Tuesday , July 23 2019
Breaking News
Home / ಲೇಖನ / ಮಗನನ್ನು ಬೆಳೆಸುವಾಗ ತಾಯಂದಿರು ಎಸಗುವ 4 ಪ್ರಮುಖ ತಪ್ಪುಗಳು

ಮಗನನ್ನು ಬೆಳೆಸುವಾಗ ತಾಯಂದಿರು ಎಸಗುವ 4 ಪ್ರಮುಖ ತಪ್ಪುಗಳು

ಸಂದೇಶ ಇ-ಮ್ಯಾಗಝಿನ್: ಎಲ್ಲಾ ಕಾಲಘಟ್ಟದಲ್ಲೂ ತಾಯಂದಿರು ತಮ್ಮ ಬೆಳೆಯುತ್ತಿರುವ ಮಗನ ಬಗ್ಗೆ ಹೇಳುವ ಕಂಪ್ಲೇಂಟ್ ಏನಂದ್ರೆ, ಅವನು ನನ್ನ ಮಾತು ಕೇಳುತ್ತಿಲ್ಲ. ಮೀಸೆ ಬಲಿತಿಲ್ಲ ಈಗಲೇ ದೊಡ್ಡ ಗಂಡಸಿನ ಹಾಗೆ ವರ್ತಿಸುತ್ತಾನೆ. ನನ್ನ ಮಗ ತುಂಬಾ ಹಾಳಾಗಿದ್ದಾನೆ. ನಾನು ಮಾತಾಡುವಾಗ ಎದುರುತ್ತರ ಕೊಡುತ್ತಾನೆ. ತಾಯಂದಿರ ಇಂತಹ ದೂರುಗಳನ್ನು ನೀವು ಕೇಳಿಯೇ ಇರುತ್ತೀರ. ಇದಕ್ಕೆ ಕಾರಣವೇನಿರಬಹುದು. ಸಿಂಪಲ್ಲಾಗಿ ಹೇಳಬೇಕೆಂದರೆ ಇದಕ್ಕೆಲ್ಲ ಕಾರಣ ತಾಯಂದಿರೇ ಆಗಿರುತ್ತಾರೆ. ಹೌದು, ನೀವು ಯಾವ ರೀತಿ ಬೆಳೆಸುತ್ತೀರೋ ಮಕ್ಕಳು ಅದೇ ರೀತಿ ಬೆಳೆಯುತ್ತಾರೆ. ಪ್ರೀತಿಯ ತಾಯಂದಿರೇ ನೀವು ಗಂಡು ಮಕ್ಕಳನ್ನು ಬೆಳೆಸುವಾಗ ಮಾಡುವ ನಾಲ್ಕು ಪ್ರಮುಖ ತಪ್ಪುಗಳನ್ನು ನಾನು ಕೆಳಗೆ ವಿವರಿಸಲು ಬಯಸುತ್ತೇನೆ. ನೀವು ಅಂತಹ ತಾಯಂದಿರಲ್ಲಿ ಒಳಪಟ್ಟಿದ್ದರೆ ಖಂಡಿತಾ ಸುಧಾರಿಸಲು ಪ್ರಯತ್ನಿಸಿ.

1. ಮನೆಯಲ್ಲಿ ಮನೆ ಕೆಲಸ ಮಾಡುವ ಪಾತ್ರ ಮಗಳಿಗೆ ಮಾತ್ರ ಅನ್ವಯಿಸುತ್ತೆ:
ಇದು ತಾಯಂದಿರುವ ತಮ್ಮ ಮಗನ ಜವಾಬ್ದಾರಿಯುತ ಜೀವನವನ್ನು ಹಾಳುವ ಮಾಡುವ ಪ್ರಥಮ ಹಂತ. ಮನೆಯ ಯಾವುದೇ ಕೆಲಸವಿರಲಿ, ಅದು ಪಾತ್ರೆ ತೊಳೆಯುವುದಿರಬಹುದು, ಕಸ ಗುಡಿಸುವುದು, ಬಟ್ಟೆ ತೊಳೆಯುವುದು, ನೆಲ ಒರೆಸುವುದು, ಅಡುಗೆ ಮಾಡುವುದು ಇಂತಹ ಯಾವುದೇ ಜವಾಬ್ದಾರಿ ಯಾದರೂ ಅದರ ಬಗ್ಗೆ ಮಗನನ್ನು ತಾಯಿ ಕೇಳಲಾರಳು. ಮಗಳನ್ನು ಮಾತ್ರ ಕೇಳುತ್ತಾಳೆ. ಅದು ಮಾಡು ಇದು ಮಾಡು ಅಂತ. ಮಗ ಮನೆಗೆ ಬಂದು ಆರಾಮವಾಗಿ ಟಿವಿ ನೋಡಿ ಸಮಯಕ್ಕೆ ಸರಿಯಾಗಿ ತಿಂದು ಯಾವುದೇ ಕೆಲಸದ ಜವಾಬ್ದಾರಿ ಇಲ್ಲದೆ ಹುಡುಗರ ಜೊತೆ ಆಡವಾಡುತ್ತಾನೆ. ಮಗಳು ತನ್ನ ಶಾಲೆಯ ಹೋಂವರ್ಕ್ ಮಾಡಲು ಇದ್ದರೂ ಕೂಡ ಅದರ ಜೊತೆಗೆ ಮನೆ ಕೆಲಸ ನಿರ್ವಹಿಸುತ್ತಾಳೆ. ಆದರೆ ಕೆಲವು ಮನೆಗಳಲ್ಲಿ ಮಗಳೂ ಕೂಡ ಯಾವುದೇ ಜವಾಬ್ದಾರಿ ಇಲ್ಲದೆ ತಾಯಿಯ ಮನೆಯ ಯಾವ ಕೆಲಸದಲ್ಲೂ ಸಹಾಯ ಮಾಡದಂತಹ ಸ್ಥಿತಿ ಕೂಡ ಇದೆ. ಸಣ್ಣ ಪ್ರಾಯದಲ್ಲೇ ಹುಡುಗರ ಮನಸ್ಸಿಗೆ ಈ ರೀತಿ ಭಾವನೆ ಬಿದ್ದರೆ ಅವರು ಸೋಮಾರಿಗಳಾಗುತ್ತಾರೆ. ಮತ್ತೆ ಅವರು ನಿಮಗೆ ಹೆದರುವುದೂ ಇಲ್ಲ.

