Monday , August 26 2019
Breaking News
Home / ವೀಡಿಯೋ / ಎ.ಆರ್. ರೆಹಮಾನ್ ಕೆನಡಾದ ನಾಗರಿಕತೆಯ ಆಫರನ್ನು ಈ ಕಾರಣ ಹೇಳಿ ತಿರಸ್ಕರಿಸಿದ್ದರು

ಎ.ಆರ್. ರೆಹಮಾನ್ ಕೆನಡಾದ ನಾಗರಿಕತೆಯ ಆಫರನ್ನು ಈ ಕಾರಣ ಹೇಳಿ ತಿರಸ್ಕರಿಸಿದ್ದರು

ಸಂದೇಶ ಇ-ಮ್ಯಾಗಝಿನ್: ಫಿಲ್ಮಿ ದೇಶ ಭಕ್ತ ಅಕ್ಷಯ್ ಕುಮಾರ್ ಕಳೆದ ಕೆಲವು ದಿನಗಳಿಂದ ತಮ್ಮ ಪೌರತ್ವದ ಕಾರಣದಿಂದಾಗಿ ಟ್ರಾಲ್ ಆಗುತ್ತಿದ್ದಾರೆ. ದೊಡ್ಡ ದೇಶ ಭಕ್ತನಂತೆ ನಟಿಸುವ ಅಕ್ಷಯ್ ಕುಮಾರ್ ವಾಸ್ತವದಲ್ಲಿ ಭಾರತೀಯ ಪ್ರಜೆಯೆ ಅಲ್ಲ. ಆತ ಕೆನಡಿಯನ್ ಪೌರತ್ವವನ್ನು ಪಡೆದಿದ್ದು, ಭಾರತದಲ್ಲಿ ಸಾಗರೋತ್ತರ ಭಾರತೀಯನ ಪಾಸ್‌ಪೋರ್ಟ್ ಪಡೆದು ಬದುಕುತ್ತಿದ್ದಾರೆ.

ಅಕ್ಷಯ್ ಕುಮಾರ್ ನನಗೆ ಈ ಕೆನಡಿಯನ್ ಪೌರತ್ವ ಗೌರವಾರ್ಥವಾಗಿ ಸಿಕ್ಕಿದೆ ಎಂದಿದ್ದು, ಒಂದು ವೇಳೆ ನನಗೆ ಡಾಕ್ಟರೇಟ್ ಪದವಿ ದೊರೆತರೆ ನಾನು ಡಾಕ್ಟರ್ ಆಗ್ತೀನಾ ಎಂದೂ ತನ್ನ ವಿರುದ್ಧದ ಟ್ರಾಲ್‌ಗಳನ್ನು ನಿಯಂತ್ರಿಸಲು ಪ್ರಯತ್ನಿಸಿದ್ದಾರೆ. ಆದರೆ ಟ್ರಾಲಿಗರು ತದನಂತರ ಇನ್ನೂ ಜೋರಾಗಿ ಅಕ್ಷಯ್ ಜನ್ಮ ಜಾಲಾಡಿದ್ದಾರೆ.

ವಾಸ್ತವದಲ್ಲಿ ಕೆನಡಾ ದೇಶವು ಅಕ್ಷಯ್‌ಗೆ ಮಾತ್ರವಲ್ಲದೆ ಹೆಸರಾಂತ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ಅವರಿಗೂ ತನ್ನ ಪೌರತ್ವವನ್ನು ಆಫರ್ ಮಾಡಿತ್ತು. ಆದರೆ ಎ.ಆರ್.ಆರ್ ಕೆನಡಾದ ಗೌರವಾರ್ಥ ಪೌರತ್ವವನ್ನು ನಯವಾಗಿ ತಿರಸ್ಕರಿಸಿದ್ದರು. ಮತ್ತು ಭಾರತದ ಬಗ್ಗೆ ಹೆಮ್ಮೆ ಪ್ರಕಟಿಸಿದ್ದರು.

