Monday , August 26 2019
Breaking News
Home / ರಾಷ್ಟ್ರೀಯ / ಅಸಾನ್ಸೋಲ್: ‘ಜೈ ಶ್ರೀ ರಾಮ್’ ಹೇಳದ ಕಾರಣ ಇಬ್ಬರು ಮುಸ್ಲಿಮ್ ಮಕ್ಕಳ ಮೇಲೆ ಹಲ್ಲೆ

ಅಸಾನ್ಸೋಲ್: ‘ಜೈ ಶ್ರೀ ರಾಮ್’ ಹೇಳದ ಕಾರಣ ಇಬ್ಬರು ಮುಸ್ಲಿಮ್ ಮಕ್ಕಳ ಮೇಲೆ ಹಲ್ಲೆ

ಸಂದೇಶ ಇ-ಮ್ಯಾಗಝಿನ್: ಪಶ್ಚಿಮ ಬಂಗಾಳದ ಅಸಾನ್ಸೋಲ್ ನ ಮುಸದ್ದಿ ಪ್ರದೇಶದಲ್ಲಿ ಶಾಲೆಯಿಂದ ಹಿಂದಿರುಗುತ್ತಿದ್ದ ಇಬ್ಬರು ಮುಸ್ಲಿಮ್ ಮಕ್ಕಳನ್ನು ಗುಂಪೊಂದು ತಡೆದು ನಿಲ್ಲಿಸಿ ಜೈ ಶ್ರೀ ರಾಮ್ ಹೇಳುವಂತೆ ಒತ್ತಾಯಿಸಿ ಬಳಿಕ ಅವರು ನಿರಾಕರಿಸಿದಾಗ ಅವರನ್ನು ಥಳಿಸಿ ಕೊಲೆ ಬೆದರಿಕೆ ಹಾಕಿದ ಸುದ್ದಿ ವರದಿಯಾಗಿದೆ. ತಕ್ಷಣ ಸ್ಥಳಕ್ಕಾಗಮಿಸಿದ ಸ್ಥಳೀಯ ಮುಸ್ಲಿಂ ಯುವಕರು ಮಕ್ಕಳನ್ನು ದುಷ್ಕರ್ಮಿಗಳಿಂದ ರಕ್ಷಿಸಿದ್ದಾರೆ. ಮುಸ್ಲಿಮ್ ಮಕ್ಕಳಿಗೆ ಜೈ ಶ್ರೀ ರಾಮ್ ಹೇಳಲು ಹೇಳಿ ಹಲ್ಲೆ ನಡೆಸಿದ ಓರ್ವ ಆರೋಪಿಯನ್ನು ಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾದರೆ, ಇತರರು ತಪ್ಪಿಸಿಕೊಂಡಿದ್ದಾರೆ. ಘಟನೆಯ ನಂತರ ಈ ಪ್ರದೇಶದಲ್ಲಿ ಭಾರಿ ಪೊಲೀಸ್ ಪಡೆ ನಿಯೋಜಿಸಲಾಗಿದ್ದು, ಉತ್ತರ ಅಸನ್ಸೋಲ್‌ನ ಕೆಟಿ ರಸ್ತೆಯಲ್ಲಿರುವ ಎಲ್ಲಾ ಅಂಗಡಿಗಳು ಮುಚ್ಚಲ್ಪಟ್ಟಿವೆ ಎಂದು ವರದಿಯಾಗಿದೆ.

ಭಾರತೀಯ ಜನತಾ ಪಾರ್ಟಿಯ ಸಂಸದ ಬಾಬುಲ್ ಸುಪ್ರಿಯೋ ಅವರು ಪ್ರತಿನಿಧಿಸುವ ಈ ಲೋಕಸಭಾ ಕ್ಷೇತ್ರದಲ್ಲಿ ಈ ಹಿಂದೆಯೂ ಕೂಡ ಕೋಮು ಗಲಭೆ ಅಲ್ಪಸಂಖ್ಯಾತರ ಮೇಲಿನ ಹಲ್ಲೆ ಪ್ರಕರಣಗಳು ನಡೆದಿದೆ. ಇತ್ತೀಚೆಗೆ ದೇಶದಲ್ಲಿ ‘ಜೈ ಶ್ರೀ ರಾಮ್’ ಘೋಷಣೆಯ ಹೆಸರಿನಲ್ಲಿ ಅಲ್ಪ ಸಂಖ್ಯಾತರ ಮೇಲೆ ಹಲವಾರು ಹಲ್ಲೆಗಳು ನಡೆಯುತ್ತಿದ್ದು, ಮಹಾರಾಷ್ಟ್ರ ಹಾಗೂ ಉತ್ತರಪ್ರದೇಶಗಳಿಂದಲೂ ಇದೇ ರೀತಿಯ ಘಟನೆಗಳು ವರದಿಯಾಗಿದೆ.

Check Also

ಲಿಂಚಿಂಗ್ ಬಗ್ಗೆ ಕೇಂದ್ರ ಮಂತ್ರಿ ಮುಖ್ತಾರ್ ಅಬ್ಬಾಸ್ ನಖ್ವಿ ವಿವಾದಾತ್ಮಕ ಹೇಳಿಕೆ

227ಸಂದೇಶ ಇ-ಮ್ಯಾಗಝಿನ್: ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಮಾಬ್ ಲಿಂಚಿಂಗ್ ಬಗ್ಗೆ ವಿವಾದಾಸ್ಪದ ಹೇಳಿಕೆ ನೀಡಿದ್ದು, …

Leave a Reply

Your email address will not be published. Required fields are marked *