Monday , September 16 2019
Breaking News
Home / ರಾಷ್ಟ್ರೀಯ / ಅಕ್ಬರುದ್ಧೀನ್ ಓವೈಸಿ ಸ್ಥಿತಿ ಗಂಭೀರ-ಸೋದರ ಅಸಾದ್ ತಮ್ಮ ಬೆಂಬಲಿಗರಿಗೆ ಈ ರೀತಿ ಮನವಿ ಮಾಡಿದ್ದಾರೆ

ಅಕ್ಬರುದ್ಧೀನ್ ಓವೈಸಿ ಸ್ಥಿತಿ ಗಂಭೀರ-ಸೋದರ ಅಸಾದ್ ತಮ್ಮ ಬೆಂಬಲಿಗರಿಗೆ ಈ ರೀತಿ ಮನವಿ ಮಾಡಿದ್ದಾರೆ

ಸಂದೇಶ ಇ-ಮ್ಯಾಗಝಿನ್: ಆಲ್ ಇಂಡಿಯಾ ಮಜ್ಲಿಸೆ ಇತ್ತಿಹಾದುಲ್ ಮುಸ್ಲಿಮೀನ್ ಪಕ್ಷದ ಮುಖಂಡ ಅಕ್ಬರುದ್ದೀನ್ ಓವೈಸಿ ಅವರ ಆರೋಗ್ಯದ ಸ್ಥಿತಿ ಗಂಭೀರವಾಗಿದ್ದು, ಚಿಂತಾಜನಕ ಸ್ಥಿತಿಯಲ್ಲಿ ಲಂಡನ್‌ನ ಆಸ್ಪತ್ರೆಗೆ ದಾಖಲಾಗಿದ್ದು, ಅಲ್ಲಿ ಅವರಿಗೆ ಚಿಕಿತ್ಸೆ ನಡೆಯುತ್ತಿದ್ದು ಅವರ ಸ್ಥಿತಿ ಗಂಭೀರವಾಗಿದೆ. ತಮ್ಮ ಹಿತೈಶಿಗಳು ಅಕ್ಬರುದ್ದೀನ್ ಓವೈಸಿಯವರ ಆರೋಗ್ಯಕ್ಕಾಗಿ ಪ್ರಾರ್ಥಿಸುವಂತೆ ಸಹೋದರ ಅಸಾದುದ್ದೀನ್ ಓವೈಸಿ ಮನವಿ ಮಾಡಿದ್ದಾರೆ. ತೆಲಂಗಾಣದ ಚಂದ್ರಯಾಣಘಟ್ಟಾದ ಶಾಸಕರಾಗಿರುವ ಅಕ್ಬರುದ್ದೀನ್ ಓವೈಸಿಯವರು 2011 ರಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದಾಗ ಅವರಿಗೆ ಗುಂಡೇಟು ತಗಲಿದ್ದು, ಅದರ ಚಿಕಿತ್ಸೆಗಾಗಿಯೆ ಲಂಡನ್‌ಗೆ ತೆರಳಿದ್ದರು. ಲೋಕಸಭಾ ಚುನಾವಣೆಗಿಂತ ಮೊದಲೇ ಅಕ್ಬರುದ್ದೀನ್ ಲಂಡನ್‌‍ನಲ್ಲಿ ಚಿಕಿತ್ಸೆಗೆ ತೆರಳಿದ್ದರು.

ಇದೀಗ ಅವರ ಸ್ಥಿತಿ ಗಂಭೀರವಾಗಿದ್ದು, ಆಂಧ್ರದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ, ತೆಲಂಗಾಣದ ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ಸೇರಿದಂತೆ ರಾಜಕೀಯ ನಾಯಕರು ಅಕ್ಬರುದ್ದೀನ್ ಓವೈಸಿಯವರ ಆರೋಗ್ಯಕ್ಕಾಗಿ ಶುಭಹಾರೈಸಿದ್ದಾರೆ.

Check Also

ಕೈರಾನಾ: ಬಿಜೆಪಿ ವರ್ತಕರನ್ನು ಬಹಿಷ್ಕರಿಸುವಂತೆ ಮುಸ್ಲಿಮರನ್ನು ಒತ್ತಾಯಿಸಿದ ಎಸ್ಪಿ ಮುಖಂಡ

000ಸಂದೇಶ ಇ-ಮ್ಯಾಗಝಿನ್: ಉತ್ತರ ಪ್ರದೇಶದ ಕೈರಾನಾದ ಸಮಾಜವಾದಿ ಪಕ್ಷದ (ಎಸ್‌ಪಿ) ಶಾಸಕ ನಹೀದ್ ಹಸನ್ ಅವರು ಈ ಪ್ರದೇಶದಲ್ಲಿ ವಾಸಿಸುವ …

Leave a Reply

Your email address will not be published. Required fields are marked *