Thursday , June 20 2019
Breaking News
Home / ರಾಷ್ಟ್ರೀಯ / ಕಾಂಗ್ರೇಸ್ ವಿರುದ್ಧದ 5000 ಕೋಟಿ ರೂ ಮಾನನಷ್ಟ ಮೊಕದ್ದಮೆಯನ್ನು ಹಿಂಪಡೆಯಲು ಅನಿಲ್ ಅಂಬಾನಿ ನಿರ್ಧಾರ

ಕಾಂಗ್ರೇಸ್ ವಿರುದ್ಧದ 5000 ಕೋಟಿ ರೂ ಮಾನನಷ್ಟ ಮೊಕದ್ದಮೆಯನ್ನು ಹಿಂಪಡೆಯಲು ಅನಿಲ್ ಅಂಬಾನಿ ನಿರ್ಧಾರ

ಸಂದೇಶ ಇ-ಮ್ಯಾಗಝಿನ್: ಅನಿಲ್ ಅಂಬಾನಿ ನೇತೃತ್ವದ ರಿಲಯನ್ಸ್ ಗ್ರೂಪ್ ತಯಾರಿಸಲು ಸಿದ್ಧವಾಗಿರುವ ರಾಫೆಲ್ ಫೈಟರ್ ಜೆಟ್ ವಿವಾದದ ಬಗ್ಗೆ ಲೇಖನ ಬರೆದಿದ್ದ ಹಾಗೂ ತಮ್ಮ ವಿರುದ್ಧ ಆರೋಪ ಮಾಡಿದ್ದ ಕಾಂಗ್ರೇಸ್ ಪಕ್ಷದ ಮುಖವಾಣಿ ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಹಾಗೂ ಕಾಂಗ್ರೇಸ್ ಪಕ್ಷದ ನಾಯಕರ ವಿರುದ್ಧ ಹೂಡಲಾಗಿದ್ದ 5,000 ಕೋಟಿ ರೂ ಮಾನನಷ್ಟ ಮೊಕದ್ದಮೆಯನ್ನು ಹಿಂದಕ್ಕೆ ಪಡೆಯಲು ನಿರ್ಧರಿಸಿರುವುದಾಗಿ ಮಂಗಳವಾರ ಘೋಷಿಸಲಾಗಿದೆ. ನಾಗರಿಕ ಮತ್ತು ಸೆಷನ್ಸ್ ನ್ಯಾಯಾಧೀಶ ಪಿ.ಜೆ. ತಮಾಕುವಾಲಾ ಅವರ ಪೀಠವು ಈ ಪ್ರಕರಣವನ್ನು ವಿಚಾರಣೆ ನಡೆಸುತ್ತಿದೆ. ನ್ಯಾಷನಲ್ ಹೆರಾಲ್ಡ್ ವಕೀಲ ಪಿ.ಎಸ್. ಚಂಪ್‌ನೇರಿ ಅವರು ಹಾಗೂ ಇನ್ನಿತರ ಪ್ರಾಸಿಕ್ಯೂಟರ್‌ಗಳ ಈ ಬಗ್ಗೆ ಮಾಹಿತಿ ನೀಡಿದ್ದು ರಿಲಾಯನ್ಸ್ ಸಮೂಹದ ವಕೀಲ ರಶೇಶ್ ಪಾರೀಶ್ ಅವರು ರಿಲಾಯನ್ಸ್ ಸಮೂಹದಿಂದ ಮಾನನಷ್ಟ ಪ್ರಕರಣವನ್ನು ಹಿಂತೆಗೆದುಕೊಳ್ಳುವ ಬಗ್ಗೆ ಸೂಚನೆಗಳನ್ನು ಸ್ವೀಕರಿಸಿದ್ದೇವೆ ಎಂದು ಹೇಳಿದ್ದಾಗಿ ತಿಳಿಸಿದ್ದಾರೆ.

ಅನಿಲ್ ಅಂಬಾನಿ ಒಡೆತನದ ರಿಲಯನ್ಸ್ ಡಿಫೆನ್ಸ್, ರಿಲಯನ್ಸ್ ಇನ್ಫ್ರಾಸ್ಟ್ರಕ್ಚರ್, ರಿಲಯನ್ಸ್ ಏರೋಸ್ಟ್ರಕ್ಚರ್ ಸಂಸ್ಥೆ ಕಾಂಗ್ರೆಸ್ ನಾಯಕ ಸುನಿಲ್ ಜಾಖಡ್, ರಣದೀಪ್ ಸಿಂಗ್ ಸುರ್ಜೆವಾಲಾ, ಉಮ್ಮನ್ ಚಾಂಡಿ, ಅಶೋಕ್ ಚವಾಣ್, ಅಭಿಷೇಕ್ ಸಿಂಘ್ವಿ, ಸಂಜಯ್ ನಿರುಪಮ್, ಶಕ್ತಿ ಸಿಂಗ್ ಗೋಹಿಲ್ ಹಾಗೂ ನ್ಯಾಷನಲ್ ಹೆರಾಲ್ಡ್ ಸಂಪಾದಕಾರದ ಜಾಫರ್ ಆಗಾ ಹಾಗೂ ಲೇಖನದ ಲೇಖಕ ವಿಶ್ವ ದೀಪಕ್ ವಿರುದ್ಧ ಮಾನಹಾನಿ ದಾಖಲಿಸಿತ್ತು.

Check Also

ಉಗ್ರರ ಗುಂಡಿಗೆ ಎದೆಯೊಡ್ಡಿದ್ದ ಜಮ್ಮು ಪೊಲೀಸ್ ಅಧಿಕಾರಿ ಅರ್ಶದ್ ಅಹ್ಮದ್ ಹುತಾತ್ಮ

101ಸಂದೇಶ ಇ-ಮ್ಯಾಗಝಿನ್: ಜೂನ್ 12 ರಂದು ಜಮ್ಮು ಮತ್ತು ಕಾಶ್ಮೀರದ ಅನಂತ್‌ನಾಗ್ ಜಿಲ್ಲೆಯಲ್ಲಿ ನಡೆದ ಉಗ್ರರ ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ …

Leave a Reply

Your email address will not be published. Required fields are marked *