2. ಮಗನಿಗೆ ಮಗಳಿಗಿಂತ ಹೆಚ್ಚಿನ ಪ್ರಾಶಸ್ತ್ಯ:
ಇದು ಹೆಚ್ಚಿನ ತಾಯಂದಿರ ಚಾಳಿ. ಮಗಳು ಕಲಿತು ಏನು ಮಾಡುತ್ತಾಳೆ.? ಇನ್ನೊಬ್ಬನ ಮನೆಯ ಮುಸುರೆ ತಿಕ್ಕಲು ಹೋಗುತ್ತಾಳೆ. ಮಗನಿಗೆ ಮಾತ್ರ ಶಿಕ್ಷಣ ಸಾಕು. ಆತ ಕಲಿತು ನಮ್ಮನ್ನು ಉದ್ಧಾರ ಮಾಡುತ್ತಾನೆ. ಮಗನು ಯಾವುದೇ ಬೇಡಿಕೆ ಇಟ್ಟರೂ ಅದನ್ನು ಕಷ್ಟ ಪಟ್ಟಾದರೂ ಪೂರೈಸುವುದು. ಮಗಳನ್ನು ಅವಗಣಿಸುವುದು. ಇಂತಹ ಮನಸ್ಥಿತಿಯವರೇ ಹೆಚ್ಚಿವನರು ಇದ್ದಾರೆ. ಇದರಿಂದಾಗಿ ಹುಡುಗರಿಗೆ ಸಣ್ಣ ಪ್ರಾಯದಲ್ಲೇ ಹೆಣ್ಣು ತನಗಿಂತ ಕೀಳು ಆಕೆ ಪ್ರಯೋಜನಕ್ಕೆ ಬಾರದವಳು ಎಂಬ ಭಾವನೆ ಬೆಳೆಯುತ್ತದೆ. ಮುಂದೆ ಮದುವೆಯಾದ ಮೇಲೆ ಆತ ತನ್ನ ಹೆಂಡತಿಯನ್ನು ಕಂಟ್ರೋಲ್ ಮಾಡಲು ಪ್ರಯತ್ನಿಸುತ್ತಾನೆ. ಆಕೆಯ ಎಲ್ಲಾ ಆಸೆ ಆಕಾಂಕ್ಷೆಗಳನ್ನು ಕೀಳಾಗಿ ಕಾಣುತ್ತಾನೆ. ಇದರಿಂದಾಗಿ ಪುರುಷ ಪ್ರಧಾನ ಸಮಾಜ ನಿರ್ಮಾಣವಾಗುತ್ತದೆ.

