Tuesday , February 18 2020
Breaking News
Image credit: Zee News
Home / ರಾಷ್ಟ್ರೀಯ / ಉ.ಪ್ರದೇಶ ಎಟಿಎಸ್ ನಿಂದ ಶಂಕಿತ ಲಷ್ಕರ್ ಉಗ್ರ ಸೌರಭ್ ಶುಕ್ಲಾನ ಬಂಧನ

ಉ.ಪ್ರದೇಶ ಎಟಿಎಸ್ ನಿಂದ ಶಂಕಿತ ಲಷ್ಕರ್ ಉಗ್ರ ಸೌರಭ್ ಶುಕ್ಲಾನ ಬಂಧನ

ಸಂದೇಶ ಇ-ಮ್ಯಾಗಝಿನ್: ಪಾಕಿಸ್ತಾನದ ಭಯೋತ್ಪಾದಕ ಸಂಘಟನೆಯಾದ ಲಷ್ಕರ್-ಎ-ತೈಬಾ ಪರವಾಗಿ ಕೆಲಸ ಮಾಡುತ್ತಿದ್ದ ಶಂಕಿತ ಭಯೋತ್ಪಾದಕ ಸೌರಭ್ ಶುಕ್ಲಾನನ್ನು ಪ್ರಯಾಗ್ರಾಜ್ ನಿಂದ ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಬಂಧಿಸಿದೆ. ಎಟಿಎಸ್ ಬಹಳ ಸಮಯದಿಂದ ಸೌರಭ್ ಶುಕ್ಲಾನನ್ನು ಹುಡುಕುತ್ತಿತ್ತು. ಆತನ ಬಂಧನಕ್ಕೆ ಸಹಕರಿಸಿದವರಿಗೆ 25 ಸಾವಿರ ರೂಪಾಯಿ ಬಹುಮಾನವನ್ನೂ ಘೋಷಿಸಲಾಗಿತ್ತು. ಶಂಕಿತ ಭಯೋತ್ಪಾದಕ ಶುಕ್ಲಾನಿಂದ ಪ್ಯಾನ್ ಕಾರ್ಡ್, ಎರಡು ಎಟಿಎಂ ಕಾರ್ಡ್‌ಗಳು, ಸಂಖ್ಯೆ ಇಲ್ಲದ ಪಲ್ಸರ್ ಬೈಕು, ಮತದಾರರ ಗುರುತಿನ ಚೀಟಿ, ಚಾಲನಾ ಪರವಾನಗಿ ಸೇರಿದಂತೆ ಎರಡು ಆಧಾರ್ ಕಾರ್ಡ್‌ಗಳನ್ನು ಎಟಿಎಸ್ ವಶಪಡಿಸಿಕೊಂಡಿದೆ.

24 ವರ್ಷದ ಬಂಧಿತ ಶಂಕಿತ ಉಗ್ರ ಸೌರಭ್ ಶುಕ್ಲಾ ಬಾದಾವರ್‌ನಲ್ಲಿರುವ ಸರ್ಕಾರಿ ಬಾಲಕಿಯರ ಪ್ರೌಢ ಶಾಲೆಯ ಪ್ರಾಂಶುಪಾಲ ರವಿಶಂಕರ್ ಶುಕ್ಲಾ ಅವರ ಮಗನಾಗಿದ್ದು, ಮಗನ ಬಂಧನದ ಬಗ್ಗೆ ತಂದೆ ರವಿಶಂಕರ್ ಶುಕ್ಲಾ, “ನನ್ನ ಮಗನು ಇಂತಹ ಕೆಲಸ ಮಾಡುತ್ತಿದ್ದಾನೆಂದು ತಿಳಿದಿರಲಿಲ್ಲ, ನನ್ನ ಮಗ ದೇಶದ ವಿರುದ್ಧ ಇಂತಹ ಕೆಲಸವನ್ನು ಮಾಡಿದ್ದಾನೆ, ಸುದ್ದಿ ತಿಳಿದು ನಾನು ಮೂಕನಾಗಿದ್ದೇನೆ. ಅವನು ಏನು ಮಾಡುತ್ತಿದ್ದಾನೆ, ಎಲ್ಲಿ ವಾಸಿಸುತ್ತಿದ್ದಾನೆ, ಎಲ್ಲಿಗೆ ಹೋಗುತ್ತಾನೆ ಎಂಬ ಬಗ್ಗೆ ನಮಗೆ ಯಾವುದೇ ಮಾಹಿತಿ ಇರಲಿಲ್ಲ” ಎಂದು ತಿಳಿಸಿದ್ದಾರೆ.

ಸೌರಭ್ ಹಳ್ಳಿಯಲ್ಲಿ ಕಡಿಮೆ ವಾಸಿಸುತ್ತಿದ್ದ ಮತ್ತು ಸ್ನೇಹಿತರೊಂದಿಗೆ ಹೆಚ್ಚು ಹೊರಗೇ ಇರುತ್ತಿದ್ದ ಎಂದು ತಂದೆ ಮಾಹಿತಿ ನೀಡಿದ್ದಾರೆ. ಬೈಕ್‌ಗಾಗಿ ನನ್ನ ಖಾತೆಯಿಂದ ಹಣವನ್ನು ಪಡೆದ ಬಗ್ಗೆಯೂ ನನಗೆ ಬಳಿಕವಷ್ಟೇ ಮಾಹಿತಿ ಸಿಕ್ಕಿತು. ಶನಿವಾರ ಬೆಳಿಗ್ಗೆ ಸುಮಾರು 8 ಗಂಟೆಗೆ ಸೌರಭ್ ನನ್ನಿಂದ ಐನೂರು ರೂಪಾಯಿಗಳನ್ನು ಪಡೆದು ಕೊಂಡು ತಾನು ಟೇಥೋರ್‌ಗೆ ಹೋಗುತ್ತಿದ್ದೇನೆ ಎಂದು ಹೇಳಿದ್ದಾನೆ. ಇದರ ನಂತರ ಯಾವುದೇ ಮಾಹಿತಿ ಇಲ್ಲ. ಶನಿವಾರ ತಡರಾತ್ರಿ ಮಗನನ್ನು ಉತ್ತರ ಪ್ರದೇಶದ ಎಟಿಎಸ್ ಬಂಧಿಸಿದೆ ಎಂದು ತಿಳಿಯಿತು ಎಂದಿದ್ದಾರೆ. ಬಂಧನದ ಸಮಯದಲ್ಲಿ ಪೊಲೀಸರಿಗೆ ಡೆಟೋನೇಟರ್‌ನ 1000 ಮತ್ತು ಜೆಲಾಟಿನ್ ರಾಡ್‌ನ 25 ಪೆಟ್ಟಿಗೆಗಳು ದೊರೆತಿವೆ.

Check Also

ಗೋರಕ್‌ಪುರ ಮಕ್ಕಳ ಸಾವು ಪ್ರಕರಣ: ವೈದ್ಯ ಕಫೀಲ್ ಖಾನ್ ಆರೋಪ ಮುಕ್ತ

ಸಂದೇಶ ಇ-ಮ್ಯಾಗಝಿನ್: ಗೋರಕ್‌ಪುರದ ಬಿಆರ್‌ಡಿ ಮೆಡಿಕಲ್ ಕಾಲೇಜ್ ನಲ್ಲಿ ಸುಮಾರು ಎರಡು ವರ್ಷಗಳ ಹಿಂದೆ ನಡೆದ ಮಕ್ಕಳ ಸಾಮೂಹಿಕ ಸಾವು …

Leave a Reply

Your email address will not be published. Required fields are marked *