Monday , August 26 2019
Breaking News
Home / ರಾಷ್ಟ್ರೀಯ / ಈದ್ ನಮಾಝ್ ನಿರ್ವಹಿಸುವಾಗ ನುಗ್ಗಿದ ಕಾರು: 17 ಮಂದಿಯ ಸ್ಥಿತಿ ಚಿಂತಾಜನಕ

ಈದ್ ನಮಾಝ್ ನಿರ್ವಹಿಸುವಾಗ ನುಗ್ಗಿದ ಕಾರು: 17 ಮಂದಿಯ ಸ್ಥಿತಿ ಚಿಂತಾಜನಕ

ಸಂದೇಶ ಇ-ಮ್ಯಾಗಝಿನ್: ಪೂರ್ವ ದೆಹಲಿಯ ಖುಜೇರಿಯಾದ ಮಸೀದಿಯೊಂದರ ಈದ್‌ಗಾನಲ್ಲಿ ಬುಧವಾರ ಮುಸ್ಲಿಮರು ಈದ್ ನಮಾಝ್ ನಿರ್ವಹಿಸುತ್ತಿದ್ದಾಗ ನುಗ್ಗಿದ ಕಾರೊಂದು 17 ಮಂದಿಯ ಮೇಲೆ ಹರಿದು ಗಾಯಗೊಳಿಸಿದೆ. ತೆರೆದ ಪ್ರದೇಶದಲ್ಲಿ ನಮಾಝ್ ನಿರ್ವಹಿಸುತ್ತಿರುವಾಗ ಪೊಲೀಸ್ ಭದ್ರತೆ ಇತ್ತಾದರೂ ಗುರುತು ಪತ್ತೆಹಚ್ಚಲಾಗದ ಚಾಲಕ ತನ್ನ ಕಾರನ್ನು ನಮಾಝಿಗರ ಮೇಲೆ ಹರಿಸಿ ಗಾಯಗೊಳಿಸಿ ಪರಾರಿಯಾಗಿದ್ದಾನೆ. ಘಟನೆಯಲ್ಲಿ 17 ಮಂದಿ ಪುರುಷರು ತೀವ್ರವಾಗಿ ಗಾಯಗೊಂಡಿದ್ದು, ಗಾಯಾಳುಗಳ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ. ಈ ಘಟನೆಯ ನಂತರ ಸ್ಥಳದಲ್ಲಿ ಮುಸ್ಲಿಮ್ ಸಮುದಾಯದ ಜನರು ಪ್ರತಿಭಟನೆ ನಡೆಸಿ ಆರೋಪಿಯ ಬಂಧನಕ್ಕೆ ಒತ್ತಾಯಿಸಿದ್ದಾರೆ. ಘಟನೆಯ ಹಿಂದೆ ಕೋಮು ದ್ವೇಷದ ಹಿನ್ನೆಲೆಯಿದೆಯಾ ಎಂಬುದು ಇನ್ನಷ್ಟೆ ತಿಳಿದುಬರಬೇಕಾಗಿದೆ.

ಪೊಲೀಸ್ ಆಯುಕ್ತರಾದ ಮೇಘನಾ ಯಾದವ್ ಸುದ್ದಿಗಾರರೊಂದಿಗೆ ಮಾತನಾಡಿ, ಮಸೀದಿಯ ಪಕ್ಕದ ಮೈದಾನದಲ್ಲಿ ನಮಾಝ್ ನಿರ್ವಹಿಸುವಾಗ ಘಟನೆ ಸಂಭವಿಸಿದೆ. 17 ಮಂದಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ. ಆರೋಪಿ ಚಾಲಕನ ವಿಳಾಸ ಪತ್ತೆಹಚ್ಚಲಾಗಿದ್ದು, ಶೀಘ್ರದಲ್ಲೇ ಬಂಧಿಸುತ್ತೇವೆ ಎಂದಿದ್ದಾರೆ.

Check Also

ಕೈರಾನಾ: ಬಿಜೆಪಿ ವರ್ತಕರನ್ನು ಬಹಿಷ್ಕರಿಸುವಂತೆ ಮುಸ್ಲಿಮರನ್ನು ಒತ್ತಾಯಿಸಿದ ಎಸ್ಪಿ ಮುಖಂಡ

000ಸಂದೇಶ ಇ-ಮ್ಯಾಗಝಿನ್: ಉತ್ತರ ಪ್ರದೇಶದ ಕೈರಾನಾದ ಸಮಾಜವಾದಿ ಪಕ್ಷದ (ಎಸ್‌ಪಿ) ಶಾಸಕ ನಹೀದ್ ಹಸನ್ ಅವರು ಈ ಪ್ರದೇಶದಲ್ಲಿ ವಾಸಿಸುವ …

Leave a Reply

Your email address will not be published. Required fields are marked *