Thursday , June 20 2019
Breaking News
Home / ರಾಷ್ಟ್ರೀಯ / ಮದರಸಾಗಳು ಸಾಧ್ವಿ ಪ್ರಜ್ಞಾ , ಗೋಡ್ಸೆಯಂತಹವರನ್ನು ಉತ್ಪಾದಿಸಲ್ಲ: ಆಝಂ ಖಾನ್

ಮದರಸಾಗಳು ಸಾಧ್ವಿ ಪ್ರಜ್ಞಾ , ಗೋಡ್ಸೆಯಂತಹವರನ್ನು ಉತ್ಪಾದಿಸಲ್ಲ: ಆಝಂ ಖಾನ್

ಸಂದೇಶ ಇ-ಮ್ಯಾಗಝಿನ್: ಸಮಾಜವಾದಿ ಪಕ್ಷದ ಮುಖಂಡ ಆಝಂ ಖಾನ್ ಮದರಸಾಗಳು ಸಾಧ್ವಿ ಪ್ರಜ್ಞಾ ಹಾಗೂ ನಾಥೂರಾಮ್ ಗೋಡ್ಸೆಯಂತಹ ವ್ಯಕ್ತಿಗಳನ್ನು ಉತ್ಪಾದಿಸಲ್ಲ ಎಂದು ಹೇಳಿ ವಿವಾದಕ್ಕೆ ಗುರಿಯಾಗಿದ್ದಾರೆ. ಮದರಸಾ ಶಿಕ್ಷಣವನ್ನು ಮುಖ್ಯವಾಹಿನಿಯ ಶಿಕ್ಷಣದೊಂದಿಗೆ ಜೋಡಿಸುವ ಬಗ್ಗೆ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆಗೆ ಪ್ರತಿಕ್ರಿಯೆಯಾಗಿ ಆಝಂ ಖಾನ್ ಈ ಹೇಳಿಕೆ ನೀಡಿದ್ದಾರೆನ್ನಲಾಗಿದೆ. ಮದರಸಾಗಳು ಸಾಧ್ವಿ ಪ್ರಜ್ಞಾ ಹಾಗೂ ನಾಥೂರಾಮ್ ಗೋಡ್ಸೆಯಂತಹ ವ್ಯಕ್ತಿತ್ವಗಳನ್ನು ರೂಪಿಸಲ್ಲ, ಮೊದಲು ನಾಥೂರಾಮ್ ಗೋಡ್ಸೆಯ ವಿಚಾರಧಾರೆಯನ್ನು ಪ್ರಚಾರ ಮಾಡುವವರನ್ನು ಸಂವಿಧಾನ ವಿರೋಧಿಗಳು ಎಂದು ಘೋಷಿಸಿ, ಅಂತಹವರನ್ನು ಭಯೋತ್ಪಾದಕರೆನ್ನಬೇಕೇ ಹೊರತು ಅವರನ್ನು ಪುರಸ್ಕಾರ ಮಾಡುವುದಲ್ಲ ಎಂದು ಸಂಸದ ಆಝಂ ಖಾನ್ ಹೇಳಿದ್ದಾರೆ.

ಧಾರ್ಮಿಕ ಬೋಧನೆಯನ್ನು ಮದರಾಸಗಳಲ್ಲಿ ನೀಡಲಾಗುತ್ತದೆ. ಅದೇ ಮದರಾಸಗಳಲ್ಲಿ, ಇಂಗ್ಲಿಷ್, ಹಿಂದಿ ಮತ್ತು ಗಣಿತಗಳನ್ನು ಕಲಿಸಲಾಗುತ್ತದೆ. ಇದನ್ನು ಯಾವಾಗಲೂ ಮಾಡಲಾಗಿದೆ. ನೀವು ಮದರಸಾಗಳಿಗೆ ಸಹಾಯ ಮಾಡಲು ಬಯಸುವುದಾದರೆ ಅದರ ಗುಣಮಟ್ಟವನ್ನು ಸುಧಾರಿಸಿ. ಮದರಾಸಗಳಿಗಾಗಿ ಕಟ್ಟಡಗಳನ್ನು ನಿರ್ಮಿಸಿ, ಪೀಠೋಪಕರಣ ಮತ್ತು ಮಧ್ಯಾಹ್ನದ ಊಟಗಳೊಂದಿಗೆ ಒದಗಿಸಿ ಎಂದು ಆಝಂ ಖಾನ್ ಪ್ರಧಾನಿಯನ್ನು ಒತ್ತಾಯಿಸಿದ್ದಾರೆ.

Check Also

ಉಗ್ರರ ಗುಂಡಿಗೆ ಎದೆಯೊಡ್ಡಿದ್ದ ಜಮ್ಮು ಪೊಲೀಸ್ ಅಧಿಕಾರಿ ಅರ್ಶದ್ ಅಹ್ಮದ್ ಹುತಾತ್ಮ

101ಸಂದೇಶ ಇ-ಮ್ಯಾಗಝಿನ್: ಜೂನ್ 12 ರಂದು ಜಮ್ಮು ಮತ್ತು ಕಾಶ್ಮೀರದ ಅನಂತ್‌ನಾಗ್ ಜಿಲ್ಲೆಯಲ್ಲಿ ನಡೆದ ಉಗ್ರರ ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ …

Leave a Reply

Your email address will not be published. Required fields are marked *