Tuesday , April 7 2020
Breaking News
Home / ಆರೋಗ್ಯ / ಕೂದಲುರುವ ಸಮಸ್ಯೆಗೆ ಕಾರಣ ಮತ್ತು ಅದಕ್ಕಿರುವ ಪರಿಹಾರ

ಕೂದಲುರುವ ಸಮಸ್ಯೆಗೆ ಕಾರಣ ಮತ್ತು ಅದಕ್ಕಿರುವ ಪರಿಹಾರ

ಸಂದೇಶ ಇ-ಮ್ಯಾಗಝಿನ್: ಕೂದಲುರುವ ಸಮಸ್ಯೆ ಗಂಡಸರಲ್ಲಿ ಸಾಮಾನ್ಯವಾಗಿ ಕಾಡುವಂತಹ ಒಂದು ಸಮಸ್ಯೆ. ಕೆಲವೊಮ್ಮೆ ರೋಗ ಕಾರಣಕ್ಕೆ ಕೂದಲುರುವುದುಂಟು, ಆದರೆ ಹೆಚ್ಚಿನ ಪ್ರಕರಣದಲ್ಲಿ ಆನುವಂಶಿಕವಾಗಿ ಕೂದಲುದುರುವುದೇ ಹೆಚ್ಚಿನವರ ಸಮಸ್ಯೆಯಾಗಿದೆ. ಆನುವಂಶೀಯ ಕೂದಲುದುರುವ ಸಮಸ್ಯೆ ರೋಗವಲ್ಲದಿದ್ದರೂ ಇದರಿಂದಾಗಿ ವ್ಯಕ್ತಿ ತನ್ನ ಆತ್ಮ ವಿಶ್ವಾಸವನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಅಥವಾ ಸಾಮಾಜಿಕವಾಗಿ ಬೇರೆ ಜನರ ಜೊತೆ ಬೆರೆಯುವಾಗ ಸಮಸ್ಯೆಯಾಗಬಹುದಾದ ಸಾಧ್ಯತೆ. ಆದುದರಿಂದ ಇದಕ್ಕೆ ಚಿಕಿತ್ಸೆ ಮಾಡಬೇಕೇ ಬೇಡವೇ ಎಂಬುದು ನಿಮ್ಮ ಆಯ್ಕೆಗೆ ಬಿಟ್ಟ ವಿಚಾರ. ಏಕೆಂದರೆ ಮೊದಲೇ ಹೇಳಿದ ಹಾಗೆ ಇದೊಂದು ರೋಗ ವಲ್ಲ. ರೋಗವಾದರೆ ಚಿಕಿತ್ಸೆ ಮಾಡಲೇ ಬೇಕು. ಆದರೆ ಕೂದಲು ಉದುರುವ ಸಮಸ್ಯೆಗೆ ಚಿಕಿತ್ಸೆ ಮಾಡಲೇ ಬೇಕಂತ ಕಡ್ಡಾಯವಿಲ್ಲ. ಏಕೆಂದರೆ ಅದರಿಂದ ನಿಮ್ಮ ಪ್ರಾಣಕ್ಕೆ ಯಾವುದೇ ತೊಂದರೆ ಇಲ್ಲ. ಇದಕ್ಕೆ ಏನು ಚಿಕಿತ್ಸೆ ಎಂದು ನೋಡುವ ಮೊದಲು ಇದಕ್ಕೆ ಕಾರಣವೇನು ಎಂಬುದನ್ನು ತಿಳಿಯೋಣ.

