜವು ವೈದ್ಯಕೀಯ ವಿಜ್ಞಾನದಲ್ಲಾದ ಅಪೂರ್ವ ಸಂಶೋಧನೆಗಳಿಂದಾಗಿ ಸುನ್ನತಿಯ ಉಪಯೋಗಗಳು ಮನವರಿಕೆಯಾಗ ತೊಡಗಿದವು. ಇವತ್ತು ಅಮೇರಿಕಾದಂತಹ ಮುಂದುವರಿದ ರಾಷ್ಟ್ರಗಳಲ್ಲಿ ಹೆಚ್ಚಿನ ಯುವಕರು ಸ್ವಯಂಪ್ರೇರಿತರಾಗಿ ಸುನ್ನತಿಗೊಳಗಾಗುತ್ತಾರೆ. ಇನ್ನು ಕೆಲವರಿಗೆ ಕೆಲವು ಸಮಸ್ಯೆಗಳನ್ನು ಸರಿಪಡಿಸಲು ವೈದ್ಯರೇ ಸುನ್ನತಿ ಮಾಡಲು ಸೂಚಿಸುತ್ತಾರೆ. ಇಂತಹವರ ಸಂಖ್ಯೆ ಭಾರತದಲ್ಲೂ ಕಡಿಮೆ ಇಲ್ಲ.

ಅಮೇರಿಕನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್ (AAP) ಸುನ್ನತಿಗೆ ಒಳಗಾಗುವ ಲಾಭಗಳನ್ನು ಈ ಕೆಳಗಿನಂತೆ ವಿವರಿಸಿದೆ,

1. ಸುಲಭವಾದ ನೈರ್ಮಲ್ಯ.
ಸುನ್ನತಿಗೆ ಒಳಗಾಗುವುದರಿಂದ ಶಿಶ್ನವನ್ನು ತೊಳೆಯುವುದು ಸರಳವಾಗಿದೆ. ಸುನ್ನತಿಗೆ ಒಳಗಾಗದವರ ಶಿಶ್ನದ ಮುಂದೊಗಲು ಕೂಡಿ ಕೊಂಡಿರುವ ಕಾರಣ ಎಳೆದು ಶುದ್ಧೀಕರಿಸುವಾಗ ಸಂಪೂರ್ಣವಾಗಿ ಶುದ್ದಿಯಾಗುವ ಸಾಧ್ಯತೆ ಕಡಿಮೆ.

2. ಬ್ಯಾಕ್ಟೀರಿಯಾ ಬೆಳವಣಿಗೆಯ ಅಪಾಯವಿಲ್ಲ.
ಒಬ್ಬ ವ್ಯಕ್ತಿಯು ಸುನ್ನತಿಗೆ ಒಳಪಡಿಸದಿದ್ದಾಗ, ಮೂತ್ರದ ತೇವಾಂಶವು ತನ್ನ ಶಿಶ್ನ ಮತ್ತು ಮುಂದೊಗಲಿನ ಮಧ್ಯೆ ಸಿಕ್ಕಿಹಾಕಿಕೊಳ್ಳಬಹುದು, ಇದು ಬ್ಯಾಕ್ಟೀರಿಯಾ ಬೆಳೆಯಲು ಆದರ್ಶ ವಾತಾವರಣವನ್ನು ಸೃಷ್ಟಿಸುತ್ತದೆ. ಇದರರ್ಥ ಇಂತಹವರಲ್ಲಿ ಸೋಂಕಿನ ಹೆಚ್ಚಿನ ಅಪಾಯವಿದೆ ಮತ್ತು ಈ ವೈರಸ್ಗಳು ಲೈಂಗಿಕ ಕ್ರಿಯೆಯ ಮೂಲಕ ಇತರರಿಗೆ ಹರಡುವುದು ಸುಲಭವಾಗುತ್ತದೆ. ಸುನ್ನತಿಗೊಳಗಾದವರಲ್ಲಿ ಇಂತಹ ಅಪಾಯ ಇಲ್ಲವೇ ಇಲ್ಲ.

3. ಲೈಂಗಿಕ ರೋಗಗಳು ಹರಡುವ ಸಾಧ್ಯತೆ ಕಡಿಮೆ.
ಮುಂದೊಗಲನ್ನು ತೆಗೆದುಹಾಕುವುದು ಶಿಶ್ನದಲ್ಲಿ ಆರ್ದ್ರ, ಬೆಚ್ಚಗಿನ ಮತ್ತು ಗಾಢ ವಾತಾವರಣವನ್ನು ತೊಡೆದುಹಾಕುತ್ತದೆ ಮತ್ತು ಇದು ಎಚ್ಐವಿ ಮತ್ತು ಸಿಫಿಲಿಸ್, ಹರ್ಪಿಸ್ ಮತ್ತು ಕ್ಯಾನ್ರೋಯಿಡ್ಸ್ನಂತಹ ಲೈಂಗಿಕವಾಗಿ ಹರಡುವ ಸೋಂಕಿನಂತಹ ವೈರಸ್ಗಳ ಅಪಾಯವನ್ನು ಇಲ್ಲವಾಗಿಸುತ್ತದೆ.