ಎ.ಆರ್.ಆರ್ ತನಗೆ ಬಂದ ಕೆನಡಾದ ಪೌರತ್ವ ಆಫರ್‍‌ಗೆ ಈ ರೀತಿ ಪ್ರತಿಕ್ರಿಯಿಸಿದ್ದರು, “ನನಗೆ ಗೌರವಾರ್ಥವಾಗಿ ಪೌರತ್ವ ನೀಡುವುದಾಗಿ ಹೇಳಿದ ನಿಮಗೆ ಧನ್ಯವಾದಗಳು. ನಾನು ಇದರಿಂದ ತುಂಬಾ ಆಕರ್ಷಿತನಾಗಿದ್ದೇನೆ. ಆದರೆ ನಾನು ಭಾರತದ ತಮಿಳುನಾಡಿನಲ್ಲಿ ತುಂಬಾ ಸಂತೋಷದಿಂದ ಬದುಕುತ್ತಿದ್ದೇನೆ. ಭಾರತದಲ್ಲಿ ನನ್ನ ಪರಿವಾರ ಸ್ನೇಹಿತರು ಎಲ್ಲರೂ ಇದ್ದಾರೆ. ಇದ್ವರ ಜೊತೆ ನಾನು ಖುಷಿಯಾಗಿದ್ದೇನೆ. ನೀವು ಮತ್ತೊಮ್ಮೆ ಭಾರತಕ್ಕೆ ಬಂದಾಗ ನನ್ನ ಸ್ಟೂಡಿಯೋಗೆ ಖಂಡಿತಾ ಬರಬೇಕು. ಕೆನಡಾದವರ ಜೊತೆ ಜಂಟಿಯಾಗಿ ಕೆಲಸ ಮಾಡಲು ನಾನು ಕಾಯುತ್ತಿದ್ದೇನೆ.” ಈ ರೀತಿ ಹೇಳಿ ಎ.ಆರ್.ಆರ್ ಕೆನಡಾದ ಪೌರತ್ವ ಆಫರನ್ನು ರಿಜೆಕ್ಟ್ ಮಾಡಿದ್ದರು.

ಆದರೆ ದೇಶ ಭಕ್ತನಂತೆ ಪೋಸು ಕೊಡುವ ಅಕ್ಷಯ್ ಕುಮಾರ್ “ನಾನೊಬ್ಬ ಕೆನಡಿಯನ್ ಪ್ರಜೆ. ಇದರ ಬಗ್ಗೆ ಹೆಮ್ಮೆ ಇದೆ” ಎಂದು ಹೇಳಿದ್ದಾರೆ. ಈ ಹಿಂದೆ ಅಕ್ಷಯ್ “ನಾನು ಕೆನಡಾದವನು, ಬಾಲಿವುಡ್‌ನಲ್ಲಿ ನನ್ನ ಕೆಲಸ ಮುಗಿಸಿ ನಾನು ಇಲ್ಲಿಗೇ ಬಂದು ಶಾಸ್ವತವಾಗಿ ನೆಲೆಸುವೆ” ಎಂದು ಹೇಳಿದ್ದರು.

ಭಾರತದ ಸಂವಿಧಾನದ ಪ್ರಕಾರ ಒಬ್ಬ ವ್ಯಕ್ತಿ ಇನ್ನೊಂದು ದೇಶದ ಪೌರತ್ವದ ಜೊತೆಗೆ ಭಾರತದ ಪೌರತ್ವ ಹೊಂದುವ ಹಾಗಿಲ್ಲ. ಇಷ್ಟಿದ್ದೂ ಕೂಡ ಕೆನಡಾದ ಪೌರತ್ವವನ್ನು ಒಪ್ಪಿ ವಿದೇಶಿ ಪಾಸ್‌ಪೋರ್ಟ್‌ನಲ್ಲಿ ಭಾರತದಲ್ಲಿರುವ ಅಕ್ಷಯ್ ಕುಮಾರ್ ದೇಶ ಭಕ್ತನೋ ಅವಕಾಶವಾದಿಯೋ ಎಂದು ಜನರೇ ತೀರ್ಮಾನಿಸಬೇಕು.

Check Also

ಕೋರ್ಟ್ ವಿಚರಣೆಯನ್ನು ತಪ್ಪಿಸಿ ಈದ್ ಆಚರಿಸಿದ ಸಾಧ್ವಿ ಪ್ರಜ್ಞಾ

3111ಸಂದೇಶ ಇ-ಮ್ಯಾಗಝಿನ್: ಭೋಪಾಲ್ ಸಂಸದೆ ಹಾಗೂ ಮಾಲೇಗಾಂವ್ ಸ್ಪೋಟ ಪ್ರಕರಣದ ಆರೋಪಿ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಮತ್ತೊಮ್ಮೆ ವಿವಾದದ …

Leave a Reply

Your email address will not be published. Required fields are marked *