Sunday , September 22 2019
Breaking News
Home / ಲೇಖನ / ಅಮ್ಮ ಅವರು ಇವತ್ತು ನನ್ನನ್ನು ನೋಡಲು ಬರುತ್ತಾರಾ..?

ಅಮ್ಮ ಅವರು ಇವತ್ತು ನನ್ನನ್ನು ನೋಡಲು ಬರುತ್ತಾರಾ..?

ಜಮೀಲಾ ಅಮ್ಮನಿಗೆ, ಅಮ್ಮ ಇವತ್ತು ಅವರು ನನ್ನನು ನೋಡಲು ಬರುತ್ತಿದ್ದಾರೆ ಎಂದು ನೀನು ಇವತ್ತಿಗೆ ನನಗೆ ಹತ್ತನೇಯ ಬಾರಿ ಹೇಳುತ್ತಿದ್ದಿಯ. ಆದರೆ ಬಂದವರೆಲ್ಲ ಊಟ ಮಾಡಿ ಹೋಗುತ್ತಿದ್ದಾರೆ. ಹಾಗಾದರೆ ನನ್ನಲ್ಲಿ ಇರುವ ಕೊರೆತೆಯಾದರೂ ಏನಮ್ಮ. ನಾನು ನೋಡಲು ಸ್ವಲ್ಪ ಅವಲಕ್ಷಣದ ಹೆಣ್ಣು ಎಂದುಕೊಂಡು ಅವರು ತಿರುಗಿ ಹೋಗುತಿದ್ದಾರೆ ಅಲ್ವ ಅಮ್ಮ. ಯಾಕೆ ಅಮ್ಮ ಲಕ್ಷಣವಾಗಿ ಇರುವ ಹೆಣ್ಣುಮಕ್ಕಳಿಗೆ ಒಂದು ನ್ಯಾಯ ಮತ್ತು ನನ್ನಂತ ಕೂರುಪಿ ಹೆಣ್ಣು ಮಕ್ಕಳಿಗೆ ಒಂದು ನ್ಯಾಯ ಅಮ್ಮ? ನಿನ್ನೆ ಪಕ್ಕದ ಮನೆಯ ತಾಹೀರಾಳನ್ನು ನೋಡಲು ಬಂದ ಒಂದು ಪಾರ್ಟಿ ಅವಳನ್ನು ನೋಡಿದ ತಕ್ಷಣವೇ ವರದಕ್ಷಿಣೆ ರಹಿತವಾಗಿ ಮದುವೆಯಾಗಲು ಗಂಡಿನ ಕಡೆಯವರು ನಿರ್ಧಾರ ಮಾಡಿದ್ದಾರೆ. ಅವಳು ನೋಡಲು ಅಂದ, ಚೆಂದವಾಗಿದ್ದಾಳೆ ಮತ್ತು ಅವಳಿಗೆ ಅಪ್ಪ, ಅಣ್ಣ, ತಮ್ಮ, ಮಾವಂದಿರು ಇದ್ದಾರೆ ಮತ್ತು ಶ್ರೀಮಂತರು ಕೂಡ.

ಆದರೆ ನನಗೆ ನೀನು ಮಾತ್ರವೇ ಇರುವುದು ಅಮ್ಮ. ನನಗಾಗಿ ನೀನು ಪ್ರತಿ ಬಾರಿಯೂ ಬೆಳಗ್ಗೆ ಮನೆಬಿಟ್ಟು ಹೋಗುತ್ತಿಯ. ಸಂಜೆ ಹೊತ್ತು ತಿರುಗಿ ಬರುತ್ತಿಯ. ಈ ಉರಿ ಬಿಸಿಲಿನಲ್ಲಿ ನಡೆದಾಡಿಕೊಂಡು ಮಸೀದಿ ಆವರಣದಲ್ಲಿ ಕುಳಿತುಕೊಂಡು, ಮನೆ ಮನೆಗಳಿಗೆ ಭೇಟಿ ನೀಡಿ ಅವರನ್ನು ಕಾಡಿ-ಬೇಡಿ ಹಣ ತಂದು ನನಗೆ ಮದುವೆ ಮಾಡಿಸಲು ಪ್ರಯತ್ನವನ್ನು ಮಾಡುತ್ತಿರುವೆ. ಆದರೆ ನನ್ನನ್ನು ನೋಡಲು ಬಂದವರೆಲ್ಲ ಮಾತ್ರ ನನ್ನನ್ನು ನೋಡಿ ತಿರುಗಿ ಹೋಗುತ್ತಿದ್ದಾರೆ. ಬೇಡ ಅಮ್ಮ ನನಗೆ ಈ ಮದುವೆ ಬೇಡ! ನನಗೆ ನೀನು ನನ್ನ ಜೊತೆ ಸದಾ ಇದ್ದರೆ ಸಾಕು..!!

