Monday , August 26 2019
Breaking News
Home / ಅಂತಾರಾಷ್ಟ್ರೀಯ / ತನ್ನ ಖಾತೆಗೆ ಬಂದ ಎಲ್ಲಾ ಹಣವನ್ನು ಕ್ರೈಸ್ಟ್ ಚರ್ಚ್ ದಾಳಿಯ ಸಂತ್ರಸ್ತರ ನಿಧಿಗೆ ವರ್ಗಾಯಿಸಿದ ಮೊಟ್ಟೆ ಹುಡುಗ

ತನ್ನ ಖಾತೆಗೆ ಬಂದ ಎಲ್ಲಾ ಹಣವನ್ನು ಕ್ರೈಸ್ಟ್ ಚರ್ಚ್ ದಾಳಿಯ ಸಂತ್ರಸ್ತರ ನಿಧಿಗೆ ವರ್ಗಾಯಿಸಿದ ಮೊಟ್ಟೆ ಹುಡುಗ

ಸಂದೇಶ ಇ-ಮ್ಯಾಗಝಿನ್: ನ್ಯೂಝಿಲ್ಯಾಂಡ್‌ನ ಕ್ರೈಸ್ಟ್‌ಚರ್ಚ್‌ನ ಮಸೀದಿಯಲ್ಲಿ ನಡೆದ ಭಯೋತ್ಪಾದಕ ದಾಳಿಯ ಸಂತ್ರಸ್ತರ ನಿಧಿಗೆ ಮೊಟ್ಟೆಯ ಹುಡುಗ ಎಂದೇ ಖ್ಯಾತರಾಗಿರುವ ಆಸ್ಟ್ರೇಲಿಯನ್ ಯುವಕ ವಿಲ್ ಕೆನೋಲಿಯವರು 68 ಸಾವಿರ ಡಾಲರ್ ಅಂದರೆ ಸುಮಾರು 48 ಲಕ್ಷ ರೂ. ದಾನ ಮಾಡಿದ್ದಾರೆ. ಆಸ್ಟ್ರೇಲಿಯಾ ಮೂಲದ ಭಯೋತ್ಪಾದಕ ಬ್ರೆಂಟನ್ ಟೆರಂಟ್ ಎಂಬಾತ ನ್ಯೂಝಿಲ್ಯಾಂಡಿನ ಕ್ರೈಸ್ಟ್ ಚರ್ಚ್‌ನ ಎರಡು ಮಸೀದಿಗೆ ಮಾರ್ಚ್ 15 ಶುಕ್ರವಾರ ಜುಮಾ ನಮಾಝ್ ನಿರ್ವಹಿಸುತ್ತಿರುವಾಗ ನುಗ್ಗಿ ಗುಂಡಿನ ದಾಳಿ ನಡೆಸಿ ಸುಮಾರು 51 ಮಂದಿಯನ್ನು ಕೊಂದುಹಾಕಿದ್ದ. ಈ ದಾಳಿಯನ್ನು ಸಮರ್ಥಿಸಿ ಪತ್ರಿಕಾಗೋಷ್ಟಿ ನಡೆಸಿದ ಆಸ್ಟ್ರೇಲಿಯನ್ ಸಂಸದ ಫ್ರೇಸರ್ ಆನ್ನಿಂಗ್ ಎಂಬಾತ, ಮುಸ್ಲಿಮ್ ಮತಾಂಧರು ನ್ಯೂಝಿಲ್ಯಾಂಡ್‌ನಲ್ಲಿ ವಲಸೆ ಬಂದು ನೆಲೆಸಿರುವುದೇ ದಾಳಿಗೆ ಕಾರಣ ಎಂದಿದ್ದ. ಈ ಪತ್ರಿಕಾಗೋಷ್ಟಿಯಲ್ಲಿ ಆನಿಂಗ್‌ನ ಪಕ್ಕದಲ್ಲೇ ಇದ್ದ ಕೆನೋಲಿ ಆನ್ನಿಂಗ್‌ನ ತಲೆಗೆ ಮೊಟ್ಟೆ ಎಸೆದಿದ್ದ. ಬಳಿಕ ಈ ಯುವಕನಿಗೆ ಆನ್ನಿಂಗ್‌ನ ಬೆಂಬಲಿಗರು ಥಳಿಸಿದ್ದರು.

ಇಸ್ಲಾಮೋಫೋಬಿಯಾದ ವಿರುದ್ಧ ಸಿಡಿದೆದ್ದ ಈ ಯುವಕನ ಕೃತ್ಯಕ್ಕೆ ವಿಶ್ವದಾದ್ಯಂತ ಶ್ಲಾಘಣೆ ವ್ಯಕ್ತವಾಗಿತ್ತು. ಇದರ ಜೊತೆಗೆ ಜನರು ವಿಲ್ ಕೆನೋಲಿಯ ಬ್ಯಾಂಕ್ ಖಾತೆಗೆ ಹಣ ಸಂದಾಯ ಮಾಡಿದ್ದರು. ಈ ಹಣವನ್ನು ವಿಲ್ ಕೆನೋಲಿ ಕ್ರೈಸ್ಟ್ ಚರ್ಚ್ ಸಂತ್ರಸ್ತರ ನಿಧಿಗೆ ದಾನ ಮಾಡಿದ್ದಾನೆ. ನನ್ನ ವಿರುದ್ಧ ಯಾವುದೇ ಪ್ರಕರಣವೂ ದಾಖಲಾಗಿಲ್ಲ. ನನಗೆ ಕಾನೂನು ಹೋರಾಟಕ್ಕೆ ಯಾವುದೇ ಖರ್ಚೂ ಆಗಿಲ್ಲ. ಆದುದರಿಂದ ಈ ಹಣವನ್ನು ಸಂತ್ರಸ್ತರಿಗೆ ನೀಡಲು ತೀರ್ಮಾನಿಸಿದೆ. ಈ ಹಣವು ಸಂತ್ರಸ್ತರಿಗೆ ಕೊಂಚ ಮಟ್ಟಿನ ನೆಮ್ಮದಿ ನೀಡಲಿ ಎಂದು ನಾನು ಆಶಿಸುವೆ ಎಂದು ಕೆನೋಲಿ ಹೇಳಿದ್ದಾನೆ.

Check Also

ಭದ್ರತಾ ಕಾರಣಗಳಿಗಾಗಿ ಈ ಆಫ್ರಿಕನ್ ಮುಸ್ಲಿಮ್ ರಾಷ್ಟ್ರ ನಿಖಾಬ್ ನಿಷೇಧಿಸಿದೆ

000ಸಂದೇಶ ಇ-ಮ್ಯಾಗಝಿನ್: ಉತ್ತರ ಆಫ್ರಿಕಾದ ದೇಶ ಟುನೀಶಿಯಾದಲ್ಲಿ ಬಾಂಬ್ ದಾಳಿಯ ನಂತರ ಇದೀಗ ಭದ್ರತಾ ಕಾಳಜಿಗಳನ್ನು ಉಲ್ಲೇಖಿಸಿ ಪ್ರಧಾನ ಮಂತ್ರಿ …

Leave a Reply

Your email address will not be published. Required fields are marked *