Saturday , April 4 2020
Breaking News
Home / ರಿಯಲ್ ಹೀರೋಸ್ / ನನ್ನಿಂದ ಇಷ್ಟೇ ಸಾಧ್ಯ ಇದರಿಂದ ಆ ಅನಾಥ ಮಕ್ಕಳಿಗೆ ಏನಾದರೂ ಖರೀದಿಸಿಕೊಡು

ನನ್ನಿಂದ ಇಷ್ಟೇ ಸಾಧ್ಯ ಇದರಿಂದ ಆ ಅನಾಥ ಮಕ್ಕಳಿಗೆ ಏನಾದರೂ ಖರೀದಿಸಿಕೊಡು

ಸಂದೇಶ ಇ-ಮ್ಯಾಗಝಿನ್: ನನ್ನನ್ನು ಅಪಾರವಾಗಿ ಕಾಡಿದ ಈ ವ್ಯಕ್ತಿಯ ಬಗ್ಗೆ ಬರೆಯಬೇಕು ಅಂತ ಬಯಸಿದೆ. ಇವರ ಹೆಸರು ಬಾಷಾ, 82 ವರ್ಷದ ವೃದ್ಧ. ಕೆಲವು ದಿನಗಳ ಹಿಂದೆ ನಾನು ಕೆಆರ್ ಪುರಂ ನಿಂದ ಕೋರಮಂಗಳಕ್ಕೆ ಪ್ರಯಾಣಿಸಬೇಕಾಗಿತ್ತು. ನಾನು ತುಂಬಾ ಸಮಯದಿಂದ ರಸ್ತೆ ಬದಿಯಲ್ಲಿ ನಿಂತು ಆಟೋಗೆ ಕಾಯುತ್ತಿದ್ದೆ. ಕೆಲವು ಆಟೋದವರು ಆಗಲ್ಲ ಎಂದು ಹೋಗುತ್ತಿದ್ದರು. ಇನ್ನು ಕೆಲವು ಹೆಚ್ಚಿನ ದರ ಹೇಳುತ್ತಿದ್ದರು. ಆಗಲೇ ನಗು ಮುಖದ ಈ ಬಾಷಾ ಅಂಕಲ್ ಅಲ್ಲಿಗೆ ತಮ್ಮ ಆಟೋದಲ್ಲಿ ಬಂದರು. ರಿಕ್ಷಾದಿಂದ ತಲೆ ಹೊರ ಹಾಕಿ ‘ಭೇಟಿ ಕಿದರ್ ಜಾನಾ ಹೈ’ ( ಮಗಳೆ ನಿನಗೆ ಎಲ್ಲಿಗೆ ಹೋಗಬೇಕು) ಅಂತ ಕೇಳಿದರು. ನಾನು ನನಗೆ ಹೋಗ ಬೇಕಾದ ಸ್ಥಳವನ್ನು ಹೇಳಿ ಆಟೋ ಹತ್ತಿದೆ.

ತೀರಾ ಪ್ರಾಯದವರ ಹಾಗೆ ಕಾಣುತ್ತಿದ್ದ ಅವರನ್ನು ಪ್ರಯಾಣ ಮಧ್ಯೆ ಮಾತಿಗೆಳೆದೆ. ಅಂಕಲ್ ನಿಮಗೆ ವಯಸ್ಸೆಷ್ಟು? ಈ ವಯಸ್ಸಲ್ಲಿ ಯಾಕೆ ಕೆಲಸ ಮಾಡುತ್ತಿದ್ದೀರಿ? ಎಂದು ಪ್ರಶ್ನೆ ಮಾಡಿದೆ. ‘ನಾನು ನನ್ನ ಕೊನೆಯ ದಿನದ ವರೆಗೂ ಸ್ವಾವಲಂಭಿಯಾಗಿ ಬದುಕಬೇಕೆಂದಿದ್ದೇನೆ. ನನ್ನ ಮಕ್ಕಳಿಗೆ ಹೊರೆಯಾಗುವುದು ನನಗೆ ಇಷ್ಟವಿಲ್ಲ’ ಎಂದು ಅಂಕಲ್ ಉತ್ತರಿಸಿದರು. ಅಷ್ಟರಲ್ಲಿ ನಾನು ಇಳಿಯಬೇಕಾದ ಜಾಗ ಬಂತು. ಮೀಟರ್‌ನಲ್ಲಿ 150/- ಎಂದು ತೋರಿಸುತ್ತಿತ್ತು. ನಾನು ಅಂಕಲ್‌ಗೆ 200ರೂ. ನೋಟನ್ನು ಅಂಕಲ್ ಕೈಗಿಟ್ಟು ಉಳಿದ ಹಣ ನಿಮಗಿರಲಿ ಅಂತ ಹೇಳಿದೆ.

