Monday , September 16 2019
Breaking News
Home / ಇಸ್ಲಾಮಿಕ್ ಲೇಖನಗಳು / ಎಲ್ಲವೂ ವಿಧಿಯಲ್ಲಿ ಬರೆದಿರುವಾಗ ನಾವ್ಯಾಕೆ ದುವಾಃ ಮಾಡಬೇಕು?

ಎಲ್ಲವೂ ವಿಧಿಯಲ್ಲಿ ಬರೆದಿರುವಾಗ ನಾವ್ಯಾಕೆ ದುವಾಃ ಮಾಡಬೇಕು?

ಕೆಲವೊಮ್ಮೆ ನಮ್ಮ ಸಹೋದರರಿಗೆ ಒಂದು ವಿಷಯದಲ್ಲಿ ಸಂಶಯವಾಗುವುದುಂಟು. ಎಲ್ಲಾ ವಿಷಯವನ್ನು ಅಲ್ಲಾಹನು ತಕ್‍ದೀರ್(ವಿಧಿ) ನಲ್ಲಿ ಬರೆದಿರುವಾಗ ನಾವ್ಯಾಕೆ ದುವಾಃ ಮಾಡಬೇಕು? ಈ ಪ್ರಶ್ನೆಯು ಮನಸ್ಸಿನಲ್ಲಿ ಬರುವುದು ಸಹಜವೂ ಕೂಡ.

1) ತಕ್‍ದೀರ್‍ನಲ್ಲಿ ಎಲ್ಲವೂ ಬರೆಯಲ್ಪಟ್ಟಿದೆ ಅಂದರೆ, ಅಲ್ಲಾಹನಿಗೆ ಆ ವಿಷಯಗಳ ಅರಿವು ಇದೆ, ವಿಧಿ ಲಿಖಿತವು ಅಲ್ಲಾಹನ ಅರಿವಿನಲ್ಲಿದೆ  ಎಂದು ಇದರರ್ಥ. ಉದಾಹರಣೆಗೆ ಒಬ್ಬ ವ್ಯಕ್ತಿಯು ತನ್ನ ಅಂಗಡಿಗೆ ಬರುವ ಸಮಯದ ಬಗ್ಗೆ ನನಗೆ ಅರಿವಿದೆ. ಅವನು ಕ್ಲಪ್ತ ಸಮಯದಲ್ಲಿ ತನ್ನ ಅಂಗಡಿಯನ್ನು ತೊರೆಯುತ್ತಾನೆ. ಇದರ ಅರ್ಥ ಏನು ?

ನಾನು ಆ ವ್ಯಕ್ತಿಯನ್ನು ಅವನ ಅಂಗಡಿಯನ್ನು ಕ್ಲಪ್ತ ಸಮಯಕ್ಕೆ ತೊರೆಯಲು ಬಲವಂತಪಡಿಸಿದೆ ಎಂದಾಗಿದೇಯೇ? ಖಂಡಿತಾ ಅಲ್ಲ. ಬದಲಾಗಿ, ಆ ವ್ಯಕ್ತಿಯು ಕ್ಲಪ್ತ ಸಮಯಕ್ಕೆ ತನ್ನ ಅಂಗಡಿಯನ್ನು ತೊರೆಯುತ್ತಾನೆ ಎಂಬ ಅರಿವು ನನಗಿತ್ತು ಎಂದಾಗಿದೆ.

2) ತಕ್‍ದೀರ್‍ನ ಎರಡು ವಿಧಗಳಿವೆ. 1. ತಕ್‍ದೀರ್ ಮುಬ್ರಮ್ 2. ತಕ್‍ದೀರ್ ಮುಅಲ್ಲಕ್.

ನೀವು ದುವಾ ಮಾಡಿ ಅಥವಾ ಮಾಡದಿರಿ, ಯಾವ ಕಾರಣಕ್ಕೂ ಕೆಲವೊಂದು ವಿಷಯಗಳಲ್ಲಿ ಬದಲಾವಣೆ ಸಾಧ್ಯವೇ ಇಲ್ಲವೋ ಅದಕ್ಕೆ ತಕ್‍ದೀರ್ ಮುಬ್ರಮ್ ಎಂದು ಹೇಳಲಾಗುತ್ತದೆ. ಉದಾ: ಕಿಯಾಮತ್(ಅಂತ್ಯದಿನ). ಮರಣ ಇತ್ಯಾದಿ. ನಾವು ಈ ವಿಷಯಗಳಲ್ಲಿ ಎಷ್ಟೇ ದುವಾ ಮಾಡಿದರೂ ಏನೂ ಪ್ರಯೋಜನವಿಲ್ಲ. ಅದು ಆಗಿಯೇ ತೀರುತ್ತದೆ. ಕಿಯಾಮತ್ ಬಂದೇ ಬರುತ್ತದೆ. ಮರಣವು ಸಂಭವಿಸಿಯೇ ತೀರುತ್ತದೆ.