ಅಮ್ಮ ನಿನಗೆ ಗೊತ್ತ ನಿನ್ನೆ ನಮ್ಮ ಹಳೆಯ ಶಾಲೆಯ ಪಕ್ಕದ ಮನೆಯ ಮೈಮುನಾ ನಿನ್ನೆ ಅನ್ಯಧರ್ಮದ ಯುವಕನ ಜೊತೆ ಓಡಿ ಹೋದಳಂತೆ. ಪಾಪ ಅವಳಿಗೆ ಅಪ್ಪ ಇದ್ದಾರೆ ಆದರೆ ಅಂಗವಿಕಲ. ತಾಯಿ ಒಬ್ಬಳು ಏನು ಮಾಡಲು ಸಾಧ್ಯ. ಅಷ್ಟು ಮಾತ್ರವಲ್ಲ ಅವಳಿಗೆ ವಯಸ್ಸು ಇಪ್ಪತ್ತಾರು ದಾಟಿತ್ತು. ಮತ್ತು ಇವಳು ಎರಡನೆ ಮಗಳು ಕೂಡ. ಅವಳ ಅಕ್ಕ ಇನ್ನು ಮದುವೆಯಾಗದೆ ಕಣ್ಣೀರುಗರೆಯುತ್ತಾ ಮನೆಯಲ್ಲೇ ಇದ್ದಾಳೆ ಹಾಗೆಯೆ ಇನ್ನು ಇಬ್ಬರು ಸಹೋದರಿಯರು ಇದ್ದಾರೆ. ಒಟ್ಟಿನಲ್ಲಿ ನಾಲ್ಕು ಹೆಣ್ಣು ಒಂದು ಗಂಡು ಇರುವ ಆ ಕುಟುಂಬವನ್ನು ಯಾರು ಕೂಡ ಕಣ್ಣೆತ್ತಿ ನೋಡಲಿಲ್ಲ. ಹಲವು ಬಾರಿ ನನ್ನನ್ನು ನೋಡಲು ಬಂದಂತೆ ಅವರ ಮನೆಗೂ ಗಂಡಿನ ಕಡೆಯವರು ಬಂದು ನೋಡಲು ಕುರೂಪಿಯಾಗಿದ್ದರೆ ಮತ್ತು ಬರೀ ಐವತ್ತು ಸಾವಿರ ಏಳು ಪವನ್ ಚಿನ್ನ ನಮಗೆ ಸಾಕಾಗುವುದಿಲ್ಲ ಎಂದು ಹೊರಟು ಹೋಗಿದರಂತೆ.

ಯಾಕಮ್ಮ ಈ ಸಮಾಜ ಹೀಗೆ? ಅವಳು ಧರ್ಮವನ್ನು ತೊರೆದು ಓಡಿ ಹೋಗಲು ಇದೆ ಸಮಾಜ ತಾನೇ ಕಾರಣ? ಮತ್ತೆ ಅವಳು ಓಡಿ ಹೋದಾಗ ಈ ಸಮಾಜ ಯಾಕಮ್ಮ ಅತೀ ಕೆಟ್ಟ ರೀತಿಯಲ್ಲಿ ಚಿತ್ರಿಸುತ್ತಿದೆ…??

ಹೌದು ಸ್ನೇಹಿತರೆ ಇದು ಒಂದು ವಯಸ್ಸಿಗೆ ಬಂದ ಮಗಳು ಅಮ್ಮನಿಗೆ ಕೇಳಿದ ಪ್ರಶ್ನೆ. ಪಾಪ ಆ ತಾಯಿಗೆ ಅದಕ್ಕೆ ಉತ್ತರ ನೀಡಲು ಸಾಧ್ಯವಾಗಲಿಲ್ಲ! ಆದರೆ ನಮ್ಮಿಂದ ಸಾಧ್ಯವೇ? ಆ ಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಲು. ಇವತ್ತು ನಮ್ಮ ಸಮುದಾಯದಲ್ಲಿ ಹೆಣ್ಣು ಹೆತ್ತವರು ಎದುರಿಸುತ್ತಿರುವ ತೊಂದರೆಗಳ ಒಂದು ಚಿಕ್ಕ ಚಿತ್ರಣವಾಗಿದೆ ಇವುಗಳು. ಇಲ್ಲಿ ಬರೀ ಒಂದು ಜಮೀಲಾಳ ಕತೆಯನ್ನು ಮಾತ್ರವೇ ಪ್ರಸ್ತಾಪ ಮಾಡಿದ್ದೇನೆ. ಸಹೋದರಿ ಜಮೀಲಾಳಂತೆ ಅದೆಷ್ಟೋ ಸಹೋದರಿಯರು ಕಣ್ಣೀರು ಹಾಕುತ್ತಾ ದಿನದೂಡುತ್ತಿದ್ದಾರೆ.