ಆದರೆ ಅಂಕಲ್ ಹೆಚ್ಚಿನ ಹಣವನ್ನು ಪಡೆಯಲು ಒಪ್ಪಲಿಲ್ಲ. ಈ ಹಣ ನಿನ್ನಲ್ಲೇ ಇರಲಿ. ಈ ಹಣದಿಂದ ಅವರಿಗೆ ಏನಾದರೂ ನನ್ನ ಕಡೆಯಿಂದ ಖರೀದಿಸು. ನನ್ನ ಕಷ್ಟದ ದುಡಿಮೆಯಲ್ಲಿ ಇಷ್ಟೇ ನೀಡಲು ಸಾಧ್ಯ (ಪ್ರಯಾಣದ ಮಧ್ಯೆ ನನ್ನ ಸ್ನೇಹಿತೆ ಕಾಲ್ ಮಾಡಿದ್ದಳು. ನಾನು ಅವಳಲ್ಲಿ ಅನಾಥ ಮಕ್ಕಳಿಗಾಗಿ ಮಾಡುವ ನನ್ನ ಎನ್‌ಜಿಓ ಚಾರಿಟಿ ಕೆಲಸದ ಬಗ್ಗೆ ಮಾತಾಡಿದ್ದೆ) ಎಂದು ಹೇಳಿ ಹೊರಟು ಹೋದರು.

ಇವತ್ತಿನ ದಿನಗಳಲ್ಲಿ ಬೆಂಗಳೂರಿನ ಆಟೋ , ಕ್ಯಾಬ್ ಚಾಲಕರು ಜನರಿಂದ ಯಾವ ರೀತಿ ಹಣ ಸುಳಿಯುತ್ತಾರೆ ಎಂಬುದು ನಿಮಗೆ ಗೊತ್ತಿರ ಬಹುದು. ಅಂತವರ ಮಧ್ಯೆ ಬಾಷಾ ಅಂಕಲ್ ನನಗೆ ವಿಶೇಷವಾಗಿ ಕಂಡರು. ತಮ್ಮ ಕರುಣೆ ಹಾಗೂ ಈ ಪ್ರಾಯದಲ್ಲಿ ನಿರ್ವಹಿಸುತ್ತಿರುವ ಕಷ್ಟದ ಕೆಲಸದೊಂದಿಗೆ ಬಾಷಾ ಅಂಕಲ್ ನನ್ನ ಹೃದಯ ಗೆದ್ದರು. ಬಾಷಾ ಅಂಕಲ್‌ಗೆ ಒಂದು ಸೆಲ್ಯುಟ್.

ಕೃಪೆ: Bangalore Hamarach

Check Also

ಅಮೇರಿಕಾದಲ್ಲಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಪ್ರಶಸ್ತಿ ಪಡೆದ 10 ವರ್ಷದ ಹಫೀಜ್-ಎ-ಕುರಾನ್

ಸಂದೇಶ ಇ-ಮ್ಯಾಗಝಿನ್: ಕ್ಯಾವಿಟಿ ಕ್ರಷರ್ ಅನ್ನು ಕಂಡುಹಿಡಿದಿದ್ದಕ್ಕಾಗಿ 10 ವರ್ಷದ ಪಾಕಿಸ್ತಾನಿ ಮಗು ಮತ್ತು ಅವರ ಕುಟುಂಬದೊಂದಿಗೆ ಅಮೆರಿಕದಲ್ಲಿ ಎಐ …

Leave a Reply

Your email address will not be published. Required fields are marked *