4. ಸ್ತ್ರೀಯರಲ್ಲಿ ಗರ್ಭಕೋಶದ ಕ್ಯಾನ್ಸರ್ ಅಪಾಯವಿಲ್ಲ.
ಸುನ್ನತಿಗೆ ಒಳಗಾಗುವುದರಿಂದ ನಿಮ್ಮ ಸ್ತ್ರೀ ಸಂಗಾತಿಯ ಗರ್ಭಕೋಶದ ಕ್ಯಾನ್ಸರ್ ಅಪಾಯವನ್ನು ಕಡಿಮೆಗೊಳಿಸುತ್ತದೆ.

5. ಮೂತ್ರದ ಸೋಂಕಿನ ಅಪಾಯ ಕಡಿಮೆ.
ಸುನ್ನತಿಯಿಂದಾಗಿ ಪುರುಷರಲ್ಲಿ ಮೂತ್ರದ ಸೋಂಕಿನ ಒಟ್ಟಾರೆ ಅಪಾಯವು ಕಡಿಮೆಯಾಗಿದೆ, ಆದರೆ ಸುನ್ನತಿಗೊಳಗಾಗದ ಪುರುಷರಲ್ಲಿ ಈ ಸೋಂಕುಗಳು ಹೆಚ್ಚು ಸಾಮಾನ್ಯವಾಗಿದೆ. ಆರಂಭಿಕ ಜೀವನದಲ್ಲಿ ತೀವ್ರವಾದ ಸೋಂಕುಗಳು ನಂತರ ಮೂತ್ರಪಿಂಡದ ಸಮಸ್ಯೆಗಳಿಗೆ ಕಾರಣವಾಗಬಹುದು.

6. ಶಿಶ್ನದ ಉರಿಯೂತದಂತಹ ಸಮಸ್ಯೆಗಳಿಲ್ಲ.
ಕೆಲವೊಮ್ಮೆ ಕೆಲವು ಸುನ್ನತಿಗೆ ಒಳಪಡದ ಪುರುಷರಲ್ಲಿ ಶಿಶ್ನದ ಮುಂದೊಗಲನ್ನು ಹಿಂತೆಗೆದುಕೊಳ್ಳುವುದು ಕಷ್ಟವಾಗಬಹುದು ಅಥವಾ ಅಸಾಧ್ಯವಾಗಬಹುದು. ಇದರಿಂದಾಗಿ ಶಿಶ್ನದ ಮುಸುಕು ಅಥವಾ ತಲೆಯ ಉರಿಯೂತಕ್ಕೆ ಕಾರಣವಾಗಬಹುದು. ಇಂತಹವರು ಸುನ್ನತಿ ಮಾಡಿಸಿಕೊಳ್ಳುವುದು ಅನಿವಾರ್ಯವಾಗಿರುತ್ತದೆ.

7. ಶಿಶ್ನದ ಕ್ಯಾನ್ಸರ್‌ನಂತಹ ಸಮಸ್ಯೆಗಳಿಲ್ಲ.
ಶಿಶ್ನ ಕ್ಯಾನ್ಸರ್ ವಿರಳವಾಗಿದ್ದರೂ, ಸುನ್ನತಿಗೊಳಗಾದ ಪುರುಷರಲ್ಲಿ ಅದು ಇಲ್ಲವೇ ಇಲ್ಲ ಎನ್ನಬಹುದು.

ಇವಿಷ್ಟು ಸುನ್ನತಿಯ ಉಪಯೋಗದ ಬಗ್ಗೆ ವೈದ್ಯಕೀಯ ಶಾಸ್ತ್ರವು ಒದಗಿಸಿದ ಸಾಕ್ಷ್ಯಗಳಾಗಿವೆ. ಕೊನೆಯದಾಗಿ ಹೇಳುವುದೇನೆಂದರೆ, ಈಶ್ವರಪ್ಪ ಅಥವಾ ಇತರ ಯಾವುದೇ ಮುಸ್ಲಿಮ್ ದ್ವೇಷಿ ರಾಜಕೀಯ ಮಾಡೋ ಸಮಯಸಾಧಕ ರಾಜಕಾರಣಿಗಳು ಈ ರೀತಿ ವೈದ್ಯಕೀಯ ಶಾಸ್ತ್ರದಲ್ಲಿ ದೃಢಪಟ್ಟ ವಿಷಯದಲ್ಲಿ ಮುಸ್ಲಿಮರನ್ನು ಕುಹಕವಾಡಿ ಬೆಪ್ಪರಾಗುವ ಮೊದಲು ಈ ವಿಷಯದಲ್ಲಿ ಅಧ್ಯಯನ ನಡೆಸಿ ಜ್ಞಾನ ಸಂಪಾದಿಸಿ ಕೊಂಡರೆ ಒಳಿತು.

Check Also

ಜೇನು ಶುದ್ಧವೋ ಅಶುದ್ಧವೋ ಅಂತ ಈ 4 ವಿಧಾನಗಳಿಂದ ಪರೀಕ್ಷೆ ಮಾಡಿ ನೋಡಿ

ಸಂದೇಶ ಇ-ಮ್ಯಾಗಝಿನ್: ಜೇನು ಎಂಬುದು ಪ್ರಾಕೃತಿಕವಾಗಿ ದೊರೆಯುವಂತಹ ಒಂದು ಶುದ್ಧ ಆಹಾರ ಪದಾರ್ಥವಾಗಿದೆ. ಇದು ಸ್ವಾದದಲ್ಲಿ ಎಷ್ಟು ಸಿಹಿಯೋ ಅಷ್ಟೇ …

Leave a Reply

Your email address will not be published. Required fields are marked *