Sunday , September 22 2019
Breaking News
Home / ಅಂತಾರಾಷ್ಟ್ರೀಯ / ಬಾಂಗ್ಲಾ: ಶೇಖ್ ಹಸೀನಾ ಪುನರಾಯ್ಕೆ ಘರ್ಷಣೆಯಲ್ಲಿ 17 ಸಾವು

ಬಾಂಗ್ಲಾ: ಶೇಖ್ ಹಸೀನಾ ಪುನರಾಯ್ಕೆ ಘರ್ಷಣೆಯಲ್ಲಿ 17 ಸಾವು

ಸಂದೇಶ ಇ-ಮ್ಯಾಗಝಿನ್: ಬಾಂಗ್ಲಾದೇಶದಲ್ಲಿ ಇತ್ತೀಚೆಗೆ ನಡೆದ ಸಾರ್ವತ್ರಿಕ ಚುನಾವಣೆಯ ಫಲಿತಾಂಶ ಹೊರಬಿದ್ದುದ್ದು, ಹಾಲಿ ಪ್ರಧಾನಿ ಶೇಖ್ ಹಸೀನಾ ಅವರ ಅವಾಮೀ ಲೀಗ್ ಪಕ್ಷಕ್ಕೆ ಭರ್ಜರಿ ಬಹುಮತ ದೊರೆತಿದ್ದು, ಶೇಖ್ ಹಸೀನಾ ಅವರು ಪ್ರಧಾನಿಯಾಗಿ ಮರು ಆಯ್ಕೆ ಯಾಗಿದ್ದಾರೆ. ಅವಾಮೀ ಲೀಗ್ ವಿರುದ್ಧ ವಿರೋಧ ಪಕ್ಷಗಳು ನಿರ್ಮಿಸಿದ್ದ ಮೈತ್ರಿ ಸಂಪೂರ್ಣ ವಿಫಲವಾಗಿದ್ದು, ಅವಾಮೀ 151 ಸ್ಥಾನಗಳಲ್ಲಿ ಜಯಭೇರಿ ಭಾರಿಸಿದ್ದರೆ ವಿರೋಧ ಪಕ್ಷದ ಮೈತ್ರಿಕೂಟ ಕೇವಲ 5 ಸ್ಥಾನಗಳಲ್ಲಿ ಮಾತ್ರ ಜಯ ಗಳಿಸಿದೆ. ಸರ್ವ ವಿರೋಧ ಪಕ್ಷಗಳು ಈ ಚುನಾವಣೆಯ ಫಲಿತಾಂಶವನ್ನು ನಿರಾಕರಿಸಿದ್ದು, ಆಡಳಿತ ಪಕ್ಷ ಮತಗಳನ್ನು ತಿರುಚಿದೆ. ಆದ್ದರಿಂದ ಮರುಚುನಾವಣೆಯಾಗಲೇ ಬೇಕು ಎಂದು ಪಟ್ಟು ಹಿಡಿದು ಕೂತಿದೆ.

ಈ ಕಾರಣದಿಂದ ಅವಾಮೀ ಲೀಗ್ ಕಾರ್ಯಕರ್ತರು ಹಾಗೂ ವಿರೋಧ ಪಕ್ಷಗಳ ಕಾರ್ಯಕರ್ತರ ಮಧ್ಯೆ ಘರ್ಷಣೆ ಉಂಟಾಗಿದ್ದು, ಪೊಲೀಸರ ಗುಂಡೇಟಿಗೆ 17 ಮಂದಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಫಲಿತಾಂಶವನ್ನು ಅನೂರ್ಜಿತ ಗೊಳಿಸಿ ಇನ್ನೊಮ್ಮೆ ಚುನಾವಣೆ ನಡೆಸಬೇಕು ಎಂದು ವಿರೋಧ ಪಕ್ಷಗಳು ಪ್ರತಿಭಟಿಸುತ್ತಿದೆ.

Check Also

ಭದ್ರತಾ ಕಾರಣಗಳಿಗಾಗಿ ಈ ಆಫ್ರಿಕನ್ ಮುಸ್ಲಿಮ್ ರಾಷ್ಟ್ರ ನಿಖಾಬ್ ನಿಷೇಧಿಸಿದೆ

000ಸಂದೇಶ ಇ-ಮ್ಯಾಗಝಿನ್: ಉತ್ತರ ಆಫ್ರಿಕಾದ ದೇಶ ಟುನೀಶಿಯಾದಲ್ಲಿ ಬಾಂಬ್ ದಾಳಿಯ ನಂತರ ಇದೀಗ ಭದ್ರತಾ ಕಾಳಜಿಗಳನ್ನು ಉಲ್ಲೇಖಿಸಿ ಪ್ರಧಾನ ಮಂತ್ರಿ …

Leave a Reply

Your email address will not be published. Required fields are marked *