Tuesday , December 10 2019
Breaking News
Home / ಇಸ್ಲಾಮಿಕ್ ವ್ಯಕ್ತಿತ್ವ / ಇಳಿ ವಯಸ್ಸಿನಲ್ಲಿ ಸೈಕಲ್ ಮೂಲಕ ಹಜ್‌ಗೆ ಹೊರಟರು ಅಫಾಕ್ ಸಾಬ್

ಇಳಿ ವಯಸ್ಸಿನಲ್ಲಿ ಸೈಕಲ್ ಮೂಲಕ ಹಜ್‌ಗೆ ಹೊರಟರು ಅಫಾಕ್ ಸಾಬ್

ಸಂದೇಶ ಇ-ಮ್ಯಾಗಝಿನ್: ಹಜ್ ಎಂಬುದು ಮುಸ್ಲಿಮರಿಗೆ ಪವಿತ್ರವಾದ ಯಾತ್ರೆ. ಇಸ್ಲಾಮಿನ ಪಂಚ ಸ್ತಂಭಗಳಲ್ಲಿ ಕೊನೆಯ ಸ್ತಂಭವಾದ ಹಜ್ ಕರ್ಮವನ್ನು ಧನ ಇದ್ದವರಿಗೆ ಇಸ್ಲಾಮ್ ಕಡ್ಡಾಯ ಮಾಡಿದೆ. ಆದರೂ ಹೆಚ್ಚಿನ ಶ್ರೀಮಂತರು ಹಜ್ ಕರ್ಮವನ್ನು ನಿರ್ವಹಿಸಲು ಮುಂದಾಗುವುದಿಲ್ಲ ಎಂಬುದು ವಾಸ್ತವ. ಆದರೆ ಮುಂಬೈ ಗೋವಂಡಿಯ ಜನಾಬ್ ಅಫಾಕ್ ಅನ್ವರ್ ಲಾಡಿ ಸಾಹೇಬ್ ಅವರು ಈ ಇಳಿ ವಯಸ್ಸಿನಲ್ಲಿ ಸೈಕಲ್ ನಲ್ಲಿ ಹಜ್ಜ್ ಯಾತ್ರೆ ಕೈಗೊಂಡಿದ್ದಾರೆ. ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮುಂಬೈ ನಿಂದ ಯಾತ್ರೆ ಪ್ರಾರಂಭಿಸಿರುವ ಅಫಾಕ್ ಸಾಬ್ ವಾಘಾಗಡಿಯ ಮೂಲಕ ಪಾಕಿಸ್ತಾನ ಪ್ರವೇಶಿಸಿ ಅಲ್ಲಿಂದ ಇರಾನ್ ಜಾರ್ಡನ್ ಮಾರ್ಗವಾಗಿ ಸೌದಿ ಅರೇಬಿಯಾವನ್ನು ತಲುಪಲಿದ್ದಾರೆ. ತಮ್ಮ ಸೈಕಲ್‌ನ ಮುಂಭಾಗದಲ್ಲಿ ಭಾರತದ ರಾಷ್ಟ್ರೀಯ ಧ್ವಜವಾದ ತಿರಂಗವನ್ನು ಸ್ಥಾಪಿಸಿರುವ ಅಫಾಕ್ ಸಾಬ್ ಈ ಮೂಲಕ ನಾನು ಭಾರತದಲ್ಲಿ ಮುಸ್ಲಿಮರ ಮೇಲೆ ನಡೆಯುತ್ತಿರುವ ಕೋಮು ಹಲ್ಲೆಗಳ ವಿರುದ್ಧ ಸಾಮರಸ್ಯದ ಸಂದೇಶವನ್ನು ತಲುಪಿಸ ಬಯಸುವುದಾಗಿ ತಿಳಿಸಿದ್ದಾರೆ.

ಸುಮಾರು ಆರು ತಿಂಗಳ ಈ ಸುದೀರ್ಘ ಪ್ರಯಾಣದಲ್ಲಿ ರಮದಾನ್ ಕೂಡ ಎದುರಾಗಲಿದ್ದು, ಸುಖಕರವಾಗಿ ಪ್ರಯಾಣಿಸಿ ಹಜ್ ನಿರ್ವಹಿಸಿ ವಾಪಸಾಗುವಂತೆ ದಾರಿಯುದ್ದಕ್ಕೂ ಅಫಾಕ್ ಸಾಬ್ ರನ್ನು ಭೇಟಿಯಾಗಲು ಬಂದ ಜನರು ಶುಭ ಹಾರೈಸಿದ್ದಾರೆ.

ಮಕ್ಕಾಗೆ ಸೈಕಲ್ ಪ್ರಯಾಣಿಸಲಿರುವ ಅಫಾಕ್ ಸಾಬ್ ಹಿಂದಿರುಗುವಾಗ ವಿಮಾನದ ಮೂಲಕ ಹಿಂದಿರುಗಲಿದ್ದಾರೆ. ಇಳಿ ವಯಸ್ಸಿನಲ್ಲೂ ಯುವಕರನ್ನು ಮೀರಿಸುವ ಸಾಹಸ ಮಯ ಕೃತ್ಯಕ್ಕೆ ಕೈ ಹಾಕುವ ಅಫಾಕ್ ಸಾಬ್‌ರ ಈ ಹುಮ್ಮಸ್ಸಿಗೆ ನಮ್ಮದೊಂದು ಸಲಾಂ. ಸುಖ ಪ್ರಯಾಣ ಮುಗಿಸಿ ಹಜ್ ನಿರ್ವಹಿಸಲಿ ಎಂದು ಹಾರೈಸೋಣ.

Check Also

ಇತಿಹಾಸದಲ್ಲಿ ಮೊದಲ ಬಾರಿಗೆ ಹಿಂದೂಗಳು ಜುಮಾ ಪ್ರವಚನ ಕೇಳಲು ಮಸೀದಿಗೆ ಬಂದ ಘಟನೆ

ಸಂದೇಶ ಇ-ಮ್ಯಾಗಝಿನ್: ಭಾರತ ರತ್ನ ಮೌಲಾನಾ ಅಬುಲ್ ಕಲಾಂ ಆಝಾದ್ ಅವರು ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಮುಖವಾಗಿದ್ದರು. ಗಾಂಧೀಜಿ, …

Leave a Reply

Your email address will not be published. Required fields are marked *