Monday , July 22 2019
Breaking News
Home / ರಾಷ್ಟ್ರೀಯ / ಹಜ್ ಯಾತ್ರಿಕರಿಗೆ ಝಮ್ ಝಮ್ ಸಾಗಾಟ ನಿರ್ಬಂಧ ಆದೇಶವನ್ನು ಹಿಂಪಡೆದ ಏರ್ ಇಂಡಿಯಾ

ಹಜ್ ಯಾತ್ರಿಕರಿಗೆ ಝಮ್ ಝಮ್ ಸಾಗಾಟ ನಿರ್ಬಂಧ ಆದೇಶವನ್ನು ಹಿಂಪಡೆದ ಏರ್ ಇಂಡಿಯಾ

ಸಂದೇಶ ಇ-ಮ್ಯಾಗಝಿನ್: ವಿವಾದಕ್ಕೆ ಕಾರಣವಾಗಿದ್ದ ಏರ್ ಇಂಡಿಯಾ ವಿಮಾನಗಳಲ್ಲಿ ಜೆದ್ದಾ-ಹೈದರಾಬಾದ್-ಮುಂಬೈ ಮತ್ತು ಜೆದ್ದಾ-ಕೊಚ್ಚಿನ್ ಗೆ ಪ್ರಯಾಣಿಸುವ ಹಜ್ ಯಾತ್ರಿಕರು ಝಮ್ ಝಮ್ ನೀರು ಸಾಗಿಸಲು ನಿರ್ಬಂಧ ಹೇರಿದ ನಿರ್ಧಾರಕ್ಕೆ ಸಂಬಂಧಿಸಿದಂತೆ ವಿವಾದದ ನಂತರ ವಿಮಾನಯಾನ ಸಂಸ್ಥೆ ಇದೀಗ ತನ್ನ ನಿರ್ಧಾರವನ್ನು ಬದಲಾಯಿಸಿದೆ. ಹಜ್‌ಗೆ ಹೋಗುವ ಟ್ರಾವೆಲ್ ಏಜೆಂಟರು ಮತ್ತು ಯಾತ್ರಾರ್ಥಿಗಳಿಗೆ ಝಮ್ ಝಮ್ ನೀರು ಕೊಂಡು ಹೋಗಬಹುದು ಎಂದು ಏರ್ ಇಂಡಿಯಾ ತಿಳಿಸಿದೆ. ಹಿಂದಿನ ಸೂಚನೆಗಳಿಂದಾಗಿ ಜನರಿಗೆ ಉಂಟಾದ ಅನಾನುಕೂಲತೆಗಾಗಿ ವಿಮಾನಯಾನ ಸಂಸ್ಥೆಯು ಕ್ಷಮೆಯಾಚಿಸಿದೆ. ಜುಲೈ 4 ರಂದು ಏರ್ ಇಂಡಿಯಾದ ಜೆದ್ದಾ ಮುಖ್ಯ ಕಚೇರಿಯಿಂದ ನಿರ್ದಿಷ್ಟ ಕಾರಣಗಳನ್ನು ಉಲ್ಲೇಖಿಸಿ ವಿಮಾನದಲ್ಲಿ 15 ಸೆಪ್ಟಂಬರ್ ವರೆಗೆ ಝಮ್ ಝಮ್ ಸಾಗಾಟಕ್ಕೆ ನಿರ್ಬಂಧ ಹೇರಲಾಗಿತ್ತು.

ವಿಮಾನದಲ್ಲಿನ ಬದಲಾವಣೆಗಳು ಮತ್ತು ಸೀಮಿತ ಆಸನಗಳಿಂದಾಗಿ ಝಮ್ ಝಮ್ ನೀರಿನ ಕ್ಯಾನ್‌ಗಳನ್ನು ಜೆದ್ದಾ-ಹೈದರಾಬಾದ್-ಮುಂಬೈ ಮತ್ತು ಜೆದ್ದಾ-ಕೊಚ್ಚಿನ್ ಗೆ ಪ್ರಯಾಣಿಸುವ ಹಜ್ ಯಾತ್ರಿಕರಿಗೆ ಸಾಗಾಟ ಮಾಡಲು ಅನುಮತಿಸುವುದಿಲ್ಲ ಎಂದು ಈ ಸೂಚನೆಯಲ್ಲಿ ತಿಳಿಸಲಾಗಿತ್ತು. ಆ ಬಳಿಕ ಮಹಾರಾಷ್ಟ್ರದ ಕಾಂಗ್ರೇಸ್ ಶಾಸಕ ಅಮೀನ್ ಪಟೇಲ್ ಅವರು ಮಧ್ಯಪ್ರವೇಶ ಮಾಡಿ, ಯಾತ್ರಿಕರಿಗೆ ವಿಮನದಲ್ಲಿ ಝಮ್ ಝಮ್ ಸಾಗಾಟ ಮಾಡಲು ಅನುಮತಿಸುವಂತೆ ಸರಕಾರಕ್ಕೆ ಪತ್ರ ಬರೆದ್ದರು.

Check Also

ಐಎಂಎ ವಂಚಕ ಮನ್ಸೂರ್ ಖಾನ್ ದೆಹಲಿ ವಿಮಾನ ನಿಲ್ದಾಣದಲ್ಲಿ ಅರೆಸ್ಟ್

000ಸಂದೇಶ ಇ-ಮ್ಯಾಗಝಿನ್: ಶುಕ್ರವಾರ ಮುಂಜಾನೆ ದುಬೈನಿಂದ ನವದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಬಹು ಕೋಟಿ ಐಎಂಎ ಫಾಂಝಿ ಸ್ಕೀಮ್ ಹಗರಣದ …

Leave a Reply

Your email address will not be published. Required fields are marked *