Friday , May 24 2019
Breaking News
Home / ಕಿರು ಬರಹ / ನಮ್ಮ ನ್ಯಾಯವ್ಯವಸ್ಥೆಯ ಮೇಲಿನ ನಂಬಿಕೆ ಕ್ಷೀಣಿಸುತ್ತಿದೆ…!

ನಮ್ಮ ನ್ಯಾಯವ್ಯವಸ್ಥೆಯ ಮೇಲಿನ ನಂಬಿಕೆ ಕ್ಷೀಣಿಸುತ್ತಿದೆ…!

ಎಸ್.ಎ.ರಹಿಮಾನ್ ಮಿತ್ತೂರು

ಸುಮಾರು ಒಂದು ದಶಕದಿಂದ ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ವಿಚಾರಣಾಧೀನ ಆರೋಪಿಗಳಾಗಿದ್ದ ಸಾಧ್ವಿ ಪ್ರಜ್ಞಾ ಸಿಂಗ್ ಕರ್ನಲ್, ಪುರೋಹಿತ್ ಸೇರಿದಂತೆ ಎಲ್ಲರಿಗೂ ಕೆಲವು ತಿಂಗಳ ಹಿಂದೆ ಜಾಮೀನು ನೀಡಿದ್ದ ಮುಂಬೈ ಹೈಕೋರ್ಟಿನ ತೀರ್ಪು ನಮ್ಮ ನ್ಯಾಯ ವ್ಯವಸ್ಥೆಯನ್ನು ಅನುಮಾನದ ದೃಷ್ಟಿಯಿಂದ ನೋಡುವಂತೆ ಮಾಡಿತ್ತು. ಇದೀಗ ಮೆಕ್ಕಾ ಮಸೀದಿ ಸ್ಫೋಟ ಪ್ರಕರಣದ ಪ್ರಮುಖ ಆರೋಪಿಯಾದ ಸ್ವಾಮಿ ಅಸೀಮಾನಂದ ಹಾಗೂ ಸಹಚರರಿಗೆ ಸಾಕ್ಷ್ಯಾಧಾರ ಕೊರತೆಯ ಕಾರಣದಿಂದ ದೋಷಮುಕ್ತಗೊಳಿಸಿ ಎಎನ್ಐ ಕೋರ್ಟ್ ತನ್ನ ತೀರ್ಪು ಪ್ರಕಟಿಸುವುದರೊಂದಿಗೆ ಈ ಅನುಮಾನವು ಮತ್ತಷ್ಟು ಬಲವಾಗಲು ತೊಡಗಿದೆ.

Image result for mecca masjid blast

ಮೆಕ್ಕಾ ಸ್ಫೋಟ ಪ್ರಕರಣದ ಆರೋಪಿ ಸ್ವಾಮಿ ಅಸೀಮಾನಂದ 2010ರಲ್ಲಿ ದೆಹಲಿಯ ಮೆಟ್ರೋಪಾಲಿಟನ್ ನ್ಯಾಯಾಧೀಶರ ಮುಂದೆ ತಪ್ಪೊಪ್ಪಿಕೊಂಡಿದ್ದ. ನಂತರ ಅಸೀಮಾನಂದ ತಪ್ಪೊಪ್ಪಿಕೊಂಡಿದ್ದ ಹೇಳಿಕೆ ದಾಖಲಾಗಿದ್ದ ಕಡತ ಕಳೆದ ಮಾರ್ಚ್ 13ರಂದು ಎನ್ಐಎ ನ್ಯಾಯಾಲಯದಿಂದ ನಾಪತ್ತೆಯಾಗಿ ಮರುದಿನ ಪತ್ತೆಯಾಯಿತು. ಇದಾದ ನಂತರ ಎರಡು ವಾರಗಳ ಹಿಂದೆ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ಪ್ರತಿಭಾ ಅಂಬೇಡ್ಕರ್ ಅವರನ್ನು ಪದಚ್ಯುತಿಗೊಳಿಸಿ ರವೀಂದ್ರ ರೆಡ್ಡಿಯನ್ನು ಹೊಸ ನ್ಯಾಯಮೂರ್ತಿಯಾಗಿ ನೇಮಿಸಲಾಗುತ್ತದೆ. ಸೋಮವಾರ ಬೆಳಿಗ್ಗೆ ಮೆಕ್ಕಾ ಮಸೀದಿ ಸ್ಫೋಟದ ಎಲ್ಲಾ ಆರೋಪಿಗಳನ್ನು ನಿರ್ದೋಷಿಗಳೆಂದು ತೀರ್ಪು ನೀಡಿದ ರವೀಂದ್ರ ರೆಡ್ಡಿ ಅಂದು ಸಂಜೆಯೇ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆ.

Image result for asimananda
ಅಸೀಮಾನಂದ

ಅಂದರೆ ಕೇವಲ ಸ್ವಾಮಿ ಆಸೀಮಾನಂದನನ್ನು ಪ್ರಕರದಿಂದ ದೋಷಮುಕ್ತ ಗೊಳಿಸಲು ಇಷ್ಟೆಲ್ಲಾ ಕಸರತ್ತು ಕೇಂದ್ರ ಸರಕಾರ ನಡೆಸಿದೆ ಎಂಬುವುದು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತದೆ. ನಮ್ಮ ನ್ಯಾಯ ವ್ಯವಸ್ಥೆಯು ಹೀಗೆಯೇ ಮುಂದುವರಿದಲ್ಲಿ ದೇಶದ ಜನತೆ ಅದರ ಮೇಲಿಟ್ಟಿರುವ ವಿಶ್ವಾಸವನ್ನು ಕಳೆದುಕೊಳ್ಳುವುದರಲ್ಲಿ ಸಂಶಯವಿಲ್ಲ.

Check Also

fire

ನಮ್ಮೊಳಗಿನ ರಾಜಕೀಯ ದ್ವೇಷದ ಅಗ್ನಿಜ್ವಾಲೆ ಎಷ್ಟು ಉರಿಯುತ್ತಿದೆ ಎಂದರೆ,

000ನಮಗೆ ನಮ್ಮ ಪಕ್ಷಕ್ಕಿಂತಲೂ ಇತರ ಪಕ್ಷದ ಕಾರ್ಯಚಟುವಟಿಕೆಯಲ್ಲಿ ಮೂಗು ತೂರಿಸುವ ಚಾಳಿ. ಕೈಯಲ್ಲಿದ್ದ ಬಿರಿಯಾಣಿಯನ್ನು ಮಲಿನಗೊಳಿಸಿ, ಕಡ್ಲೆವಲಕ್ಕಿ ಪಡೆಯುವ ತವಕ. …

Leave a Reply

Your email address will not be published. Required fields are marked *