ಮುಅಲ್ಲಕ್ ಅಂದರೆ (ನೇತಾಡುವುದು): ಈ ತಕ್‍ದೀರ್‍ಗೆ ನಮಾಝ್, ಸದಕಾ, ಖೈರಾತ್‍ಗಳಿಗೆ ವಿಶೇಷ ಸ್ಥಾನಮಾನವಿದೆ. ಹದೀಸ್‍ಗಳಲ್ಲಿ ಪ್ರವಾದಿ (ಸ) ರವರು ಹೇಳುತ್ತಾರೆ, ಸದಕಾಗಳಿಂದ ನಿಮ್ಮ ಮೇಲೆ ಬರುವಂತಹ ಕಷ್ಟಗಳು ದೂರವಾಗುವವು. ಪರಸ್ಪರ ಉತ್ತಮ ಭಾಂಧವ್ಯಗಳಿಂದ ಆಯುಷ್ಯವು ವೃಧ್ದಿಸುವುದು.

ಇದರ ಅರ್ಥ ಮನುಷ್ಯನ ಜೀವನದ ಗಳಿಗೆಗಳು ನಿಗದಿಯಾಗಿಲ್ಲ ಎಂದೇ? ಇದು ಖಂಡಿತಾ ಅಲ್ಲ. ಬದಲಾಗಿ, ಸಮುಯವು ನಿಗದಿಯಾಗಿದೆ. ಆದರೆ ಇಂತಿಂತಹ ಕೆಲಸಗಳನ್ನು ಮಾಡಿದರೆ ಅವನ ತಕ್‍ದೀರ್(ವಿಧಿ) ನಲ್ಲಿ ಬದಲಾವಣೆಗಳು ಬರುತ್ತವೆ ಎಂದಾಗಿದೆ. ಉದಾಹರಣೆಗೆ ದುವಾ ಮಾಡಿದರೆ ಅಥವಾ ಸದಕಾ ಮಾಡಿದರೆ ಅಥವಾ ಇನ್ನಿತರ ಪುಣ್ಯ ಕಾರ್ಯಗಳನ್ನು ಮಾಡಿದರೆ ಒಬ್ಬ ವ್ಯಕ್ತಿಯ ಕಷ್ಟಗಳು ದೂರವಾಗುತ್ತವೆ.

ಒಂದು ಮಾತಂತೂ ನೆನಪಿರಲಿ. ಮನುಷ್ಯನ ಜೀವನದಲ್ಲಿ ಇಂತಿಂತಹ ಏರುಪೇರುಗಳು ಬರುತ್ತವೆ ಎಂದು ಅಲ್ಲಾಹನಿಗೆ ಮುಂಚಿತವಾಗಿಯೇ ಚೆನ್ನಾಗಿ ಅರಿವಿದೆ.

ಲೇಖಕ: ಮೌಲಾನಾ ಅಬ್ದುಲ್ ಹಫೀಝ್ ಅಲ್ ಕಾಸಿಮೀ, ಕಾರ್ಕಳ.

Check Also

ನಾನೆಂದಿಗೂ ಅನ್ಯಪುರುಷರನ್ನು ನೋಡಿಲ್ಲ-ಪ್ರವಾದಿ ಪುತ್ರಿಯ ಅಂತಿಮ ಇಚ್ಛೆ

4035ಪ್ರವಾದಿ ಮುಹಮ್ಮದ್(ಸ.ಅ)ರವರ ಪ್ರೀತಿಯ ಮಗಳು ಹಾಗೂ ಹಝ್ರತ್ ಅಲಿ(ರ.ಅ)ರವರ ಪ್ರೀತಿಯ ಮಡದಿಯಾಗಿದ್ದಾರೆ ಪ್ರಪಂಚದ ಸರ್ವ ಸ್ರೀಯರಿಗೂ ಮಾದರಿಯಾದ ಮಹಿಳಾಮಣಿ ಫಾತಿಮಾ …

Leave a Reply

Your email address will not be published. Required fields are marked *