ಕೂದಲುರುವ ಸಮಸ್ಯೆಗೆ ಕಾರಣ:
ನಮ್ಮ ಶರೀರದಲ್ಲಿರುವ ಟೆಸ್ಟೆಸ್ಟರಾನ್ ಎಂಬ ಹಾರ್ಮೋನ್ ಒಂದು ಡಿಹೈಡ್ರೋಟೆಸ್ಟೆಸ್ಟರಾನ್ ಆಗಿ ಬದಲಾಗುತ್ತದೆ. ಇದನ್ನು DHT ಎಂಬುದಾಗಿ ಕರೆಯುತ್ತಾರೆ. ಹೀಗೆ ಡಿಹೈಡ್ರೋಟೆಸ್ಟೆಸ್ಟರಾನ್ ಗಳು ನಮ್ಮ ತಲೆಯ ಕೂದಲಿನ ಒಳಭಾಗದಲ್ಲಿ ಕೂದಲಿಗೆ ರಕ್ತ ಸಂಚಾರವಾಗುವ ನಾಳಗಳಲ್ಲಿ ಬಂದು ಶೇಖರಣೆಗೊಳ್ಳುತ್ತದೆ. ಇದರಿಂದಾಗಿ ನಮ್ಮ ಕೂದಲಿಗೆ ರಕ್ತದ ಸಂಚಾರ ಅಷ್ಟಾಗಿ ಆಗುವುದಿಲ್ಲ. ರಕ್ತದ ಸಂಚಾರ ಇಲ್ಲ ಎಂದ ಮೇಲೆ ಕೂದಲಿಗೆ ಪೋಷಕಾಂಶಗಳು ದೊರೆಯದೆ ಕೂದಲು ಸೊರಗುತ್ತದೆ. ದಪ್ಪ ಇರುವ ಕೂದಲು ತೆಳುವಾಗುತ್ತಾ ಬರುತ್ತೆ. ಕೊನೆಗೆ ಉದುರುತ್ತದೆ. ಹೀಗೆ ಬೊಕ್ಕ ತಲೆ ಉಂಟಾಗುತ್ತದೆ.

ಪರಿಹಾವೇನು?
ಈ ಸಮಸ್ಯೆಗೆ ಆರಂಭದಲ್ಲೇ ಚಿಕಿತ್ಸೆ ಮಾಡಿಸಿದರೆ ತಕ್ಕಮಟ್ಟಿಗೆ ಸಮಸ್ಯೆಯನ್ನು ತಡೆಹಿಡಿಯಬಹುದು ಎಂಬುದಾಗಿ ವೈದ್ಯರು ಹೇಳುತ್ತಾರೆ. ಆದರೆ ಆನುವಂಶೀಯ ಕೂದಲುದುರುವ ಸಮಸ್ಯೆಯನ್ನು ಮುಂದೂಡಬಹುದೇ ಹೊರತು ತಡೆಗಟ್ಟುವುದು ಅಸಾಧ್ಯ. DHT ಯ ಕಾರಣದಿಂದಾಗಿ ರಕ್ತಸಂಚಾರ ಬಂದ್ ಆಗಿರುವ ಪ್ರದೇಶದಲ್ಲಿ ರಕ್ತಸಂಚಾರವಾಗುವಂತೆ ನೋಡಿಕೊಳ್ಳಬೇಕು.

ರಕ್ತಸಂಚಾರ ಹೇಗೆ ಹೆಚ್ಚಿಸುವುದು?

ಡರ್ಮಾ ರಾಲರ್ ಬಳಕೆ: ಡರ್ಮಾರಾಲರ್ ಎಂಬುದು ಒಂದು ಸಾಧನವಾಗಿದ್ದು, ಇದರಲ್ಲಿ ಸಣ್ಣ ಸಣ್ಣ ಸೂಜಿಗಳಿವೆ. ಈ ಸಾಧನವನ್ನು ತಲೆಯ ಕೂದಲುದುರಿರುವ ಜಾಗದಲ್ಲಿ ಉರುಳಿಸಬೇಕು. ಇದರಿಂದ ಅಲ್ಲಿ ಸಣ್ಣ ಸಣ್ಣ ಗಾಯಗಾಳಗುವುದು. ಬಳಿಕ ಅಲ್ಲಿ ರಕ್ತಸಂಚಾರವಾಗುತ್ತೆ.

ಹಿಜಾಮ: ತಲೆಗೆ ಹಿಜಾಮ ಚಿಕಿತ್ಸೆ ಮಾಡಿಸುವುದು. ಇದರಿಂದಾಗಿ ಆ ಭಾಗದಲ್ಲಿ ರಕ್ತ ಸಂಚಾರವಾಗುತ್ತೆ ಅಂತ ಹೇಳುತ್ತಾರೆ. ಆದರೆ ಹಿಜಾಮ ಸ್ವಲ್ಪ ದುಬಾರಿಯಾದ ಚಿಕಿತ್ಸೆಯಾಗಿದೆ.

