Monday , September 16 2019
Breaking News
Home / ರಮದಾನ್ ವಿಶೇಷಾಂಕ / ಅಯೋಧ್ಯೆ ಸೀತಾರಾಮ ಮಂದಿರದಲ್ಲಿ ರಂಝಾನ್ ಇಫ್ತಾರ್ ಕೂಟ ಆಯೋಜನೆ; ಪ್ರೀತಿಯ ಸಂದೇಶ ನೀಡಿದ ಅರ್ಚಕರು

ಅಯೋಧ್ಯೆ ಸೀತಾರಾಮ ಮಂದಿರದಲ್ಲಿ ರಂಝಾನ್ ಇಫ್ತಾರ್ ಕೂಟ ಆಯೋಜನೆ; ಪ್ರೀತಿಯ ಸಂದೇಶ ನೀಡಿದ ಅರ್ಚಕರು

ಸಂದೇಶ ಇ-ಮ್ಯಾಗಝಿನ್: ಮುಸ್ಲಿಮರ ಪವಿತ್ರ ತಿಂಗಳಾದ ರಂಝಾನಿನ ಇಫ್ತಾರ್ ಕೂಟಕ್ಕೆ ಉತ್ತರ ಪ್ರದೇಶದ ಅಯೋಧ್ಯೆಯ ಸೀತಾರಾಮ ದೇವಾಲಯವು ಸೋಮವಾರ ಆತಿಥ್ಯ ನೀಡಿತು. ದೇಶದ ಅತ್ಯಂತ ವಿವಾದಿತ ನಗರವಾದ ಅಯೋಧ್ಯೆಯ ಹಿಂದೂ ಮುಸ್ಲಿಮರು ಸೋಮವಾರ ಸಂಜೆ ಶ್ರೀ ಸೀತಾ ರಾಮ ದೇವಾಲಯದ ಆವರಣದಲ್ಲಿ ಇಫ್ತಾರ್ ಭೋಜನವನ್ನು ಸವಿಯಲು ಒಟ್ಟಿಗೆ ಕುಳಿತುಕೊಂಡಿದ್ದರು. ಮಂದಿರದ ಮುಖ್ಯ ಅರ್ಚಕರಾದ ಯುಗಲ್ ಕಿಶೋರ್ ಸುದ್ದಿಗಾರರೊಂದಿಗೆ “ನಾವು ಮಂದಿರದಲ್ಲಿ ಇಫ್ತಾರ್ ಕೂಟವನ್ನು ಆಯೋಜಿಸುತ್ತಿರುವುದು ಇದು ಮೂರನೇ ಬಾರಿಯಾಗಿದೆ. ಭವಿಷ್ಯದಲ್ಲಿ ನಾವು ಇದನ್ನು ಪ್ರತೀ ವರ್ಷದಂತೆ ಮುಂದುವರಿಸಿಕೊಂಡು ಹೋಗಲು ತೀರ್ಮಾನಿಸಿದ್ದೇವೆ. ಅದೇ ರೀತಿ ಪ್ರತಿಯೊಂದು ಧರ್ಮದ ಹಬ್ಬವನ್ನು ಇದೇ ರೀತಿ ಅಚರಿಸಲು ಬಯಸುತ್ತೇವೆ” ಎಂದು ಹೇಳಿದರು.

ಇಫ್ತಾರ್ ಕೂಟದಲ್ಲಿ ಭಾಗವಹಿಸಿದ್ದ ಮುಜಮ್ಮಿಲ್ ಫಿಜಾ ಎಂಬವರು ಮಾತನಾಡಿ, “ನಾನು ಪ್ರತೀ ವರ್ಷ ನವರಾತ್ರಿ ಹಬ್ಬವನ್ನು ಹಿಂದೂ ಸ್ನೇಹಿತರ ಜೊತೆಗೂಡಿ ಆಚರಿಸುತ್ತೇನೆ. ದೇಶದಲ್ಲಿ ಒಂದು ಅಜೆಂಡಾದ ಜನರು ಎರಡು ಸಮುದಾಯದ ಜನರು ಈ ರೀತಿ ಒಟ್ಟಿಗೆ ಇರುವುದನ್ನು ಬಯಸುತ್ತಿಲ್ಲ. ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುವ ಇಂತಹ ದೇಶದಲ್ಲಿ ಕಿಶೋರ್ ಅವರಂತಹ ಜನರು ಪ್ರೀತಿಯ ಸಂದೇಶ ಸಾರುತ್ತಿದ್ದಾರೆ” ಎಂದರು.

Check Also

ಉಪವಾಸಿಗರಿಗೆ ಇಫ್ತಾರ್ ಕಿಟ್ ವಿತರಿಸಿದ ಹಿಂದೂ ಮಹಿಳೆ-ರಾಷ್ಟ್ರೀಯ ಭಾವೈಕ್ಯತೆ

001ಸಂದೇಶ ಇ-ಮ್ಯಾಗಝಿನ್: ಭಾರತವು ಜಗತ್ತಿನ ವಿವಿಧ ರಾಷ್ಟ್ರಗಳ ಮಧ್ಯೆ ಎದೆಯುಬ್ಬಿಸಿ ನಿಲ್ಲುವುದು ತನ್ನ ಜಾತ್ಯಾತೀಯ, ಧರ್ಮಾತೀತ ಪರಂಪರೆಯ ಕಾರಣಕ್ಕಾಗಿ, ಈ …

Leave a Reply

Your email address will not be published. Required fields are marked *