Monday , August 26 2019
Breaking News
Home / ವೀಡಿಯೋ / ವೀಡಿಯೊ: ‘ಕೃತಕ ಕಾಲು’ ಪಡೆದ ನಂತರ ಆಫ್ಘಾನ್ ಬಾಲಕನ ಮನಕಲಕುವ ನೃತ್ಯವು ಆನ್‌ಲೈನ್‌ನಲ್ಲಿ ವೈರಲ್ ಆಗಿದೆ

ವೀಡಿಯೊ: ‘ಕೃತಕ ಕಾಲು’ ಪಡೆದ ನಂತರ ಆಫ್ಘಾನ್ ಬಾಲಕನ ಮನಕಲಕುವ ನೃತ್ಯವು ಆನ್‌ಲೈನ್‌ನಲ್ಲಿ ವೈರಲ್ ಆಗಿದೆ

ಸಂದೇಶ ಇ-ಮ್ಯಾಗಝಿನ್: ಯುದ್ಧವೆಂದರೆ ಏನು ಅಂತ ನಮಗೆ ಗೊತ್ತು, ನಾವು ದಿನ ನಿತ್ಯ ಜಗತ್ತಿನಲ್ಲಿ ನಡೆಯುತ್ತಿರುವ ಯುದ್ಧಗಳ ಸುದ್ದಿಯನ್ನು ಪತ್ರಿಕೆಯಲ್ಲಿ ಓದುತ್ತೇವೆ. ಆದರೆ ಅದರ ಪರಿಣಾಮ ಎಷ್ಟು ಭೀಕರವಾಗಿರುತ್ತೆ ಅಂತ ನಮಗೆ ನಿಜಕ್ಕೂ ಅನುಭ್ವವಿಲ್ಲ. ಯುದ್ಧದ ಪರಿಣಾಮ ಎಷ್ಟು ಭೀಕರ ಎಂದು ಅದರ ಸಂತ್ರಸ್ತರ ನೋವನ್ನು ನೋಡಿಯೇ ಅರಿಯಬೇಕು. ಯುದ್ಧ ಪೀಡಿತ ಅಫ್ಘಾನಿಸ್ತಾನದಲ್ಲಿ ಯುದ್ಧ ದಿಂದಾಗಿ ಕಾಲು ಕಳುಕೊಂಡಿದ್ದ ಪುಟ್ಟ ಬಾಲಕ ತನಗೆ ಕೃತಕ ಕಾಲು ಜೋಡಿಸಿದ ನಂತರ ಖುಷಿಯಿಂದ ಡ್ಯಾನ್ಸ್ ಮಾಡುವ ವೀಡಿಯೋವೊಂದು ವೈರಲ್ ಆಗಿದೆ. ಅಹ್ಮದ್ 8 ತಿಂಗಳ ಪ್ರಾಯದವನಾಗಿದ್ದಾಗ ಯುದ್ಧದ ಸಮಯದಲ್ಲಿ ಸಿಡಿದಿದ್ದ ಗುಂಡಿನ ಚೂರೊಂದು ಮಗುವಿನ ಕಾಲಿನ ಎಲುಬಿಗೆ ತಾಗಿ ಕೊನೆಗೆ ಮಗುವಿನ ಕಾಲೇ ತುಂಡು ಮಾಡಿ ತೆಗೆಯುವಂತಾಗಿತ್ತು. ಅಂದು ಅಹ್ಮದ್ ನ ತಾಯಿ ಅಸಹಾಯಕಳಾಗಿ ಅಳುತ್ತಾ ಸಮೀಪದಲ್ಲೇ ಇದ್ದ ರೆಡ್‌ಕ್ರಾಸ್ ಚಿಕಿತ್ಸಾ ಶಿಬಿರಕ್ಕೆ ಹೊತ್ತೊಯ್ದು ಚಿಕಿತ್ಸಿಸಿದ್ದರು. ಇದೀಗ ಅಹ್ಮದ್ ಗೆ 5 ವರ್ಷ ಪ್ರಾಯವಾಗಿದ್ದು, “ಇನ್ನೆಂದೂ ಯುದ್ದ ಸಂಭಂವಿಸಲೇ ಬಾರದು, ನನ್ನ ದೇಶ ಶಾಂತಿಯಿಂದಿರಲಿ ಎಂದು ನಾನು ಬೇಡುತ್ತೇನೆ” ಎಂದು ಹೇಳಿದ್ದಾನೆ.

Check Also

ಕೋರ್ಟ್ ವಿಚರಣೆಯನ್ನು ತಪ್ಪಿಸಿ ಈದ್ ಆಚರಿಸಿದ ಸಾಧ್ವಿ ಪ್ರಜ್ಞಾ

3111ಸಂದೇಶ ಇ-ಮ್ಯಾಗಝಿನ್: ಭೋಪಾಲ್ ಸಂಸದೆ ಹಾಗೂ ಮಾಲೇಗಾಂವ್ ಸ್ಪೋಟ ಪ್ರಕರಣದ ಆರೋಪಿ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಮತ್ತೊಮ್ಮೆ ವಿವಾದದ …

Leave a Reply

Your email address will not be published. Required fields are marked *