Thursday , June 20 2019
Breaking News
Home / ರಾಷ್ಟ್ರೀಯ / ಅಹ್ಮದಾಬಾದ್ ವೈದ್ಯಕೀಯ ನಿರ್ಲಕ್ಷ್ಯ ಪ್ರಕರಣ; ನರ್ಸ್ ತಪ್ಪಿನಿಂದಾಗಿ ಮಗುವಿನ ಬೆರಳಿಗಾಯಿತು ಈ ಗತಿ

ಅಹ್ಮದಾಬಾದ್ ವೈದ್ಯಕೀಯ ನಿರ್ಲಕ್ಷ್ಯ ಪ್ರಕರಣ; ನರ್ಸ್ ತಪ್ಪಿನಿಂದಾಗಿ ಮಗುವಿನ ಬೆರಳಿಗಾಯಿತು ಈ ಗತಿ

ಸಂದೇಶ ಇ-ಮ್ಯಾಗಝಿನ್: ವೈದ್ಯಕೀಯ ನಿರ್ಲಕ್ಷ್ಯದ ಪ್ರಕರಣದಲ್ಲಿ 5 ತಿಂಗಳ ಮಗುವಿನ ಹೆತ್ತವರು ನರ್ಸ್ ಒಬ್ಬರು ಮಗುವಿನ ಹೆಬ್ಬೆರಳು ಕತ್ತರಿಸಿದ್ದಾರೆ ಎಂದು ಮಗುವಿನ ಹೆತ್ತವರು ಆರೋಪಿಸಿದ್ದಾರೆ. ಈ ಘಟನೆ ಅಹ್ಮದಾಬಾದ್‌ನ ಶೇತ್ ವಡಿಲಾಲ್ ಸಾರಾಭಾಯ್ ಆಸ್ಪತ್ರೆಯಲ್ಲಿ ನಡೆದಿದೆ. ಆಸ್ಪತ್ರೆಯ ಅಧಿಕಾರಿಗಳು ಮಗುವು ನ್ಯುಮೋನಿಯಾದಿಂದ ಬಳಲುತ್ತಿತ್ತು ಎಂದು ಹೇಳಿದ್ದಾರೆ. ಆಸ್ಪತ್ರೆಯಿಂದ ಬಿಡಿಗಡೆಯಾಗುವ ದಿನ ಬೆರಳಿಗೆ ಕಟ್ಟಲಾಗಿದ್ದ ಬ್ಯಾಂಡೇಜನ್ನು ಕಳಚುವಾಗ ಕೈ ತಪ್ಪಿ ಮಗುವಿನ ಹೆಬ್ಬೆರಳು ತುಂಡಾಗಿದೆ. ಇದು ಕಣ್ತಪ್ಪಿನಿಂದಾದ ಕೃತ್ಯ ಎಂದು ಗೊಡ್ಡು ಸಮರ್ಥನೆ ನೀಡಿದೆ. ಆಸ್ಪತ್ರೆಯ ರೆಸಿಡೆಂಟ್ ವೈದ್ಯಕೀಯ ಅಧಿಕಾರಿ ಡಾ.ಜಿತೇಂದ್ರ ಪರ್ಮಾರ್ ಅವರ ಪ್ರಕಾರ, “ಬ್ಯಾಂಡೇಜ್ ಕಳಚುವಾಗ ಹೆಬ್ಬೆರಳಿನ ತುದಿಗೆ ಗಾಯವಾಗಿದ್ದು ಪ್ಲಾಸ್ಟಿಕ್ ಶಸ್ತ್ರ ಚಿಕಿತ್ಸಕನಿಂದ ಅದನ್ನು ತಕ್ಷಣವೇ ಹೊಲಿಸಲಾಗಿದೆ ಎಂದು ಹೇಳಿದ್ದಾರೆ.

ಮಗು ನ್ಯುಮೋನಿಯಾ ರೋಗದಿಂದ ಬಳಲುತ್ತಿತ್ತು. ನರ್ಸ್ ಹೆಬ್ಬೆರಳ ಮೇಲಿನ ಬ್ಯಾಂಡೇಜ್ ತೆಗೆಯುವಾಗ ತಪ್ಪಾಗಿ ಮಗುವಿನ ಹೆಬ್ಬೆರಳು ಗಾಯವಾಗಿದೆ. ಇದನ್ನು ಪ್ಲಾಸ್ಟಿಕ್ ಸರ್ಜನ್‌ರ ಸಹಾಯದಿಂದ ತಕ್ಷಣವೇ ಹೊಲಿಯಲಾಗುತ್ತಿತ್ತು. ವಿಷಯವನ್ನು ತನಿಖೆ ಮಾಡಲು ಸಮಿತಿಯನ್ನು ರಚಿಸಲಾಗಿದೆ ಮತ್ತು ಅದಕ್ಕೆ ಅನುಗುಣವಾಗಿ ಕ್ರಮ ತೆಗೆದುಕೊಳ್ಳಲಾಗುವುದು. ಮಗುವಿನ ಹೆತ್ತವರು ಪೊಲೀಸರ ಬಳಿ ತೆರಳಿ ನರ್ಸ್ ಮತ್ತು ಆಸ್ಪತ್ರೆಯ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ ಡಾ.ಜಿತೇಂದ್ರ ಪರ್ಮಾರ್ ತಿಳಿಸಿದ್ದಾರೆ.

Check Also

ಉಗ್ರರ ಗುಂಡಿಗೆ ಎದೆಯೊಡ್ಡಿದ್ದ ಜಮ್ಮು ಪೊಲೀಸ್ ಅಧಿಕಾರಿ ಅರ್ಶದ್ ಅಹ್ಮದ್ ಹುತಾತ್ಮ

101ಸಂದೇಶ ಇ-ಮ್ಯಾಗಝಿನ್: ಜೂನ್ 12 ರಂದು ಜಮ್ಮು ಮತ್ತು ಕಾಶ್ಮೀರದ ಅನಂತ್‌ನಾಗ್ ಜಿಲ್ಲೆಯಲ್ಲಿ ನಡೆದ ಉಗ್ರರ ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ …

Leave a Reply

Your email address will not be published. Required fields are marked *