ಈರುಳ್ಳಿ ರಸದ ಲೇಪನ: ಈರುಳ್ಳಿಯನ್ನು ಚೆನ್ನಾಗಿ ಹೆಚ್ಚಿ ಅದನ್ನು ಕೂದಲು ಉದಿರಿರುವ ಭಾಗಕ್ಕೆ ಲೇಪಿಸಬೇಕು ಎಂದು ಹೇಳುತ್ತಾರೆ. ಇದು ಒಂದು ಆಯುರ್ವೇದಿಕ್ ಚಿಕಿತ್ಸೆಯಾಗಿದ್ದು, ಇದರಿಂದಲೂ ತಲೆಯಲ್ಲಿ ರಕ್ತ ಸಂಚಾರ ಹೆಚ್ಚುತ್ತೆ ಎನ್ನುತ್ತಾರೆ.

ಕೂದಲಾಯಾಮ: ಇದೊಂದು ಯೋಗವಾಗಿದ್ದು, ನಿಮ್ಮ ಎರಡೂ ಕೈ ಬೆರಳಿನ ಉಗುರುಗಳನ್ನು ಪರಸ್ಪರ ಉಜ್ಜುವುದು. ಇದನ್ನು ಹತ್ತು ನಿಮಿಷಗಳ ಕಾಲ ಮಾಡಲು ಕೆಲವು ಯೋಗ ಥೆರಪಿಸ್ಟ್ ಗಳು ಸಲಹೆ ನೀಡುತ್ತಾರೆ. ಇದರಿಂದಾಗಿ ತಲೆಯ ಭಾಗದಲ್ಲಿ ರಕ್ತಸಂಚಾರ ಹೆಚ್ಚುತ್ತದೆ ಎಂದು ನಂಬಲಾಗಿದೆ. ಆದರೆ ಇದು ವೈದ್ಯಕೀಯ ವಿಜ್ಞಾನದಲ್ಲಿ ಸಾಬೀತಾಗಿಲ್ಲ.

ಗ್ರೀನ್ ಟೀ ಕುಡಿಯುವುದು: ಗ್ರೀನ್ ಟೀ DHT ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ಇದು ಕೂದಲ ಆರೈಕೆಗೆ ಉತ್ತಮ ಎನ್ನುತ್ತಾರೆ.

ವೈದ್ಯಕೀಯ ವಿಜ್ಞಾನದಲ್ಲಿ ಅಪ್ರೂವ್ ಆದಂತಹ ಚಿಕಿತ್ಸೆಗಳು ಯಾವುವು?

ಮಿನಾಕ್ಸಿಡೈಲ್ ಬಳಕೆ: ನೀವು ಯಾವುದೇ ಸೌಂದರ್ಯ ತಜ್ಞರ ಬಳಿ ಕೂದಲುದುರುವ ಸಮಸ್ಯೆ ಇಟ್ಟು ಹೋದರೆ ಅವರು ನಿಮಗೆ ಮಿನಾಕ್ಸಿಡೈಲ್ ಬಳಸಲು ಹೇಳುತ್ತಾರೆ. ಕೂದಲುದುರುವ ಸಮಸ್ಯೆಗೆ ಮಿನಾಕ್ಸಿಡೈಲ್ ಪರಿಣಾಮಕಾರಿ ಔಷಧಿಯಾಗಿದ್ದು, ಇದು ಅಮೇರಿಕಾದ FDA ಅಪ್ರೂವ್ ಆಗಿದೆ. ಆದರೆ ಇದನ್ನು ವೈದ್ಯರ ಅನುಮತಿಯಿಂದ ಮಾತ್ರ ಬಳಸತಕ್ಕದ್ದು.

ಫಿನಾಸ್ಟ್ರಾಯಿಡ್ ಮಾತ್ರೆ: ಫಿನಾಸ್ಟ್ರಾಯಿಡ್‌ಗೆ ಇನ್ನೊಂದು ಹೆಸರಾಗಿ DHT ಬ್ಲಾಕರ್ ಅಂತ ಕರೆಯುತ್ತಾರೆ. ಮಾರುಕಟ್ಟೆಯಲ್ಲಿ ಫಿನಾಸ್ಟ್ರಾಯಿಡ್‌ 1m ನಿಂದ 5m ವರೆಗೆ ಲಭ್ಯವಿದೆ. ಆದರೆ ನೀವು ಇದನ್ನು ವೈದ್ಯರ ಅನುಮತಿಯ ಮೇರೆಗೆ ಮಾತ್ರ ತೆಗೆದುಕೊಳ್ಳ ತಕ್ಕದ್ದು, ಇದು ಕೂಡ FDA ಅಪ್ರೂವ್ ಆದಂತಹ ಕೂದಲುದುರುವ ಸಮಸ್ಯೆಗೆ ಪರಿಣಾಮಕಾರಿಯಾದಂತಹ ಔಷಧಿಯಾಗಿದೆ.