ಇವತ್ತು ನಾವು-ನೀವು ಗಾಡವಾಗಿ ಚಿಂತಿಸಬೇಕಾಗಿದೆ ಸ್ನೇಹಿತರೆ. ಒಂದು ಹೆಣ್ಣು ದಾರಿ ತಪ್ಪಿದ್ದಾಳೆ ಅಂದರೆ ಅದಕ್ಕೆ ಒಂದು ಬಲವಾದ ಕಾರಣ ಇರುತ್ತದೆ. ಇವತ್ತಿನ ದಿನಗಳಲ್ಲಿ ವರದಕ್ಷಿಣೆ ರಹಿತವಾಗಿ ಎಲ್ಲರೂ ಮದುವೆಯಾಗುತ್ತಾರೆ. ಆದರೆ ನಾವುಗಳು ನೋಡುವುದು ಅವಳು ಎಷ್ಟು ಆಕರ್ಷಕಳಾಗಿದ್ದಾಳೆ ಮತ್ತು ಅವಳು ಎಷ್ಟು ಶ್ರೀಮಂತ ಮನೆತನದ ಹೆಣ್ಣು ಎಂದು. ಆದರೆ ವರದಕ್ಷಿಣೆ ರಹಿತವಾಗಿ ಬಡ ಹೆಣ್ಣುಮಕ್ಕಳಿಗೆ ಬಾಳು ಕೊಡಲು ಏಕೆ ಹಿಂದೇಟು ಹಾಕುತ್ತೇವೆ? ಇವತ್ತು ಅದೆಷ್ಟೋ ಯುವಕರುಗಳನ್ನ ನಾವು ಕಾಣಬಹುದು ವರದಕ್ಷಿಣೆ ಹಣದಲ್ಲಿ ಶೋಕಿ ಜೀವನವನ್ನು ಮಾಡುತ್ತಿರುವುದನ್ನು ಇದು ನಿಜಕ್ಕೂ ಸಮುದಾಯದ ದುರಂತ ಎನ್ನಬೇಕಷ್ಟೆ. ಈ ವರದಕ್ಷಿಣೆ, ಅಂದ-ಚೆಂದ, ಶೋಕಿ ಜೀವನ ಎಷ್ಟು ದಿನ ಸಹೊದರ…? ಬೇಡ ಸಹೋದರ ಈ ವರದಕ್ಷಿಣೆ ಮತ್ತು ಹೆಣ್ಣಿನ ಲಕ್ಷಣ ಅವಲಕ್ಷಣದ ತಾರತಮ್ಯ ಬೇಡ. ಇದು ನಾವು ನೀವು ತಿಳಿದ ಹಾಗೆ ಚಿಕ್ಕ ವಿಷಯವಲ್ಲ. ಇದಕ್ಕೆ ನಾಳೆ ಪರಲೋಕದಲ್ಲಿ ಕಠಿಣ ಶಿಕ್ಷೆಯನ್ನು ಎದುರಿಸಬೇಕಾದ ಸತ್ಯವನ್ನು ಮನದಟ್ಟು ಮಾಡಿಕೊಳ್ಳಬೇಕಾಗಿದೆ.

ಬನ್ನಿ ಸಹೊದರರೇ ಇಂತಹ ವಿಷಯಗಳನ್ನು ನಾವು ಖಂಡಿಸೋಣ ಮತ್ತು ಬದಲಾವಣೆಗಳನ್ನು ತರೋಣ.. ನಾವು ಬದಲಾದರೆ ಮಾತ್ರವೇ ಈ ಸಮುದಾಯ ಬದಲಾಗಳು ಸಾಧ್ಯ!

ಲೇಖಕ: ಸಲಾಂ ಸಮ್ಮಿ

Check Also

ಪಕ್ಷ ಸಂಘಟನೆಗಳೇ ನಮ್ಮ ಜೀವನ ಆಗದಿರಲಿ, ಚುನಾವಣೆಯ ನಂತರವೂ ನಮಗೆ ಬದುಕಬೇಕು

002ಪ್ರಜಾಪ್ರಭುತ್ವ ರಾಷ್ಟ್ರವಾದ ನಮ್ಮ ದೇಶದಲ್ಲಿ ಪ್ರತೀ ಐದು ವರ್ಷಕ್ಕೊಮ್ಮೆ ಬರುವ ಚುನಾವಣೆ ಎಂಬುವುದೊಂದು ನಿರಂತರ ಪ್ರಕ್ರಿಯೆಯಾಗಿದೆ. ಈ ಚುನಾವಣೆಗಳಲ್ಲಿ ಗೆದ್ದವರು …

Leave a Reply

Your email address will not be published. Required fields are marked *