Saturday , April 4 2020
Breaking News
Home / ರಿಯಲ್ ಹೀರೋಸ್ / ಅಮೇರಿಕಾದಲ್ಲಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಪ್ರಶಸ್ತಿ ಪಡೆದ 10 ವರ್ಷದ ಹಫೀಜ್-ಎ-ಕುರಾನ್

ಅಮೇರಿಕಾದಲ್ಲಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಪ್ರಶಸ್ತಿ ಪಡೆದ 10 ವರ್ಷದ ಹಫೀಜ್-ಎ-ಕುರಾನ್

ಸಂದೇಶ ಇ-ಮ್ಯಾಗಝಿನ್: ಕ್ಯಾವಿಟಿ ಕ್ರಷರ್ ಅನ್ನು ಕಂಡುಹಿಡಿದಿದ್ದಕ್ಕಾಗಿ 10 ವರ್ಷದ ಪಾಕಿಸ್ತಾನಿ ಮಗು ಮತ್ತು ಅವರ ಕುಟುಂಬದೊಂದಿಗೆ ಅಮೆರಿಕದಲ್ಲಿ ಎಐ ಪ್ರಶಸ್ತಿಯನ್ನು ಗೆದ್ದಿದೆ. ಈ ಸ್ಪರ್ಧೆಯಲ್ಲಿ 7500 ಜನರು ಸ್ಪರ್ಧಿಸಿದರೂ ಅಂತಿಮ ಆರರಲ್ಲಿ ಆಯ್ಕೆಯಾದರು. ಕ್ಯಾವಿಟಿ ಕ್ರಷರ್ ಎನ್ನುವುದು ಮಗುವಿನ ಹಲ್ಲುಜ್ಜುವ ಅಭ್ಯಾಸವನ್ನು ಮೇಲ್ವಿಚಾರಣೆ ಮಾಡಲು ಕೃತಕ ಬುದ್ಧಿಮತ್ತೆಯನ್ನು ಬಳಸುವ ಸಾಧನವಾಗಿದೆ. ಪಾಕಿಸ್ತಾನದ ಕರಾಚಿ ಮೂಲದ 10 ವರ್ಷದ ಮೊಹಮ್ಮದ್ ಯಾಸಿರ್ ಹಫೀಜ್-ಎ-ಕುರಾನ್ ಆಗಿದ್ದು ಬಾಲಕ ತನ್ನ ಪೋಷಕರು ಮತ್ತು ದಿ ಸೈನ್ಸ್ ಕ್ಲಬ್ ಪಾಕಿಸ್ತಾನದ ಸಹಾಯದಿಂದ ಈ ಸಾಧನವನ್ನು ತಯಾರಿಸಲು ಸಾಧ್ಯವಾಯಿತು.

ಅಮೆರಿಕದ ಸಾಂತಾ ಕ್ಲಾರಾದಲ್ಲಿ ನಡೆದ ಮೊದಲ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಈ ಬಾಲಕ ಕುಟುಂಬ ಎಐ ಫ್ಯಾಮಿಲಿ ಚಾಲೆಂಜ್ ಜೂನಿಯರ್ ವಿಭಾಗದಲ್ಲಿ ಭಾಗವಹಿಸಿದರು. ಕೃತಕ ಬುದ್ಧಿಮತ್ತೆಯನ್ನು ಬಳಸಿಕೊಂಡು ಕುಟುಂಬಗಳು ಕಂಡುಹಿಡಿದ ಸಾಧನಗಳು ಸಮುದಾಯಕ್ಕೆ ಹೇಗೆ ಸಹಾಯ ಮಾಡುತ್ತವೆ ಎಂಬುದರ ಆಧಾರದ ಮೇಲೆ ಈ ಆಯ್ಕೆಗಳನ್ನು ಮಾಡಲಾಗಿದೆ.

ನ್ಯೂಸ್ ಚಾನಲ್‌ನೊಂದಿಗೆ ಮಾತನಾಡಿದ ಮೊಹಮ್ಮದ್ ಯಾಸಿರ್, ಮಕ್ಕಳಲ್ಲಿ ಹಲ್ಲಿನ ಕುಳಿಗಳು(ಕ್ಯಾವಿಟಿ) ವಿಶ್ವದಲ್ಲಿ ಸಾಮಾನ್ಯವಾಗಿ ಎಲ್ಲಾ ಮಕ್ಕಳಲ್ಲೂ ಕಾಣುವಂತಹ ಹಲ್ಲಿನ ಕಾಯಿಲೆಯಾಗಿದೆ. ಇದನ್ನು ನಾನು ಅಂತರ್ಜಾಲದಲ್ಲಿ ಬ್ರೌಸ್ ಮಾಡುವಾಗ ಇದರ ಬಗ್ಗೆ ಇನ್ನಷ್ಟು ಮಾಹಿತಿ ಲಭವಾಯಿತು. ಬಳಿಕ ಇದಕ್ಕೆ ಕಾರಣವೇನು ಎಂದು ಹುಡುಕ ತೊಡಗಿದೆ. ವೈದ್ಯರು ಶಿಫಾರಸು ಮಾಡುವ ನಾಲ್ಕು ನಿಮಿಷ ಹಲ್ಲುಜ್ಜುವ ಅಭ್ಯಾಸವನ್ನು ಮಕ್ಕಳು ಬೆಳೆಸಿಕೊಳ್ಳದ ಕಾರಣ ಈ ಕಾಯಿಲೆ ಎಲ್ಲಾ ಮಕ್ಕಳಲ್ಲಿ ಕಾಣಲು ಸಾಧ್ಯ ಎಂಬುದನ್ನು ಕಂಡುಕೊಂಡೆ ಎಂದು ಹೇಳಿದ್ದಾನೆ.