ಔಷಧಿಗಳ ಬಗ್ಗೆ ವದಂತಿಗಳು:
ಸಾಮಾಸ್ಯವಾಗಿ ಕೂದಲುದುರುವ ಸಮಸ್ಯೆಗೆ ಬಳಸುವ ಔಷಧಿಗಳ ಬಗ್ಗೆ ಜಾಲತಾಣದಲ್ಲಿ ಅಥವಾ ಇತರ ಕಡೆ ಸಿಕ್ಕಾ ಪಟ್ಟೆ ವದಂತಿ ಹಬ್ಬಿಸಲಾಗಿದೆ. ನಪುಂಸಕ ತನಕ್ಕೆ ಕಾರಣವಾಗುತ್ತದೆ ಅಂತೆಲ್ಲ ಹೇಳುತ್ತಾರೆ. ಆದರೆ ವೈದ್ಯರ ಬಳಿ ಇದರ ಕುರಿತು ಸಮಾಲೋಚಿಸಿದರೆ ಇದು ಕೇವಲ ಪೊಳ್ಳುಕಥೆಗಳು ಅಂತ ವೈದ್ಯರೇ ಹೇಳುತ್ತಾರೆ. ಲಕ್ಷದಲ್ಲಿ ಇಬ್ಬರಿಗೆ ಈ ಸಮಸ್ಯೆ ಕಾಡಿದೆ ಅಂತ ಹೇಳಲಾಗುತ್ತದೆ. ಆದರೆ ಅದಕ್ಕೆ ಫಿನಾಸ್ಟಾಯಿಡ್ ಮಾತ್ರೆ ಕಾರಣ ಎಂಬುದು ಎಲ್ಲಿಯೂ ಪ್ರೂವ್ ಆಗಿಲ್ಲ ಎನ್ನುತ್ತಾರೆ ವೈದ್ಯರು. ಏನೇ ಆದರೂ ಮಾತ್ರೆ ಬಳಸುವ ಮುನ್ನ ನೀವು ವೈದ್ಯರನ್ನು ಭೇಟಿಯಾಗುವುದು ಒಳಿತು.

ಇನ್ನು ಕೊನೆಯದಾಗಿ ಕೂದಲುದುರುವುದು ಒಂದು ರೋಗವಲ್ಲ. ಆದರೂ ಇದು ವ್ಯಕ್ತಿಯ ಮಾನಸಿಕ ಖಿನ್ನತೆಗೆ ಕಾರಣವಾಗಬಹುದು. ಆತ್ಮವಿಶ್ವಾಸ ಕುಂಠಿತಕ್ಕೆ ಕಾರಣವಾಗುತ್ತದೆ. ಸಾಮಾಜಿಕವಾಗಿ ಇತರರ ಕುತ್ತು ನುಡಿಗೂ ಕಾರಣವಾಗಬಹುದು. ಇದಕ್ಕೆ ಚಿಕಿತ್ಸೆ ಮಾಡಿಸಬೇಕಾ ಬೇಡವೇ ಎಂಬುದು ವ್ಯಕ್ತಿಗತವಾದ ವಿಚಾರ. ಇದರಲ್ಲಿ ಯಾವುದೇ ಒತ್ತಾಯವಿಲ್ಲ.

ಮಾಹಿತಿ ಸಂಗ್ರಹ ಹಾಗೂ ಲೇಖನ: ನೌಫಲ್ ದೇರಳಕಟ್ಟೆ

Check Also

ಮಹಾಮಾರಿ ನಿಫಾ ವೈರಸ್: ಮುಂಜಾಗ್ರತ ಕ್ರಮ ಹೇಗೆ?

ಇದುವರೆಗೂ ಯಾರೂ ಹೆಸರು ಕೇಳಿರದ ಹಾಗೂ ಕೆಲವು ದಿನಗಳಿಂದ ಎಲ್ಲರ ಬಾಯಲ್ಲೂ ಕೇಳಿ ಬರುತ್ತಿರುವ ಹೆಸರೇ ‘ನಿಪಾ ವೈರಸ್’. ಇತ್ತೀಚೆಗೆ …

Leave a Reply

Your email address will not be published. Required fields are marked *