3. ಮಗನ ತಪ್ಪನ್ನು ಮನ್ನಿಸುವುದು, ಮಗಳ ತಪ್ಪನ್ನು ಗಂಭೀರವಾಗಿ ಕಾಣುವುದು:
ಇದೂ ಕೂಡ ತಾಯಂದಿರು ಮಾಡುವ ಮಹಾ ತಪ್ಪುಗಳಲ್ಲಿ ಒಂದು. ಮಗ ಯಾವುದೇ ತಪ್ಪು ಮಾಡಿದರೂ ಅವನು ಹುಡುಗ ಅಲ್ವ ತೊಂದ್ರೆ ಇಲ್ಲ ಅನ್ನುವವರು ಇದ್ದಾರೆ. ಆದರೆ ಮಗಳು ಅಂತಹ ತಪ್ಪು ಮಾಡಿದರೆ ಗರಿಷ್ಟ ಶಿಕ್ಷೆ ನೀಡುತ್ತಾರೆ. ಉದಾಹರಣೆಗೆ, ಯೌವ್ವನದ ಸಹಜ ಆಸೆ ಆಕಾಂಕ್ಷೆ ಕಾರಣದಿಂದಾಗಿ ಮಗ ಪ್ರೀತಿ ಪ್ರೇಮ ಅಂತ ಬಿದ್ದರೆ ಅದು ಮನೆಯವರಿಗೆ ತಿಳಿದರೆ ಆತನ ಶಿಕ್ಷಣದ ಮೇಲೆ ಯಾವುದೇ ಪರಿಣಾಮ ಬೀಳಲಾರದು. ಆದರೆ ಮಗಳು ಅಂತಹ ತಪ್ಪು ಮಾಡಿದರೆ ಆಕೆಯ ಶಿಕ್ಷಣ ಮೊಟಕು ಗೊಳ್ಳುವ ಸಾಧ್ಯತೆ ಇದೆ. ಕೊನೆಗೆ ಮದುವೆ. ಆದರೆ ಇಂತಹ ಅಸಡ್ಡೆಯಿಂದಾಗಿ ಮಗ ಕೆಟ್ಟ ಚಾಳಿಗೆ ಬೀಳುವ ಸಾಧ್ಯತೆ ಇದೆ.

4. ಗಂಡು ಬಲಶಾಲಿ ಅಂತ ಸಣ್ಣದರಲ್ಲೇ ಬೋಧಿಸುವುದು:
ಮಗ ಸಣ್ಣ ದಿರುವಾಗಲೇ ಹೆಚ್ಚಿನ ತಾಯಂದಿರು ನೀನು ಗಂಡು ನೀನು ಗಟ್ಟಿ ಇರಬೇಕು. ನೀನು ಹೀರೋಯಿಸಂ ತೋರಿಸಬೇಕು ಎನ್ನುವಂತಹ ಫ್ಯಾಂಟಸಿ ಕಥೆಗಳನ್ನೆಲ್ಲ ಹೇಳಿ ಮಕ್ಕಳ ಮನಸ್ಸಿನಲ್ಲಿ ಗಂಡು ಎಂದರೆ ಬಲಶಾಲಿ ಹೆಣ್ಣು ದುರ್ಬಲ ಎನ್ನುವಂತಹ ಭಾವನೆ ಬೆಳೆಸುತ್ತಾರೆ. ಇಂತಹ ಮಕ್ಕಳು ಮುಂದೆ ದೊಡ್ಡವರಾಗಿ ಹೆಣ್ಣನ್ನು ಶೋಷಣೆ ಮಾಡುವುದು. ಫ್ರೆಂಡ್ಸ್ ಸರ್ಕಲ್‌ನಲ್ಲಿ ಜಗಳಕ್ಕೆ ಇಳಿಯುವುದು ಮುಂತಾದ ಹೀರೋ ಪ್ರವೃತ್ತಿ ತೋರಿಸಲು ಮುಂದಾಗುತ್ತಾರೆ.

ಇಲ್ಲಿ ನಾನು ಹೇಳಿದಂತಹ ಅಭಿಪ್ರಾಯ ಬಹುಷಃ ಎಲ್ಲಾ ತಾಯಂದಿರಿಗೆ ಅನ್ವಯಿಸಬೇಕು ಅಂತ ಇಲ್ಲ. ಆದರೆ ಹೆಚ್ಚಿನವರಿಗೆ ಖಂಡಿತಾ ಅನ್ವಯಿಸುತ್ತೆ.

ಬರಹ: ನೌಫಲ್ ಕರೀಮ್

Check Also

ಸ್ವಹಿತಕ್ಕಾಗಿ ಸಮುದಾಯದ ರಾಜಕೀಯ ಹಕ್ಕನ್ನು ಕಡೆಗಣಿಸುತ್ತಿರುವ ಸಮುದಾಯದ ನಾಯಕರು

104ಲೋಕಸಭಾ ಚುನಾವಣೆಯ ದಿನಾಂಕ ಈಗಾಗಲೇ ಘೋಷಣೆಯಾಗಿದ್ದು, ಮಂಗಳೂರು ಲೋಕಸಭಾ ಕ್ಷೇತ್ರವು ರಾಜಕೀಯವಾಗಿ ಕುತೂಹಲ ಮೂಡಿಸ ತೊಡಗಿದೆ. ಈ ಕ್ಷೇತ್ರದಲ್ಲಿ ಮುಸ್ಲಿಂ …

Leave a Reply

Your email address will not be published. Required fields are marked *