ಈ ಕಾರಣವನ್ನಿಟ್ಟು ಯಾಸಿರ್ ತನ್ನ ಪೋಷಕರ ಸಹಾಯದಿಂದ ಈ ಡಿವೈಸ್ ಸಂಶೋಧನೆ ಮಾಡಿದ್ದಾನೆ. ಈ ಡಿವೈಸ್ ಮಕ್ಕಳು ಹಲ್ಲುಜ್ಜಿದ್ದಾರೋ ಇಲ್ಲವೋ ಅಥವಾ ಎಷ್ಟು ನಿಮಿಷ ಹಲ್ಲುಜ್ಜಿದ್ದಾರೆ ಮುಂತಾದ ಎಲ್ಲಾ ಮಾಹಿತಿಗಳನ್ನು ಪೋಷಕರಿಗೆ ರವಾನಿಸುತ್ತಾ ಇರುತ್ತದೆ.

10 ವರ್ಷದ ಮೊಹಮ್ಮದ್ ಯಾಸಿರ್ ಕುರ್‌ಆನ್ ಹಾಫಿಝ್ ಆಗಿದ್ದು, ತನ್ನ ಕುಟುಂಬದೊಂದಿಗೆ ಅಮೆರಿಕಾದಲ್ಲಿ ನೆಲೆಸಿದ್ದಾನೆ. ಅತೀ ಸಣ್ಣ ಪ್ರಾಯದಲ್ಲಿ ಬಾಲಕನ ಈ ಮಹತ್ವದ ಸಾಧನೆ ಪ್ರಶಂಶೆಗೆ ಪಾತ್ರವಾಗಿದೆ.

ನಿಮ್ಮ ಮಕ್ಕಳಿಗಾಗಿ ಸಮಯ ತೆಗೆದುಕೊಳ್ಳುವುದು ಮತ್ತು ಅವರನ್ನು ಸಕಾರಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಬಹುಶಃ ಈ ದಿನಗಳಲ್ಲಿ ಪೋಷಕರು ಎದುರಿಸುತ್ತಿರುವ ದೊಡ್ಡ ಸವಾಲು. ಮಕ್ಕಳು ಉದಾಹರಣೆಯಿಂದ ಮಾತ್ರ ಕಲಿಯುತ್ತಾರೆ, ಆದ್ದರಿಂದ ಅವರು ಒಂದು ನಿರ್ದಿಷ್ಟ ಮಾರ್ಗವನ್ನು ಅನುಸರಿಸಬೇಕೆಂದು ನೀವು ಬಯಸಿದರೆ ಅವರನ್ನು ಮುನ್ನಡೆಸಿಕೊಳ್ಳಿ. ಮೊಹಮ್ಮದ್ ಯಾಸಿರ್ ಅವರ ಪೋಷಕರು ಇದನ್ನೇ ಮಾಡಿದ್ದಾರೆ. ಮಕ್ಕಳಲ್ಲಿ ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಳ್ಳುವುದಕ್ಕಿಂತ ದೊಡ್ಡ ಕಾರ್ಯ ಯಾವುದಿದೆ ಅಲ್ವ!

Check Also

ನನ್ನಿಂದ ಇಷ್ಟೇ ಸಾಧ್ಯ ಇದರಿಂದ ಆ ಅನಾಥ ಮಕ್ಕಳಿಗೆ ಏನಾದರೂ ಖರೀದಿಸಿಕೊಡು

ಸಂದೇಶ ಇ-ಮ್ಯಾಗಝಿನ್: ನನ್ನನ್ನು ಅಪಾರವಾಗಿ ಕಾಡಿದ ಈ ವ್ಯಕ್ತಿಯ ಬಗ್ಗೆ ಬರೆಯಬೇಕು ಅಂತ ಬಯಸಿದೆ. ಇವರ ಹೆಸರು ಬಾಷಾ, 82 …

Leave a Reply

Your email address will not be published. Required fields are marked *