Sunday , January 19 2020
Breaking News
Home / ರಾಷ್ಟ್ರೀಯ / ಮದರಸಾ ಪಕ್ಕ ಗೋಮಾಂಸ ಪತ್ತೆ: ದುಷ್ಕರ್ಮಿಗಳಿಂದ ಮದರಸಾಗೆ ಬೆಂಕಿ

ಮದರಸಾ ಪಕ್ಕ ಗೋಮಾಂಸ ಪತ್ತೆ: ದುಷ್ಕರ್ಮಿಗಳಿಂದ ಮದರಸಾಗೆ ಬೆಂಕಿ

ಸಂದೇಶ ಇ-ಮ್ಯಾಗಝಿನ್: ಮದರಸಾದ ಪ್ರದೇಶದಲ್ಲಿ ಗೋಮಾಂಸದ ಅವಶೇಷ ದೊರೆತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಫತೇಪುರ ಜಿಲ್ಲೆಯ ಬೆಹ್ತಾ ಗ್ರಾಮದಲ್ಲಿ ದುಷ್ಕರ್ಮಿಗಳ ಗುಂಪೊಂದು ಮಂಗಳವಾರ ಮದರಸಕ್ಕೆ ಬೆಂಕಿ ಹಚ್ಚಿದೆ ಎಂದು ವರದಿಯಾಗಿದೆ. ಸುಮಾರು 50 ಜನರ ಗುಂಪು ಮದರಸಾದ ಆವರಣ ಗೋಡೆಯನ್ನು ನೆಲಸಮ ಮಾಡಿ ನಂತರ ಕಟ್ಟಡಕ್ಕೆ ಬೆಂಕಿ ಹಚ್ಚಿದ್ದಾರೆ ಎಂದು ಬಿಂಡ್ಕಿ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಉಮಾ ಶಂಕರ್ ಯಾದವ್ ತಿಳಿಸಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಗುಂಪನ್ನು ಚದುರಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ. ಆದರೆ ಗ್ರಾಮಸ್ಥರ ಪ್ರಕಾರ ಈ ಘಟನೆ ಪೊಲೀಸರ ಬೇಜವಾಬ್ದಾರಿಯಿಂದ ಸಂಭವಿಸಿದೆ ಎಂದು ಆರೋಪಿಸಿದ್ದಾರೆ. ದುಷ್ಕರ್ಮಿಗಳು ಮದರಸಾದಲ್ಲಿ ದಾಳಿ ಮಾಡಿದಾಗ ಮದರಸಾ ಒಳಗೆ ಯಾರೂ ಇರಲಿಲ್ಲದ ಕಾರಣ ಯಾವುದೇ ಸಾವು ನೋವು ಸಂಭವಿಸಿಲ್ಲ.

ಸೋಮವಾರ ಹಳ್ಳಿಯಲ್ಲಿರುವ ಮದರಸಾ ಹಿಂಭಾಗದ ಕೊಳದ ಬಳಿ ಗೋಮಾಂಸ ಪತ್ತೆಯಾಗಿತ್ತು. ಇದರಿಂದ ಸ್ಥಳೀಯ ಜನರು ಆಕ್ರೋಶಿತರಾಗಿದ್ದರು. ಆದರೆ ಸ್ಥಳಕ್ಕಾಗಮಿಸಿದ ಪೊಲೀಸರು ಅದನ್ನು ಗುಂಡಿ ಅಗೆದು ಹೂತು ಹಾಕಿದ್ದರು. ಆದರೆ ಮಂಗಳವಾರ ಅದೇ ಜಾಗದಲ್ಲಿ ಪುನಃ ಗೋಮಾಂಸ ಪತ್ತೆಯಾದ ಬಳಿಕ ಗ್ರಾಮದ ಹಿಂದೂ ಸಂಘಟನೆಗೆ ಸೇರಿದ ಜನರು ಲಾಟಿ, ದೊಣ್ಣೆಯೊಂದಿಗೆ ಆಗಮಿಸಿ ಮದರಸಾದಲ್ಲಿ ಹಾನಿ ಮಾಡಿದರು. ಮತ್ತು ಬಳಿಕ ಬೆಂಕಿ ಹಚ್ಚಿದರು ಎನ್ನಲಾಗಿದೆ.

Check Also

ಗೋರಕ್‌ಪುರ ಮಕ್ಕಳ ಸಾವು ಪ್ರಕರಣ: ವೈದ್ಯ ಕಫೀಲ್ ಖಾನ್ ಆರೋಪ ಮುಕ್ತ

ಸಂದೇಶ ಇ-ಮ್ಯಾಗಝಿನ್: ಗೋರಕ್‌ಪುರದ ಬಿಆರ್‌ಡಿ ಮೆಡಿಕಲ್ ಕಾಲೇಜ್ ನಲ್ಲಿ ಸುಮಾರು ಎರಡು ವರ್ಷಗಳ ಹಿಂದೆ ನಡೆದ ಮಕ್ಕಳ ಸಾಮೂಹಿಕ ಸಾವು …

Leave a Reply

Your email address will not be published. Required fields are marked *